– ಬಾಂಗ್ಲಾ ವಲಸಿಗರಿಗೆ ಕರೆಂಟ್ ಕನೆಕ್ಷನ್ ಕೊಟ್ಟಿದ್ಯಾರು?
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಅಕ್ರಮ ಬಾಂಗ್ಲಾ ವಲಸಿಗರ (Bangladeshi Immigrants) ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದ್ರಿಂದಾಗಿ ರಾಜ್ಯದ ಭದ್ರತೆಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಇದೀಗ ಬೆಂಗಳೂರು ನಗರದಲ್ಲಿಯೇ ಸುಮಾರು 2 ಲಕ್ಷಕ್ಕೂ ಅಧಿಕ ಅಕ್ರಮ ಬಾಂಗ್ಲಾ ಪ್ರಜೆಗಳು ನೆಲೆಸಿರುವ ಶಂಕೆ ಇತ್ತೀಚೆಗಷ್ಟೇ ವ್ಯಕ್ತವಾಗಿತ್ತು. ಈ ಕುರಿತು ವಿಪಕ್ಷಗಳು ಕ್ರಮ ಕೈಗೊಳ್ಳುವಂತೆ ಗೃಹಸಚಿವರನ್ನ ಆಗ್ರಹಿಸಿದ್ದವು. ಇದೀಗ ಪಬ್ಲಿಕ್ ಟಿವಿ ರಿಯಾಲಿಟಿ ಚೆಕ್‌ನಲ್ಲಿ (PUBLiC TV Reality Check) ಅಕ್ರಮ ಬಾಂಗ್ಲಾ ವಲಸಿಗರ ಕಳ್ಳದಾರಿ ಬಟಾಬಯಲಾಗಿದೆ. ಇದು ಅಕ್ರಮ ವಲಸಿಗರಿಗೆ ಬೆಂಗಳೂರು (Bengaluru) ಸ್ವರ್ಗವಾಗ್ತಿದ್ಯಾ? ಅನ್ನೋ ಅನುಮಾನವನ್ನೂ ಮೂಡಿಸಿದೆ.
ಅತ್ತ ಬಾಂಗ್ಲಾದಲ್ಲಿ ಹಿಂದೂಗಳ ಸರಣಿ ಹತ್ಯೆ ನಡೆಯುತ್ತಿದೆ. ಆದ್ರೆ ರಾಜ್ಯ ರಾಜಧಾನಿಯಲ್ಲಿ ನೆಲೆಸಿರುವ ಅಗ್ರಮ ವಲಸಿಗರು ರಾಜರೋಷವಾಗಿಯೇ ಜೀವನ ಮಾಡ್ತಿದ್ದಾರೆ. ಕೆ.ಆರ್ ಪುರಂನ ಶಾಂತಿಲೇಔಟ್‌ನಲ್ಲಿ ಅಕ್ರಮ ಶೆಡ್‌ಗಳು ತಲೆ ಎತ್ತಿರೋದು ಇದಕ್ಕೆ ಸಾಕ್ಷಿಯಾಗಿದೆ.

ವಲಸಿಗರ ರಕ್ಷಣೆಗೆ ಅಸ್ಸಾಂ, ಕೋಲ್ಕತ್ತಾದವ್ರಿಗೂ ಶೆಡ್
ನಕಲಿ ದಾಖಲೆ ಬಳಸಿ ಬಾಂಗ್ಲಾ ವಲಸಿಗರು ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದಾರೆ. ನೂರಾರು ಸಂಖ್ಯೆಯ ವಲಸಿಗರು, ಆಧಾರ್ ಕಾರ್ಡ್, ವಿದ್ಯುತ್ ಸಂಪರ್ಕ ಪಡೆದು ರಾಜರೋಷವಾಗಿ ಸ್ಥಳೀಯರಂತೆ ಜೀವನ ನಡೆಸುತ್ತಿದ್ದಾರೆ. ಬಾಂಗ್ಲಾ ವಲಸಿಗರನ್ನ ರಕ್ಷಿಸಲು ಅಸ್ಸಾಂ, ಕೋಲ್ಕತ್ತಾ ಮೂಲದವರು ಸಹ ಶೆಡ್‌ಗಳನ್ನ ನಿರ್ಮಾಣ ಮಾಡಿಕೊಂಡಿದ್ದಾರೆ ಇದೆಲ್ಲವೂ ಪಬ್ಲಿಕ್ ಟಿವಿ ರಿಯಾಲಿಟಿ ಚೆಕ್‌ನಲ್ಲಿ ಬಯಲಾಗಿದೆ.
