ಬೆಂಗಳೂರು: ಬಿಜೆಪಿ ಆಡಳಿತಯೇತರ ದಕ್ಷಿಣದ ರಾಜ್ಯಗಳಲ್ಲಿ ರಾಜ್ಯಪಾಲ Vs ಸರ್ಕಾರದ ಮಧ್ಯೆ ಸಂಘರ್ಷ ಶುರುವಾಗಿದೆ. ಕೇಂದ್ರದ ವಿರುದ್ಧ ಭಾಷಣ ಮಾಡಲು ಒಪ್ಪದೇ ನಿನ್ನೆಯಷ್ಟೇ ತಮಿಳುನಾಡು, ಕೇರಳ ರಾಜ್ಯಗಳ ರಾಜ್ಯಪಾಲರು ಭಾಷಣ ಬಹಿಷ್ಕರಿಸಿದ ಬೆನ್ನಲ್ಲೇ, ಕರ್ನಾಟಕದಲ್ಲೂ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಭಾಷಣ ಮಾಡಲು ನಿರಾಕರಣೆ ಮಾಡಿದ್ದಾರೆ.
ನಿಗದಿಯಂತೆ ಇಂದು ಬೆಳಗ್ಗೆ 11 ಗಂಟೆಗೆ ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲರು ಭಾಷಣ ಮಾಡಬೇಕಿತ್ತು. ಆದ್ರೆ, ರಾಜ್ಯಪಾಲರ ಭಾಷಣದಲ್ಲಿ ಕೇಂದ್ರ ಸರ್ಕಾರದ ವಿರೋಧಿ ಕಠಿಣ ಶಬ್ಧಗಳನ್ನ ಬಳಸಿ ವಾಗ್ದಾಳಿ ನಡೆಸಿರೋದ್ರಿಂದ ಇಂದು ಭಾಷಣ ಮಾಡಲು ರಾಜ್ಯಪಾಲರು ನಿರಾಕರಿಸಿದ್ದಾರೆ. ವಿಕಸಿತ ಭಾರತ್ ಜಿರಾಮ್‌ಜಿ ಕಾಯ್ದೆ ವಿರೋಧಿಸಿ ರಾಜ್ಯ ಸರ್ಕಾರದ ಶಬ್ಧ ಪ್ರಯೋಗಕ್ಕೆ ರಾಜ್ಯಪಾಲರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಭಾಷಣ ಬದಲಾವಣೆ ಮಾಡಿದರಷ್ಟೇ ನಾನು ಭಾಷಣ ಮಾಡುತ್ತೇನೆ ಎಂಬ ಸಂದೇಶವನ್ನು ಸರ್ಕಾರಕ್ಕೆ ಕಳುಹಿಸಿದ್ದಾರೆ. ಇದನ್ನೂ ಓದಿ: ರಾಜ್ಯಪಾಲರ ಜೊತೆ ಸಂಘರ್ಷಕ್ಕೆ ಸಿದ್ಧ – ಕಾನೂನು ಹೋರಾಟಕ್ಕೆ ಮುಂದಾದ ಸರ್ಕಾರ
ಈ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಅವರು ಕಾನೂನು ಸಚಿವ ಹೆಚ್‌ಕೆ ಪಾಟೀಲ್ ಜೊತೆ ಮಾತುಕತೆ ನಡೆಸಿ ರಾಜ್ಯಪಾಲರ ಭೇಟಿಗೆ ಲೋಕಭವನಕ್ಕೆ ಸರ್ಕಾರದ ನಿಯೋಗ ಕಳುಹಿಸಿದ್ರು. ಕಾನೂನು ಸಚಿವ ಹೆಚ್.ಕೆ ಪಾಟೀಲ್ ನೇತೃತ್ವದ ನಿಯೋಗ ರಾಜ್ಯಪಾಲರನ್ನ ಮನವೊಲಿಕೆಗೆ ಯತ್ನಿಸಿದ್ರು. ಅಡ್ವೋಕೇಟ್ ಜನರಲ್ ಶಶಿಕಿರಣ್ ಶೆಟ್ಟಿ, ಸಿಎಂ ಕಾನೂನು ಸಲಹೆಗಾರ ಪೊನ್ನಣ್ಣ ನಿಯೋಗದಲ್ಲಿದ್ದು ಮನವೊಲಿಕೆ ಮಾಡಲು ಪ್ರಯತ್ನಿಸಿದ್ರು. ಆದ್ರೆ ನಾಳೆ ಜಂಟಿ ಅಧಿವೇಶನ ಭಾಷಣ ಮಾಡುವ ಬಗ್ಗೆ ಏನನ್ನೂ ಖಚಿತಪಡಿಸದೇ ಸರ್ಕಾರದ ನಿಯೋಗವನ್ನ ರಾಜ್ಯಪಾಲರು ಕಳುಹಿಸಿದ್ದಾರೆ ಎನ್ನಲಾಗಿದೆ. ಹಾಗಾದ್ರೆ ಜಂಟಿ ಅಧಿವೇಶವನ್ನುದ್ದೇಶಿಸಿ ಭಾಷಣ ಮಾಡಲು ರಾಜ್ಯಪಾಲರ ನಿರಾಕರಣೆ ಏಕೆ..? ಸರ್ಕಾರದ ವಾದ ಏನು..? ಇಂದಿನ ಅಧಿವೇಶನಕ್ಕೆ ಬರ್ತಾರಾ ಅನ್ನೋದನ್ನ ಕಾದುನೋಡಬೇಕಿದೆ. ಇದನ್ನೂ ಓದಿ: ಅಧಿವೇಶನಕ್ಕೂ ಮುನ್ನವೇ ಸರ್ಕಾರಕ್ಕೆ ಶಾಕ್ – ಭಾಷಣ ನಾನು ಓದಲ್ಲ ಎಂದ ಗೆಹ್ಲೋಟ್
* ರಾಜ್ಯಪಾಲರ ಆಕ್ಷೇಪ ಏನು..?
