ಬೆಂಗಳೂರು: ನಟಿ ರನ್ಯಾರಾವ್ (Ranya Rao) ಚಿನ್ನ ಕಳ್ಳ ಸಾಗಾಣಿಕೆ ಪ್ರಕರಣದಲ್ಲಿ ಸದ್ದು ಮಾಡಿದ್ದ ಡಿಜಿಪಿ ರಾಮಚಂದ್ರರಾವ್ (DGP Ramachandra Rao) 10 ದಿನಗಳ ಕಡ್ಡಾಯ ರಜೆಯ ಮೇಲೆ ತೆರಳಿದ್ದಾರೆ.
ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಡಿಜಿಪಿ ರಾಮಚಂದ್ರರಾವ್ ಕಚೇರಿಯಲ್ಲೇ ಮಹಿಳೆಯರ ಜೊತೆ ರಾಸಲೀಲೆಯಲ್ಲಿ ತೊಡಗಿರುವ ವಿಡಿಯೋಗಳು ವೈರಲ್ ಆಗಿವೆ. ಈ ವಿಡಿಯೋ ಜೊತೆ ಆಡಿಯೋ ಕೂಡ ವೈರಲ್ ಆಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ರಾಮಚಂದ್ರ ರಾವ್ ಗೊಂದಲಕಾರಿ ಹೇಳಿಕೆ ಕೊಟ್ಟಿದ್ದಾರೆ. ಇದನ್ನೂ ಓದಿ: ತಿರುಚಿದ ವಿಡಿಯೋ ಎಂದ ಡಿಜಿಪಿ – ಭೇಟಿಗೆ ಅನುಮತಿ ನೀಡದ ಪರಮೇಶ್ವರ್
ನನಗೆ ಇದು ಗೊತ್ತಿಲ್ಲ, ಯಾರೋ ಎಐ ಮೂಲಕ ಷಡ್ಯಂತ್ರ ಮಾಡಿದ್ದಾರೆ. ಕಾನೂನು ಹೋರಾಟ ಮಾಡುತ್ತೇನೆ ಎಂದು ಹೇಳಿದರೆ ಮತ್ತೊಂದು ಕಡೆ 8 ವರ್ಷಗಳ ಹಿಂದಿನ ಹಳೇವಿಡಿಯೋ ಎಂದು ಹೇಳಿದ್ದಾರೆ. ಹೀಗಾಗಿ ಡಿಜಿಪಿ ಹೇಳಿಕೆ ಸಾಕಷ್ಟು ಅನುಮಾನಕ್ಕೆ ಎಡೆಮಾಡಿದೆ.
ವಿಡಿಯೋ ಹೊರ ಬೀಳುತ್ತಿದ್ದಂತೆ ಗೃಹ ಸಚಿವ ಪರಮೇಶ್ವರ್ ಭೇಟಿಗೆ ಯತ್ನಿಸಿದರು. ಆದರೆ ಮನೆಯಲ್ಲಿದ್ದರೂ ಪರಮೇಶ್ವರ್ ಅವರು ರಾಮಚಂದ್ರ ರಾವ್ ಅವರ ಭೇಟಿಗೆ ಅವಕಾಶ ನೀಡಲಿಲ್ಲ. ಹೀಗಾಗಿ ರಾಮಚಂದ್ರರಾವ್ 10 ದಿನ ಕಡ್ಡಾಯ ರಜೆ ಮೇಲೆ ತೆರಳಿದ್ದಾರೆ. ಇದನ್ನೂ ಓದಿ: ಎಸ್‌ಎಸ್‌ಎಲ್‌ಸಿಯಲ್ಲಿ ಪ್ರಶ್ನೆಪತ್ರಿಕೆಗೆ ಸಿಗುತ್ತಾ ಆಯ್ಕೆ?