3 ಸಾವಿರಕ್ಕೆ ಆಧಾರ್ ಕಾರ್ಡ್
ಅಕ್ರಮ ವಲಸಿಗರ ವಿರುದ್ಧ ರಿಯಾಲಿಟಿ ಚೆಕ್ ನಡೆಸಿದ ಪಬ್ಲಿಕ್ ಟಿವಿ ರೋಚಕ ಸಂಗತಿಗಳನ್ನ ಬಯಲಿಗೆಳೆದಿದೆ. ಢಾಕಾ ಬಳಿಯ ಕೂನ್ಲಾ ಗ್ರಾಮದ ವೃದ್ಧ ಕೇವಲ 3 ಸಾವಿರ ರೂಪಾಯಿಗೆ ಆಧಾರ್ ಕಾರ್ಡ್ ಪಡೆದು ಹೆಂಡತಿ, ಮಕ್ಕಳೊಂದಿಗೆ ವಾಸವಾಗಿರುವುದು ಕಂಡುಬಂದಿದೆ. ಕಳೆದ 15 ವರ್ಷಗಳಿಂದ ಈತ ಬೆಂಗಳೂರಿನಲ್ಲೇ ರಾಜಾರೋಷವಾಗಿ ಜೀವನ ನಡೆಸುತ್ತಿದ್ದಾನೆ. ಎಂ.ಎಸ್ ಪಾಳ್ಯದ ಲಕ್ಷ್ಮಿದೇವಿನಗರದ ವಿಳಾಸಕ್ಕೆ 3 ಸಾವಿರಕ್ಕೆ ಆಧಾರ್ ಪಡೆದುಕೊಂಡಿರುವ ಈತ ಬಾಂಗ್ಲಾದ ವೋಟರ್ ಐಡಿ ಕೂಡ ಹೊಂದಿದ್ದಾನೆ.

ಕೇಸ್ ಸ್ಟಡಿ 1
15 ವರ್ಷಗಳಿಂದ ವಾಸ
ಆಧಾರ್, ವೋಟರ್ ಐಡಿ ಇದೆ
ಸ್ವಲ್ಪ ದಿನ ಟೈಮ್ ಕೊಡಿ ಹೋಗ್ತಿವಿ
ಕೆ.ಆರ್ ಪುರಂನಲ್ಲಿ ಅಕ್ರಮವಾಗಿ ನೆಲೆಸಿರುವ ಬಾಂಗ್ಲಾ ಪ್ರಜೆಯೊಬ್ಬ ಅಚ್ಚುಕಟ್ಟಾಗಿ ಕನ್ನಡ ಮಾತಾಡುತ್ತಾನೆ. ಅಕ್ರಮ ವಾಸ ಹಿನ್ನಲೆ ಜೈಲು ಸೇರಿದ್ದ ಈ ಬಾಂಗ್ಲಾ ಪ್ರಜೆ ಇದೀಗ ಜಾಮೀನಿನ ಮೇಲೆ ಹೊರಗಡೆ ಬಂದಿದ್ದಾನಂತೆ. ಸ್ವಲ್ಪ ದಿನ ಟೈಮ್ ಕೊಡಿ ಬಾಂಗ್ಲಾಕ್ಕೆ ಹೋಗ್ತಿವಿ ಅಂತಿದ್ದಾನೆ.
