ದುಬೈ: ಭಾರತದ ನೆಲದಲ್ಲಿ ಟಿ20 ವಿಶ್ವಕಪ್ (T20 World Cup) ಪಂದ್ಯ ಆಡಲು ಒಪ್ಪದ ಬಾಂಗ್ಲಾದೇಶಕ್ಕೆ (Bangladesh) ಐಸಿಸಿ (ICC) ಶಾಕ್ ಕೊಟ್ಟಿದೆ. ಬಾಂಗ್ಲಾ ಬದಲು ಬೇರೊಂದು ತಂಡಕ್ಕೆ ಅವಕಾಶ ಕಲ್ಪಿಸುವ ಬಗ್ಗೆ ಮತದಾನವಾಗಿದ್ದು, ಬಾಂಗ್ಲಾ ವಿರುದ್ಧ 14 ಹಾಗೂ ಪರ 2 ಮತಗಳು ಬಿದ್ದಿವೆ.
ಐಸಿಸಿ ಬೋರ್ಡ್‌ನ ಒಟ್ಟು 16 ಸದಸ್ಯ ದೇಶಗಳ ಪೈಕಿ ಬಾಂಗ್ಲಾದೇಶ ಮತ್ತು ಪಾಕಿಸ್ತಾನ ಮಾತ್ರ ಬಾಂಗ್ಲಾ ಪರವಾಗಿ ಮತವನ್ನು ಹಾಕಿದೆ. ಅಂತಿಮ ನಿರ್ಧಾರ ತಿಳಿಸಲು ಇಂದೇ ಬಾಂಗ್ಲಾಗೆ ಡೆಡ್‌ಲೈನ್ ವಿಧಿಸಲಾಗಿತ್ತು. ಆದರೆ ಈಗ 24 ಗಂಟೆಯ ಗಡುವು ನೀಡಲಾಗಿದೆ. ಗುರುವಾರದ ಒಳಗಡೆ ನಿರ್ಧಾರ ತಿಳಿಸದೇ ಇದ್ದರೆ ಬಾಂಗ್ಲಾದ ಬದಲು ಸ್ಕಾಟ್ಲೆಂಡ್ ಭಾರತಕ್ಕೆ ಆಗಮಿಸಲಿದೆ. ಇದನ್ನೂ ಓದಿ: ಬಾಂಗ್ಲಾಕ್ಕೆ ಫುಲ್ ಸಪೋರ್ಟ್ – ವಿಶ್ವಕಪ್‌ನಿಂದ ಹಿಂದೆ ಸರಿಯುವುದಾಗಿ ಪಾಕಿಸ್ತಾನ ಬೆದರಿಕೆ
ಸುರಕ್ಷತೆ ಮತ್ತು ಭದ್ರತಾ ಕಾರಣದಿಂದಾಗಿ ಬಾಂಗ್ಲಾದೇಶ ಭಾರತಕ್ಕೆ ಪ್ರಯಾಣಿಸಲು ನಿರಾಕರಿಸಿದ್ದನ್ನು ಬೆಂಬಲಿಸಿ ಪಿಸಿಬಿ ಮಂಗಳವಾರ ತಡರಾತ್ರಿ ಐಸಿಸಿಗೆ ಪತ್ರ ಬರೆದಿತ್ತು. ಶ್ರೀಲಂಕಾದಲ್ಲಿ ಆಯೋಜಿಸಲು ಸಾಧ್ಯವಾಗದೇ ಇದ್ದರೆ ಬಾಂಗ್ಲಾದೇಶದ ಪಂದ್ಯಗಳನ್ನು ಪಾಕಿಸ್ಥಾನದಲ್ಲಿ ಆಡಿಸಲು ನಾವು ಸಿದ್ಧ ಇದ್ದೇವೆ ಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಪತ್ರ ಬರೆದಿದ್ದರು. ಇದನ್ನೂ ಓದಿ: ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಐಪಿಎಲ್ ಮ್ಯಾಚ್ – KSCA ಘೋಷಣೆ

