ಬೆಂಗಳೂರು: ಡಿ.ಕೆ.ಶಿವಕುಮಾರ್ (DK Shivakumar) ಮೊದಲಿಂದಲೂ ಪಕ್ಷದ ಶಿಸ್ತಿನ ಸಿಪಾಯಿ.ಪಕ್ಷದ ಹಿತದೃಷ್ಟಿಯಿಂದ ಶಾಸಕರ ಹಿತದೃಷ್ಟಿಯಿಂದ ಎಲ್ಲವನ್ನೂ ತಾಳ್ಮೆಯಿಂದ ನಡೆಸುತ್ತಿದ್ದಾರೆ. ಪಕ್ಷದ ಆದೇಶಕ್ಕೋಸ್ಕರ ಕಾಯುತ್ತಿದ್ದಾರೆ ಎಂದು ಮಾಜಿ ಸಂಸದ ಡಿಕೆ ಸುರೇಶ್ (DK Suresh) ಹೇಳಿದ್ದಾರೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅಧಿಕಾರ ಯಾರಿಗೂ ಅಷ್ಟು ಸುಲಭವಾಗಿ ಬರುವುದಿಲ್ಲ. ಸಿಎಂ ಸ್ಥಾನ ಅಷ್ಟು ಸುಲಭವಾಗಿ ಸಿಗುವ ಹುದ್ದೆ ಅಲ್ಲ. ನಮ್ಮ ಗುರಿ ಇರುವುದು 2028ರ ಚುನಾವಣೆ. ಪಕ್ಷದ ತೀರ್ಮಾನಕ್ಕೋಸ್ಕರ ಶಾಸಕರ ಹಿತದೃಷ್ಟಿಯಿಂದ ನೊಂದ ಕಾರ್ಯಕರ್ತರ ಹಿತದೃಷ್ಟಿಯಿಂದ ಸಹನೆಯಿಂದ ಕಾಯುತ್ತಿದ್ದಾರೆ. ನಾನು ಮೊದಲೇ ಹೇಳಿದ್ದೆ ಡಿ.ಕೆ.ಶಿವಕುಮಾರ್ ಅವರ ಹಣೆ ಬರಹದಲ್ಲಿ ಸಿಎಂ ಆಗಬೇಕು ಎಂದು ಬರೆದಿದ್ದರೆ ಆಗುತ್ತಾರೆ ಅಂತ. ಈಗಲೂ ಅದನ್ನೇ ಹೇಳುತ್ತೇನೆ. ಡಿ.ಕೆ.ಶಿವಕುಮಾರ್ ಪಕ್ಷ ನಿಷ್ಠ ವ್ಯಕ್ತಿ. ಕೆಲವರು ವ್ಯಕ್ತಿ ನಿಷ್ಠರು ಇರುತ್ತಾರೆ, ಇನ್ನೂ ಕೆಲವರು ಅಧಿಕಾರಕ್ಕಾಗಿ ಇರುತ್ತಾರೆ. ಈಗ ಅನಿವಾರ್ಯವಾಗಿ ಸೆಷನ್ ಬಂದಿದೆ. ಇವತ್ತು ಬಿಜೆಪಿ ಕೇಂದ್ರ ಸರ್ಕಾರ ರಾಷ್ಟ್ರದಲ್ಲಿ ಉದ್ಯೋಗ ಖಾತ್ರಿ ಯೋಜನೆಯ ಹಕ್ಕು ಕಿತ್ತುಕೊಂಡಿದೆ ಎಂದರು. ಇದನ್ನೂ ಓದಿ: ನಾನು ಬಿಜೆಪಿ ಕಾರ್ಯಕರ್ತ, ನಿತಿನ್ ನನ್ನ ಬಾಸ್: ನರೇಂದ್ರ ಮೋದಿ