* ಕೇಂದ್ರ ಸರ್ಕಾರದ ವಿರುದ್ಧ ಶಬ್ಧ ಪ್ರಯೋಗ ಸರಿ ಇಲ್ಲ
* ವಿರೋಧ ಮಾಡುವ ರೀತಿ ದ್ವೇಷ ಭಾವನೆಯಿಂದ ಕೂಡಿದೆ
* ಜಿ ರಾಮ್ ಜಿ ಕಾಯ್ದೆ ವಿರೋಧಿಸಲು ಕಠಿಣ ಶಬ್ಧ ಬಳಕೆ
* 100 ಪ್ಯಾರಾಗಳ ಭಾಷಣದಲ್ಲಿ 11 ಪ್ಯಾರಾಗಳನ್ನ ತೆಗಿಬೇಕು
* ಆಕ್ಷೇಪಾರ್ಹ ಸಾಲುಗಳನ್ನ ತೆಗೆದರೆ ಮಾತ್ರ ಭಾಷಣ ಮಾಡುತ್ತೇನೆ
* ಸರ್ಕಾರದ ವಾದ ಏನು…?
* ರಾಜ್ಯಪಾಲರ ಆಕ್ಷೇಪಗಳನ್ನ ರಾಜ್ಯ ಸರ್ಕಾರ ಒಪ್ಪುವುದಿಲ್ಲ
* ಯಾವುದೇ ಕಾರಣಕ್ಕೂ 11 ಪ್ಯಾರಾಗಳನ್ನ ತೆಗೆಯಲು ಸಾಧ್ಯವಿಲ್ಲ
* ಸರ್ಕಾರ ಸಿದ್ಧಪಡಿಸಿದ ಭಾಷಣವನ್ನ ರಾಜ್ಯಪಾಲರು ಓದಬೇಕು
* ಕೇಂದ್ರ ಸರ್ಕಾರದ ನಿಲುವು, ಕಾಯ್ದೆಗಳನ್ನ ವಿರೋಧಿಸುವ ಹಕ್ಕಿದೆ
* ನಿಯಮಗಳ ಪ್ರಕಾರ ರಾಜ್ಯಪಾಲರು ಭಾಷಣ ನಿರಾಕರಿಸುವಂತಿಲ್ಲ
* ಆರ್ಟಿಕಲ್ 176(1) 163ರ ವಿಧಿ ಪ್ರಕಾರ ಭಾಷಣವನ್ನ ಸರ್ಕಾರ ಸಿದ್ಧಪಡಿಸಲಿದೆ
* ರಾಜ್ಯಪಾಲರ ಮುಂದಿರುವ ಆಯ್ಕೆಗಳೇನು..?
* ಜಂಟಿ ಅಧಿವೇಶನಕ್ಕೆ ಆಗಮಿಸದೇ ಸಂವಿಧಾನ ಬಿಕ್ಕಟ್ಟು ಎದುರಿಸುವುದು
* ಜಂಟಿ ಅಧಿವೇಶನಕ್ಕೆ ಆಗಮಿಸಿ ಭಾಷಣ ಓದದೇ ವಾಪಸ್ ತೆರಳುವುದು
* ಆರಂಭಿಕ ಸಾಲುಗಳನ್ನ ಓದಿ ಇಡೀ ಭಾಷಣವನ್ನ ಮಂಡಿಸಿ ಹೋಗುವುದು
* ಕೇಂದ್ರ ಸರ್ಕಾರದ ವಿರುದ್ಧದ 11 ಸಾಲುಗಳನ್ನ ಓದದೇ ಸ್ಕಿಪ್ ಮಾಡುವುದು