ಕೇಸ್ ಸ್ಟಡಿ 2
15 ವರ್ಷಗಳಿಂದ ವಾಸ
ಜೈಲು ಸೇರಿದ್ದ ವಲಸಿಗ
ಈನ್ನೂ ಬಾಂಗ್ಲಾದಿಂದ ಬೆಂಗಳೂರಿಗೆ ಹೇಗೆ ಬರ್ತಾರೆ ಅನ್ನೋದನ್ನ ವಲಸಿಗನೊಬ್ಬ ಬಿಚ್ಚಿಟ್ಟಿದ್ದಾನೆ. ಬಾಂಗ್ಲಾ ಟು ಕೋಲ್ಕತ್ತಾ, ಅಲ್ಲಿಂದ ರೈಲು ಮೂಲಕ ಬೆಂಗಳೂರಿಗೆ ಬಂದಿರುವುದಾಗಿ ಹೇಳಿದ್ದಾನೆ. ಈ ಅಕ್ರಮ ವಲಸಿಗನ ಬಳಿ ಯಾವುದೇ ಐಡಿ ಕಾರ್ಡ್ ಇಲ್ಲ. 6 ವರ್ಷದಿಂದ ಭಾರತದಲ್ಲೇ ವಾಸಿಸುತ್ತಿದ್ದಾನಂತೆ.

ಕೇಸ್ ಸ್ಟಡಿ 3
4 ವರ್ಷಗಳಿಂದ ವಾಸ
ಯಾವುದೇ ಐಡಿ ಕಾರ್ಡ್ ಹೊಂದಿಲ್ಲ
7-8 ವರ್ಷದಿಂದ ಇರೋದಾಗಿ ಹೇಳಿದ ವಲಸಿಗ!
ಸರ್ಕಾರದ ನಿರ್ಲಕ್ಷ್ಯದಿಂದಾಗಿ ಬಾಂಗ್ಲಾ ವಲಸಿಗರಿಗೆ ಹೇಳೋರಿಲ್ಲ.. ಕೇಳೋರಿಲ್ಲ ಎಂಬಂತಾಗಿದೆ. 7-8 ವರ್ಷದಿಂದ ಇರೋದಾಗಿ ಮತ್ತೊಬ್ಬ ವಲಸಿಗ ಹೇಳಿದ್ದಾನೆ. ಈತನ ಬಳಿ ಯಾವುದೇ ಆಧಾರ್ ಕಾರ್ಡ್, ರೇಷನ್ ಕಾರ್ಡ್ ಇಲ್ಲ ಎಂದಿದ್ದಾನೆ ಎಲ್ಲಾ ಪ್ರಶ್ನೆಗಳಿಗೂ ಈತ ಬಾಂಗ್ಲಾ ಭಾಷೆಯಲ್ಲೇ ಉತ್ತರ ಕೊಡ್ತಿದ್ದಾನೆ.
ಕೇಸ್ ಸ್ಟಡಿ 4
7-8 ವರ್ಷದಿಂದ ವಾಸ
ಯಾವುದೇ ದಾಖಲಾತಿ ಇಲ್ಲ
ಮತ್ತೊಂದು ಕೇಸ್‌ನಲ್ಲಿ ಪಬ್ಲಿಕ್ ಟಿವಿ ಕ್ಯಾಮರಾ ಕಂಡು ಬಾಂಗ್ಲಾ ಕುಟುಂಬ ಕಾಲ್ಕಿತ್ತಿದೆ. ಅಪ್ಪ ಅಮ್ಮ ಮೂವರು ತಂಗಿಯರ ಜೊತೆ 13 ವರ್ಷದ ಬಾಲಕಿ ವಾಸವಾಗಿದ್ದು ಬಾಂಗ್ಲಾದಿಂದ ಬಂದಿರೋದಾಗಿ ಬಾಲಕಿ ಹೇಳಿದ್ದಾಳೆ. ಮೊದಲು ಬೆಳ್ಳಂದೂರು ಭಾಗದಲ್ಲಿದ್ದ ಬಗ್ಗೆ ಬಾಲಕಿ ಮಾಹಿತಿ ನೀಡುತ್ತಿದ್ದಾಳೆ. ಶಾಲೆಗೂ ಹೋಗ್ತಿದ್ದೆ ಎಂದಿದ್ದಾಳೆ. ವಾಪಸ್ ಬಾಂಗ್ಲಾದೇಶಕ್ಕೆ ಹೋಗಿ ಎಂದಿದ್ದಕ್ಕೆ ಬಾಂಗ್ಲಾ ವಲಸಿಗರಿಂದ ಪಶ್ಚಿಮ ಬಂಗಾಳ ವ್ಯಕ್ತಿ ಮೇಲೆ ಹಲ್ಲೆ ಮಾಡಲಾಗಿದೆ. ಪಶ್ಚಿಮ ಬಂಗಾಳ ವ್ಯಕ್ತಿಯ ಕತ್ತು ಕೈ ಕಾಲಿಗೆ ಗಾಯವಾಗಿದೆ.
