ಬಾಗಲಕೋಟೆ: ನಾನು ಏನು ತಪ್ಪು ಮಾಡಿದ್ದೇನೆ. ನಾನು ದುಡ್ಡು ಕೇಳಿದ್ದೇನಾ? ನನ್ನ ವಿರುದ್ಧ ದೊಡ್ಡ ಕುತಂತ್ರ ನಡೆಯುತ್ತಿದೆ ಎಂದು ಅಬಕಾರಿ ಸಚಿವ ಆರ್‌ಬಿ ತಿಮ್ಮಾಪುರ (RB Timmapur) ಹೇಳಿದ್ದಾರೆ.
ಅಬಕಾರಿ ಇಲಾಖೆಯಲ್ಲಿ (Excise Department) ಸಿಎಲ್ – 7 ಲೈಸೆನ್ಸ್ ನೀಡಲು ಅಬಕಾರಿ ಸಚಿವ ಆರ್‌ಬಿ ತಿಮ್ಮಾಪುರ ಹಾಗೂ ಅವರ ಪುತ್ರ, ಅಧಿಕಾರಿಗಳು ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂಬ ಆಡಿಯೋ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನನ್ನ ಮಗ ಇದರಲ್ಲಿ ಯಾಕೆ ಬರುತ್ತಾನೆ? ಆಡಿಯೋದಲ್ಲಿ ಯಾರ್ಯಾರ ಹೆಸರನ್ನು ಹೇಳುತ್ತಾರೆ. ನನಗೆ ಸಾಕಾಗಿದ್ದು, ನಾನು ಕಾನೂನು ಹೋರಾಟ ನಡೆಸುತ್ತೇನ ಎಂದರು. ಇದನ್ನೂ ಓದಿ: ಅಬಕಾರಿ ಇಲಾಖೆ ಕರ್ಮಕಾಂಡ | ಸನ್ನದು ಪಡೆಯಲು 2.30 ಕೋಟಿ ಬೇಡಿಕೆ ಆರೋಪದ ಆಡಿಯೋ ವೈರಲ್ – ಹೆಚ್‌ಟಿ ಮಂಜು ದೂರು
ನನ್ನ ತೇಜೋವಧೆ ಮಾಡುವ ಕೆಲಸ ನಡೆದಿದೆ. ಕಾನೂನು ಕ್ರಮ ಕೈಗೊಳ್ಳಲು ಅವಕಾಶ ಕೊಡಿ ಎಂದು ಸಿಎಂ ಅವರಿಗೆ ಕೇಳುತ್ತೇನೆ. ಈ ಪ್ರಕರಣದಲ್ಲಿ ನನ್ನದು ಯಾವುದೇ ರೀತಿಯ ತಪ್ಪಿಲ್ಲ. ಕಾನೂನು ಸಲಹೆಗಾರರ ಸಲಹೆ ಪಡೆದು ಕಾನೂನು ಹೋರಾಟ ಮಾಡುತ್ತೇನೆ ಎಂದು ಹೇಳಿದರು.
ಇಲ್ಲಿಯವರೆಗೆ ಮುಖ್ಯಮಂತ್ರಿಗಳು ನನಗೆ ಏನನ್ನೂ ಕೇಳಿಲ್ಲ. ಕೇಳುವ ತಪ್ಪನ್ನ ತಿಮ್ಮಾಪುರ್ ಮಾಡಿಲ್ಲ. ತಿಮ್ಮಾಪುರ್ ತಪ್ಪು ಮಾಡಿಲ್ಲ ಅಂತಾನೇ ಅವರು ನನ್ನನ್ನು ಕೇಳಿಲ್ಲ ಎಂದರು.

