ಮಡಿಕೇರಿ: ಅಕ್ರಮವಾಗಿ ಗೋಮಾಂಸ (Beef) ಸಾಗಾಟ ಮಾಡುತ್ತಿದ್ದ ಆರೋಪಿಯನ್ನ ಬಂಧಿಸುವಲ್ಲಿ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಯಶಸ್ವಿಯಾಗಿದ್ದಾರೆ
ಹುಣಸೂರಿನ ರತ್ನಪುರಿ ನಿವಾಸಿ ಜಾಹಿದ್ ಅಹ್ಮದ್ (47) ಬಂಧಿತ ಆರೋಪಿ. ಜಾಹಿದ್ ಆಲ್ಟೊ-800 ಕಾರಿನಲ್ಲಿ (ಸಂಖ್ಯೆ KA02 MM 7747) ಅಕ್ರಮವಾಗಿ ಗೋಮಾಂಸ ತುಂಬಿಸಿಕೊಂಡು ಕಾರಿನಲ್ಲಿ ಗೋಣಿಕೊಪ್ಪಲಿನಿಂದ ವಿರಾಜಪೇಟೆ ಕಡೆಗೆ ಬರುತ್ತಿದ್ದ. ಈ ಬಗ್ಗೆ ಖಚಿತ ಮಾಹಿತಿ ಪಡೆದ ವಿರಾಜಪೇಟೆ ಗ್ರಾಮಾಂತರ ಪೊಲೀಸರು (Virajpet Rural Police) ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಪ್ರಿಯಾಂಕ್ ಇಲಾಖೆಯಲ್ಲಿ ಅಕ್ರಮ, ಹಣಕಾಸು ಆಯೋಗದ 5.5 ಸಾವಿರ ಕೋಟಿ ಅವ್ಯವಹಾರ: ಪಿ ರಾಜೀವ್

ಕಾರು ಪರಿಶೀಲಿಸಿದಾಗ ಕಾರಿನಲ್ಲಿ 150 ಕೆಜಿ ಗೋಮಾಂಸ ಪತ್ತೆಯಾಗಿದ್ದು, ಇದನ್ನ ವಿರಾಜಪೇಟೆ ವ್ಯಾಪ್ತಿಯಲ್ಲಿ ಮಾರಾಟ ಮಾಡಲು ತರುತ್ತಿದ್ದ ಎನ್ನಲಾಗಿದೆ. ಈತ ಹುಣಸೂರಿನ ರತ್ನಪುರಿ ಯಿಂದ ಮಾಂಸವನ್ನ ತಂದಿರೋದಾಗಿ ಪೊಲೀಸರಿಗೆ ಹೇಳಿದ್ದಾನೆ.
ಆರೋಪಿಯನ್ನ ಬಂಧಿಸಿ ಪ್ರಕರಣ ದಾಖಲಿಸಿರುವ ಪೊಲೀಸರು, ಗೋಮಾಂಸ ಸಾಗಾಟಕ್ಕೆ ಬಳಸಿದ್ದ ಕಾರನ್ನೂ ಜಪ್ತಿ ಮಾಡಿದ್ದಾರೆ. ಇದನ್ನೂ ಓದಿ: ಆಪರೇಷನ್ ತ್ರಾಶಿ | 12,000 ಅಡಿ ಎತ್ತರದಲ್ಲಿದ್ದ ಜೈಶ್ ಉಗ್ರರ ಅಡಗು ತಾಣ ಪತ್ತೆ

