ಬೆಳಗಾವಿ: ಅಕ್ರಮ ತೈಲ ಸಾಗಾಟದ ಮೂಲಕದ ಕೋಟಿ ಕೋಟಿ ತೆರಿಗೆ ವಂಚಿಸುತ್ತಿದ್ದ ಆಯಿಲ್ ಸ್ಮಗ್ಲರ್‌ಗಳನ್ನ ಬೆಳಗಾವಿಯ ಮಾಳಮಾರುತಿ ಠಾಣೆ ಪೊಲೀಸರ (MalaMaruti Police Station) ಹೆಡೆಮುರಿಕಟ್ಟಿದ್ದಾರೆ. ಈ ಬೆನ್ನಲ್ಲೇ ತನಿಖೆ ಚುರುಕುಗೊಳಿಸಿದ್ದು, ತೈಲ ಉತ್ಪನ್ನಗಳ ಸ್ಮಗ್ಲಿಂಗ್ ದಂಧೆಯ ಜಾಲ ಭೇದಿಸಲು 2 ಆಯಾಮಗಳಲ್ಲಿ ತನಿಖೆ ನಡೆಸಲು ನಿರ್ಧರಿಸಿದ್ದಾರೆ.
ಹೌದು. ಗಲ್ಫ್ ದೇಶಗಳಿಂದ ಶಿಪ್ ಮೂಲಕ ದೇಶದ ತೈಲ ನಿಗಮಗಳಿಗೆ ಪೆಟ್ರೋಲಿಯಂ ಪ್ರಾಡಕ್ಟ್ (Petroleum product) ಸಾಗಾಟವಾಗುತ್ತಿದೆ. ಶಿಪ್ ಮಾಲೀಕರು ಈ ಜಾಲದ ಜೊತೆಗೆ ಶಾಮೀಲಾಗಿರುವ ಶಂಕೆಯಡಿ ತನಿಖೆ ನಡೆಸಲು ಪೊಲೀಸರು ಮುಂದಾಗಿದ್ದಾರೆ. ಜೊತೆಗೆ ಗಲ್ಫ್ ದೇಶಗಳ ತೈಲ ಉತ್ಪಾದಕರ ಜೊತೆಗೆ ಸ್ಲಗ್ಲರ್ಸ್ ನೇರ ಸಂಪರ್ಕ ಹೊಂದಿರುವ ಶಂಕೆ ಇದೆ. ಅಲ್ಲಿಂದ ಖಾಸಗಿ ಶಿಪ್‌ಗಳಲ್ಲಿ ಅಕ್ರಮವಾಗಿ ಭಾರತಕ್ಕೆ ತೈಲ ತರುತ್ತಿರುವ ಸಾಧ್ಯತೆ ಇದೆ. ಈ ಎರಡೂ ಆಯಾಮಗಳಲ್ಲಿ ತನಿಖೆ ನಡೆಸಲು ಪೊಲೀಸರು ನಿರ್ಧರಿಸಿದ್ದಾರೆ. ಅದಕ್ಕಾಗಿ ವಿಶೇಷ ತಂಡಗಳನ್ನ ಮುಂಬೈ ಹಾಗೂ ರಾಜಸ್ಥಾನಕ್ಕೆ ರವಾನಿಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಚಿನ್ನದಂತೆ ಗಲ್ಫ್ ರಾಷ್ಟ್ರಗಳಿಂದ ಡೀಸೆಲ್ ಸ್ಮಗ್ಲಿಂಗ್ – ರಾಜ್ಯದಲ್ಲಿ ಅಕ್ರಮ ತೈಲ ಉತ್ಪನ್ನ ಸಾಗಾಟ!
ಇದರೊಂದಿಗೆ ಸ್ಮಗ್ಲರ್ಸ್‌ಗಳು ಪೆಟ್ರೋಲ್ ಬಂಕ್ ಮಾಲೀಕರೊಟ್ಟಿಗೆ ನಿಕಟ ಸಂಪರ್ಕ ಹೊಂದಿದ್ದಾರಾ? ಎಂಬ ಅನುಮಾನಗಳು ದಟ್ಟವಾಗಿದ್ದು ಪೆಟ್ರೋಲಿಯಂ ಉತ್ಪನ್ನಗಳನ್ನ ಕಾಳಸಂತೆಯಲ್ಲಿ ಅರ್ಧ ದರಕ್ಕೆ ಮಾರಾಟ ಮಾಡ್ತಿರುವ ಅನುಮಾನ ಸಹ ಮೂಡಿದೆ.
