ಬೆಂಗಳೂರು: ಎಸ್ಎಸ್ಎಲ್ಸಿ (SSLC) ಪಬ್ಲಿಕ್ ಪರೀಕ್ಷೆಯಲ್ಲಿ (Public Exam) ಗಣಿತ ಪ್ರಶ್ನೆ ಪತ್ರಿಕೆ ಆಯ್ಕೆ ಮಾಡಿಕೊಳ್ಳುವ ಅವಕಾಶ ವಿದ್ಯಾರ್ಥಿಗಳಿಗೆ ಕೊಡಿ ಅಂತ ಶಿಕ್ಷಣ ಸಚಿವ ಮಧು ಬಂಗಾರಪ್ಪಗೆ ಖಾಸಗಿ ಶಿಕ್ಷಣ ಸಂಸ್ಥೆಗಳು ಮನವಿ ಮಾಡಿವೆ.
ಎಲ್ಲಾ ವಿದ್ಯಾರ್ಥಿಗಳಿಗೆ ಉತ್ಕೃಷ್ಟವಾಗಿ ಗಣಿತ (Mathematics) ಕಲಿಯಲು ಸಾಧ್ಯವಿಲ್ಲ. ಹೀಗಾಗಿ ಸಿಬಿಎಸ್ಇ ಮಾದರಿಯಲ್ಲಿ ಪ್ರಶ್ನೆ ಪತ್ರಿಕೆ ಆಯ್ಕೆ ಮಾಡಿಕೊಳ್ಳುವ ಅವಕಾಶ ವಿದ್ಯಾರ್ಥಿಗಳಿಗೆ ಕೊಡಬೇಕು ಎಂದು ಹೇಳಿವೆ.
ಖಾಸಗಿ ಶಾಲೆಗಳ ಮನವಿ ಏನು?
ಸಿಬಿಎಸ್ಇ ಮಾದರಿಯಲ್ಲಿ 2 ಹಂತದಲ್ಲಿ ಗಣಿತ ಪ್ರಶ್ನೆ ಪತ್ರಿಕೆ ಸಿದ್ದವಾಗಬೇಕು. ಉತ್ಕೃಷ್ಟ ಪ್ರಶ್ನೆ ಪತ್ರಿಕೆ ಮತ್ತು ಸಾಧಾರಣ ಪ್ರಶ್ನೆ ಪತ್ರಿಕೆ ಎರಡನ್ನು ಶಿಕ್ಷಣ ಇಲಾಖೆ ಸಿದ್ಧಪಡಿಸಬೇಕು. ಇದನ್ನೂ ಓದಿ: ಆಪರೇಷನ್ ತ್ರಾಶಿ | 12,000 ಅಡಿ ಎತ್ತರದಲ್ಲಿದ್ದ ಜೈಶ್ ಉಗ್ರರ ಅಡಗು ತಾಣ ಪತ್ತೆ