ಕೇಸ್ ಸ್ಟಡಿ 5
ಅಪ್ಪ ಅಮ್ಮ ಮೂವರು ತಂಗಿಯರ ಜೊತೆ ವಾಸ
ಶಾಲೆಗೂ ಹೋಗ್ತಿದ್ದೆ ಬಾಂಗ್ಲಾ ಬಾಲಕಿ
ಶೆಡ್‌ಗಳಲ್ಲಿ ಟಿವಿ, ಫ್ರಿಡ್ಜ್, ಫ್ಯಾನ್, ಎಲ್ಲ ಸೌಲಭ್ಯ
ಕೆ.ಆರ್ ಪುರಂನಲ್ಲಿ ಅಕ್ರಮ ವಾಸಿಗಳಿಗೆ ಅಕ್ರಮವಾಗಿ ವಿದ್ಯುತ್ ಸಂಪರ್ಕ ನೀಡಲಾಗುತ್ತಿದೆ. ಅಕ್ರಮ ನಿವಾಸಿಗಳ ಶೆಡ್‌ಗಳಲ್ಲಿ ಟಿವಿ, ಫ್ರಿಡ್ಜ್, ಫ್ಯಾನ್, ಎಲ್ಲ ಸೌಲಭ್ಯ ಒದಗಿಸಲಾಗಿದೆ. ಇದ್ರಿಂದಾಗಿ ಅಕ್ರಮ ಬಾಂಗ್ಲಾ ವಲಸಿಗರಿಗೆ ಕರೆಂಟ್ ಕನೆಕ್ಷನ್ ಕೊಟ್ಟಿದ್ಯಾರು? 1 ತಿಂಗಳು ಬಿಲ್ ಕಟ್ಟದಿದ್ರೆ ಕರೆಂಟ್ ಕಟ್ ಮಾಡೋ ಬೆಸ್ಕಾಂಗೆ ಇದು ಗೊತ್ತಿಲ್ವಾ..? ಅನ್ನೋ ಪ್ರಶ್ನೆಗಳು ಮೂಡಿವೆ.
ಅಕ್ರಮ ವಾಸಿಗಳನ್ನ ವಶಕ್ಕೆ ಪಡೆದ ಕೆ.ಆರ್ ಪುರ ಪೊಲೀಸ್ರು
ಹೌದು. ಅಕ್ರಮ ವಲಸಿಗರ ಶೆಡ್‌ಗಳ ಬಳಿಕ ʻಪಬ್ಲಿಕ್ ಟಿವಿʼ ಕ್ಯಾಮೆರಾ ಹೋಗುತ್ತಿದ್ದಂತೆ ಎಚ್ಚೆತ್ತ ಪೊಲೀಸರು ಕಾರ್ಯಾಚರಣೆಗೆ ಇಳಿದಿದ್ದಾರೆ. ಅಕ್ರಮ ವಾಸಿಗಳನ್ನ ವಶಕ್ಕೆ ಪಡೆದು ಹೊಯ್ಸಳ ವಾಹನದಲ್ಲಿ ಕರೆದೊಯ್ದಿದ್ದಾರೆ. ಒಟ್ನಲ್ಲಿ ಸರ್ಕಾರದ ನಿರ್ಲಕ್ಷ್ಯದಿಂದಾಗಿ ನೂರಾರು ಬಾಂಗ್ಲಾ ವಲಸಿಗರು ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಯೂರಿದ್ದಾರೆ. ಇನ್ನಾದ್ರೂ ಸರ್ಕಾರ ಈ ಬಗ್ಗೆ ಗಮನಹಿಸುತ್ತಾ ಕಾದು ನೋಡಬೇಕಿದೆ.