ಕಾಂಗ್ರೆಸ್‌ಗೆ ಎಲ್ಲಾ ವರ್ಗದ ಮತಗಳು ಸಹ ಬೇಕು. ಒಕ್ಕಲಿಗರು, ಪರಿಶಿಷ್ಟ ಪಂಗಡ, ಪರಿಶಿಷ್ಟ ಜಾತಿ ಸೇರಿದಂತೆ ಎಲ್ಲರ ಮತಗಳು ಕಾಂಗ್ರೆಸ್‌ಗೆ ಬೇಕಾಗಿದೆ. ಡಿ.ಕೆ.ಶಿವಕುಮಾರ್ ಪಕ್ಷಕ್ಕೆ ನಿಷ್ಠರಾಗಿದ್ದಾರೆ. ಡಿಕೆಶಿವಕುಮಾರ್ ಅವರು ಎಲ್ಲ ನೋವುಗಳಲ್ಲೂ ಪಕ್ಷದ ಜೊತೆ ಇದ್ದಾರೆ. ಪಂಚಾಯತ್ ಚೇರಮನ್‌ಗಳೇ ಅಧಿಕಾರ ಬಿಡಲ್ಲ, ಅಣ್ಣ ಇನ್ವಿಟೇಷನ್‌ಗೆ ಹೆಸರು ಹಾಕಿಸಿದ್ದೀನಿ ಅಂತಾರೆ, ಮಾರ್ಚ್ ಕಳೆಯಲಿ ಅಂತಾರೆ ಕುರ್ಚಿಯನ್ನು ಅಷ್ಟು ಸುಲಭವಾಗಿ ಬಿಡಲ್ಲ. ರಾಜಕಾರಣದಲ್ಲಿ ನಂಬಿಕೆಗಳು ತುಂಬಾ ಮುಖ್ಯವಾಗುತ್ತದೆ. ರಾಹುಲ್ ಗಾಂಧಿ ರಾಷ್ಟ್ರೀಯ ಅಧ್ಯಕ್ಷರು. ಅವರು ಎಲ್ಲ ರೀತಿಯಲ್ಲೂ ಯೋಚನೆ ಮಾಡುತ್ತಾರೆ. ಎಲ್ಲರನ್ನೂ ಒಪ್ಪಿಸಿ ರಾಹುಲ್ ಗಾಂಧಿ ನಿರ್ಧಾರ ತೆಗೆದುಕೊಳ್ಳುತ್ತಾರೆ. ಅಧಿಕಾರನೂ ಶಾಶ್ವತ ಅಲ್ಲ, ತಾಳ್ಮೆನೂ ಶಾಶ್ವತ ಅಲ್ಲ ಎಂದು ನುಡಿದರು. ಇದನ್ನೂ ಓದಿ: ದಾವೋಸ್ ಸಮಾವೇಶ | ಕೋಕಾ – ಕೋಲಾದ 25,760 ಕೋಟಿ ಹೂಡಿಕೆಯ ಬಹುಪಾಲು ರಾಜ್ಯಕ್ಕೆ ಸೆಳೆಯಲು ಎಂ.ಬಿ. ಪಾಟೀಲ್ ಯತ್ನ
ಕುಮಾರಸ್ವಾಮಿ ರಾಜ್ಯ ರಾಜಕಾರಣಕ್ಕೆ ಬರುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನಾನು ಸ್ವಾಗತ ಮಾಡುತ್ತೇನೆ. ನಾವು ಯಾರು ಹೋಗು ಎಂದಿಲ್ಲ, ಬರೋಕೆ ಬೇಡ ಎನ್ನಲ್ಲ. ಅವರ ಪಕ್ಷಕ್ಕೆ ಅವರೇ ಅಧಿಪತಿ. ಅದರಿಂದ ಯಾವುದೇ ವ್ಯತ್ಯಾಸ ಇಲ್ಲ. ಇನ್ನೂ ಎರಡೂವರೆ ವರ್ಷಗಳ ಸಮಯವಿದೆ ಎಂದರು. 