ಮಹಾರಾಷ್ಟ್ರ ಹಾಗೂ ಕರ್ನಾಟಕದಲ್ಲಿ ಬಹುತೇಕ ಬಂಕ್‌ಗಳಿಗೆ ಡೀಸೆಲ್ ಮಾರಾಟ ಮಾಡುತ್ತಿರುವ ಅನುಮಾನ ಮೂಡಿದೆ. ಹೀಗಾಗಿ ಶೀಘ್ರದಲ್ಲೇ ತನಿಖೆ ನಡೆಸಿ ಅಕ್ರಮ ಜಾಲವನ್ನ ಬಯಲಿಗೆಳೆಯಲು ಪೊಲೀಸ್ ಇಲಾಖೆ ಸಕಲ ತಯಾರಿ ನಡೆಸಿದೆ. ಇದನ್ನೂ ಓದಿ: ಬೆಂಗ್ಳೂರಲ್ಲಿರುವ ಇಸ್ರೇಲ್ ರಾಯಭಾರಿ ಕಚೇರಿಗೆ ಹುಸಿ ಬಾಂಬ್ ಬೆದರಿಕೆ
ಏನಿದು ಪ್ರಕರಣ?
ಗಲ್ಫ್ ರಾಷ್ಟ್ರಗಳಿಂದ ರಾಜ್ಯಕ್ಕೆ ಡೀಸೆಲ್ ಸ್ಮಗ್ಲಿಂಗ್ (Diesel Smuggling) ಮಾಡ್ತಿದ್ದ ಅಕ್ರಮ ಜಾಲವನ್ನ ಬೆಳಗಾವಿಯ ಮಾಳಮಾರುತಿ ಠಾಣೆ ಪೊಲೀಸರ (MalaMaruti Police Station) ತಂಡ ಬಂಧಿಸಿದೆ. ಮುಂಬೈನಿಂದ ಬೆಳಗಾವಿ ಮಾರ್ಗವಾಗಿ ಬೆಂಗಳೂರಿಗೆ ಟ್ಯಾಂಕರ್‌ನಲ್ಲಿ ತೈಲ ಸಾಗಿಸುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಮಾಳಮಾರುತಿನಗರ ಪೊಲೀಸರ ತಂಡ, ಇನ್ಸ್‌ಪೆಕ್ಟರ್ ಬಿ.ಆರ್. ಗಡ್ಡೇಕರ್ ನೇತೃತ್ವದಲ್ಲಿ ದಾಳಿ ನಡೆಸಿದೆ. ದಾಳಿ ವೇಳೆ ದಾಖಲೆಯಿಲ್ಲದೇ ಸಾಗಿಸುತ್ತಿದ್ದ ಪೆಟ್ರೋಲಿಯಂ ಉತ್ಪನ್ನಗಳು ಸಾಗಿಸುತ್ತಿದ್ದದ್ದು ಬೆಳಕಿಗೆ ಬಂದಿದೆ. ಕೂಡಲೇ 17 ಲಕ್ಷ ರೂ. ಮೌಲ್ಯದ 17,000 ಲೀಟರ್ ಡೀಸೆಲ್ ಮತ್ತು ಟ್ಯಾಂಕರ್ ಅನ್ನು ಜಪ್ತಿ ಮಾಡಿಕೊಂಡಿದೆ.
ಈ ಸಂಬಂಧ ತುಮಕೂರು ಟ್ಯಾಂಕರ್ ಮಾಲೀಕನ ವಿಚಾರಣೆ ನಡೆಸಿದಾಗ ಸ್ಮಗ್ಲಿಂಗ್ ಜಾಲದಲ್ಲಿ ಮಹಾರಾಷ್ಟ್ರ, ರಾಜಸ್ಥಾನದವರು ಇರುವುದಾಗಿ ತಿಳಿದುಬಂದಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸ್ಮಗ್ಲರ್‌ಗಳ ಬೆನ್ನುಬಿದ್ದಿದ್ದಾರೆ. ಇದನ್ನೂ ಓದಿ: ಭಾರತ-ಚೀನಾ ನಡುವೆ ಹೊಸ ಸಂಘರ್ಷಕ್ಕೆ ಕಾರಣವಾದ ಶಕ್ಸ್‌ಗಮ್ ಕಣಿವೆ – ಏನಿದು ವಿವಾದ?


