– ಸಾವು 100 ಕ್ಕೂ ಹೆಚ್ಚಿರಬಹುದೆಂದು ಅಧಿಕಾರಿಗಳ ಶಂಕೆ
– 5 ದಿನ ಕಳೆದರೂ ಮುಗಿಯದ ಕಾರ್ಯಾಚರಣೆ
ಇಸ್ಲಾಮಾಬಾದ್: ಕರಾಚಿಯ ಗುಲ್ ಪ್ಲಾಜಾ (Gul Plaza Mall) ಶಾಪಿಂಗ್ ಮಾಲ್‌ನಲ್ಲಿ ಉಂಟಾದ ಅಗ್ನಿ ಅವಘಡದಲ್ಲಿ ಸಾವನ್ನಪ್ಪಿದವರ ಸಂಖ್ಯೆ 61ಕ್ಕೆ ಏರಿಕೆಯಾಗಿದೆ. ಪರಿಶೀಲನೆ ವೇಳೆ ಒಂದೇ ಮಳಿಗೆಯಲ್ಲಿ 30 ಶವಗಳು ಪತ್ತೆಯಾಗಿದ್ದು, ಒಟ್ಟು ಸಾವು 100 ಮೀರಿರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ.
ಪಾಕಿಸ್ತಾನದ ʻಮನಿ ಕ್ಯಾಪಿಟಲ್ʼ ಅಂತಲೇ ಫೇಮಸ್ ಆಗಿರುವ ಕರಾಚಿ (Karachi) ಸದರ್ ಪ್ರದೇಶದಲ್ಲಿರುವ ಗುಲ್ ಶಾಪಿಂಗ್ ಮಾಲ್‌ನ ನೆಲಮಾಳಿಗೆಯಲ್ಲಿ ಜ.17 ರಂದು ಬೆಂಕಿ ಕಾಣಿಸಿಕೊಂಡಿತ್ತು. ಸಣ್ಣ ಪ್ರಮಾಣದಲ್ಲಿ ಹೊತ್ತಿಕೊಂಡ ಬೆಂಕಿ ಕ್ಷಣಾರ್ಧದಲ್ಲಿ ಇಡೀ ಮಾಲ್‌ಗೆ ವ್ಯಾಪಿಸಿತ್ತು. 1,200 ಮಳಿಗೆಗಳನ್ನು ಹೊಂದಿರುವ ಈ ಬೃಹತ್ ಮಾಲ್‌ನಲ್ಲಿ ಸುಮಾರು 36 ಗಂಟೆಗಳ ಬಳಿಕ ಬೆಂಕಿಯನ್ನ ನಿಯಂತ್ರಣಕ್ಕೆ ತರಲಾಗಿತ್ತು. ಬೆಂಕಿಯನ್ನ ಮುಚ್ಚುವುದಕ್ಕಾಗಿ ಒಳಗಿದ್ದ ಹಲವು ಮಳಿಗೆಗಳ ಶಟ್ಟರ್‌ಗಳನ್ನ ಬಂದ್ ಮಾಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಲೀಟರ್ ಹಾಲು 175 ರೂ., ಕೆಜಿ ಟೊಮೆಟೊ 185 – ಭಾರತಕ್ಕಿಂತ 3 ಪಟ್ಟು ಕುಸಿದ ಕರೆನ್ಸಿ, ವೆನೆಜುವೆಲಾಗೆ ತೈಲ ಸಂಪತ್ತು ಅರೆಯಬಹುದೇ ಮದ್ದು?
ಬೆಂಕಿ ನಿಯಂತ್ರಣಕ್ಕೆ ಬಂದ ಬಳಿಕ ಪರಿಶೀಲಿಸುವ ವೇಳೆ ʻದುಬೈ ಕ್ರಾಕರಿʼ ಎಂಬ ಒಂದೇ ಮಳಿಗೆಯಲ್ಲಿ ಸುಮಾರು 30 ಶವಗಳು ಪತ್ತೆಯಾಗಿವೆ. ಬೆಂಕಿಯಿಂದ ತಪ್ಪಿಸಿಕೊಳ್ಳಲು ಗ್ರಾಹಕರು ಹಾಗೂ ಮಳಿಗೆಯವರು ಶೆಟ್ಟರ್ ಮುಚ್ಚಿಕೊಂಡಿದ್ದಾರೆ. ಈ ವೇಳೆ ದಟ್ಟ ಹೊಗೆ ತುಂಬಿಕೊಂಡು ಸಾವನ್ನಪ್ಪಿರುವ ಸಾಧ್ಯತೆಯಿದೆ ಎಂದು ಶಂಕಿಸಿದ್ದಾರೆ. ಅಲ್ಲದೇ 10 ರಿಂದ 69 ವರ್ಷ ವಯಸ್ಸಿನ ಮಹಿಳೆಯರು, ಮಕ್ಕಳು ಮತ್ತು ಪುರುಷರು ಸೇರಿದಂತೆ 73 ಕಾಣೆಯಾಗಿದ್ದು, ಅವರ ಪಟ್ಟಿಯನ್ನೂ ಬಿಡುಗಡೆ ಗೊಳಿಸಿದ್ದಾರೆ. ಇದನ್ನೂ ಓದಿ: ಕರಾಚಿಯ ಶಾಪಿಂಗ್ ಮಾಲ್ ಧಗಧಗ – 14 ಮಂದಿ ಸಾವು, 60 ಕ್ಕೂ ಹೆಚ್ಚು ಜನ ನಾಪತ್ತೆ!
ಶವಗಳ ಗುರುತು ಪತ್ತೆಯೇ ಕಷ್ಟ
ಮಾಲ್‌ನಲ್ಲಿ ಸದ್ಯ ಶೋಧ ಕಾರ್ಯವನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ಇನ್ನೂ ಶವಾಗಾರಕ್ಕೆ ಈವರೆಗೆ ಕಳುಹಿಸಲಾದ 21 ಶವಗಳು ಸಂಪೂರ್ಣ ಸುಟ್ಟು ಕರಕಲಾಗಿದ್ದು, ಗುರುತಿಸುವುದು ಕಷ್ಟವಾಗಿದೆ ಎಂದು ಡಾ. ಸುಮಯ್ಯ ಸೈಯದ್ ಹೇಳಿದ್ದಾರೆ.
ಕರಾಚಿ ಆಯುಕ್ತ ಮತ್ತು ಸಿಂಧ್ ಸರ್ಕಾರ ರಚಿಸಿದ ತನಿಖಾ ಸಮಿತಿಯ ಸಂಚಾಲಕ ಸೈಯದ್ ಹಸನ್ ನಖ್ವಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಬಳಿಕ ಮಾಲ್‌ನಲ್ಲಿ ಅಗ್ನಿಶಾಮಕ ಸುರಕ್ಷತಾ ವ್ಯವಸ್ಥೆಗಳು ಅಂತಾರಾಷ್ಟ್ರೀಯ ಮಾನದಂಡಗಳನ್ನ ಪೂರೈಸಲಿಲ್ಲ ಅನ್ನೋದು ಗೊತ್ತಾಗಿದೆ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಇದನ್ನೂ ಓದಿ: ಗ್ರೀನ್‌ಲ್ಯಾಂಡ್ ನಮಗೆ ಬೇಕು, ತಕ್ಷಣವೇ ಡೆನ್ಮಾರ್ಕ್ ಮಾತುಕತೆ ನಡೆಸಬೇಕು: ಟ್ರಂಪ್ ಅಬ್ಬರ