29ಕ್ಕೆ ಸಿಎಂ ಡಿಸಿಎಂ ಬುಲಾವ್ ವಿಚಾರವಾಗಿ ಮಾತನಾಡಿ, 29ಕ್ಕೆ ಅಧಿವೇಶನ ಇದೆಯಲ್ಲ. 31 ರವರೆಗೆ ಅಧಿವೇಶನ ಇದೆ. ಕಡೆಯ 3 ದಿನ ನರೇಗಾ ಬಗ್ಗೆ ಚರ್ಚೆ ಇದೆ. 29ಕ್ಕೆ ಅಧಿವೇಶನ ಇದೆ ಎಂದು ಹೇಳಿದರು. ಇದನ್ನೂ ಓದಿ: ದಾರಿ ಬಿಡದಿದ್ದಕ್ಕೆ ಬಸ್ ಚಾಲಕನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ
ಸ್ಥಳೀಯ ಚುನಾವಣೆಗೆ ಬ್ಯಾಲೇಟ್ ಪೇಪರ್ ಬಳಕೆ ವಿಚಾರದ ಕುರಿತು ಮಾತನಾಡಿದ ಅವರು, ಅದು ಅವಶ್ಯಕತೆ ಇಲ್ಲ ಅನ್ನಿಸುತ್ತದೆ. ಬ್ಯಾಲೆಟ್ ಮತ್ತೆ ತರೋದು ಬೇಡ. ಇದಾಗಲೇ ಒಂದು ಹೆಜ್ಜೆ ಮುಂದೆ ಹೋಗಿದ್ದೇವೆ. ಸ್ಥಳೀಯ ಸಂಸ್ಥೆ ಚುನಾವಣೆ ಇದೆಲ್ಲ ಕರ್ನಾಟಕ ಸರ್ಕಾರದ ವ್ಯಾಪ್ತಿಯಲ್ಲೇ ಇರುತ್ತೆ ಅಲ್ವ ಎಂದು ತಿಳಿಸಿದರು. ಇದನ್ನೂ ಓದಿ: ರಾಯರನ್ನ ಅಪಮಾನ ಮಾಡಿದವರು ಉದ್ಧಾರ ಆದ ಇತಿಹಾಸವಿಲ್ಲ – ಸಿಎಂ ನಡೆಗೆ ಜಗ್ಗೇಶ್ ಖಂಡನೆ
ಡಿಜಿಪಿ ರಾಮಚಂದ್ರ ರಾವ್ ಅಶ್ಲೀಲ ವೀಡಿಯೋ ವೈರಲ್ ಪ್ರಕರಣದ ಕುರಿತು ಪ್ರತಿಕ್ರಿಯಿಸಿ, ಅದನ್ನ ಸಿಎಂ ಕೇಳಬೇಕು. ಗೃಹ ಮಂತ್ರಿಗಳಿಗೆ ಆತ್ಮೀಯರು ಅಂತಾ ಕೇಳಿದ್ದೇನೆ. ಆತ್ಮೀಯರು ಅನ್ನೋದಕ್ಕಿಂದ ಶಿಸ್ತು ಮುಖ್ಯ. ಕರ್ನಾಟಕ ಪೊಲೀಸ್ ಅತ್ಯಂತ ದಕ್ಷ ಇಲಾಖೆ. ಆ ಘನತೆಗೆ ಯಾವುದೇ ಧಕ್ಕೆ ತರದಂತೆ ಸೂಕ್ತವಾದ ಕ್ರಮವನ್ನು ತೆಗೆದುಕೊಳ್ಳುತ್ತಾರೆ ಎಂದರು. ಇದನ್ನೂ ಓದಿ: ಅಪರಿಚಿತರೊಂದಿಗೆ ಮಾತಾಡಲ್ಲ ಎಂದಿದ್ದಕೆ ಬಾಲಕಿ ಮೇಲೆ ಆಸಿಡ್ ದಾಳಿ – ಫೋಟೋಗ್ರಾಫರ್ ಅರೆಸ್ಟ್


