– ಮಾವನ ಮಗನಿಗೆ ಒಳ್ಳೆಯದಾಗ್ಲಿ ಅಂತ ಹರಸಿದ ಅತ್ತೆ ಮಗಳು
ಗಿಲ್ಲಿ ನಿಜವಾದ ಬಡವನಾ? ನಿಜವಾದ ಬಡವ ಬೇರೆ, ಬಡವನ ರೀತಿ ಗೆಟಪ್ ಹಾಕ್ಕೊಂಡು ಬದುಕೋದು ಬೇರೆ ಎಂದು ಬಿಗ್ ಬಾಸ್ 2ನೇ ರನ್ನರ್ ಅಪ್ ಅಶ್ವಿನಿ ಗೌಡ (Ashwini Gowda) ಟಾಂಗ್ ಕೊಟ್ಟಿದ್ದಾರೆ.
‘ಪಬ್ಲಿಕ್ ಟಿವಿ’ ಜೊತೆ ಮಾತನಾಡಿದ ಅಶ್ವಿನಿ ಗೌಡ, ಬಡವರ ಮಕ್ಕಳು ಬೆಳೆಯಬೇಕು ಅನ್ನೋದು ನಮ್ಮ ಡಾಲಿ ಧನಂಜಯ್ ಅವರ ಡೈಲಾಗ್. ಆದ್ರೆ, ಗಿಲ್ಲಿ ನಿಜವಾದ ಬಡವನಾ? ಅದು ಬಹಳ ಮುಖ್ಯ ಆಗುತ್ತೆ. ನಿಜವಾದ ಬಡವ ಬೇರೆ, ಬಡವನ ಥರ ಗೆಟಪ್ ಹಾಕ್ಕೊಂಡು ಬದುಕೋದು ಬೇರೆ. ಬಹುಶಃ ಅವರ ಆಟ ಎಲ್ಲರಿಗೂ ಇಷ್ಟ ಆಗಿದೆ ಅಂತ ಹೇಳೋಕೆ ನಾನು ಇಷ್ಟ ಪಡ್ತೀನಿ. ಗಿಲ್ಲಿ (Gilli Nata) ಬಡವ ಅಂತ ಹೇಳೋದು ತಪ್ಪಾಗುತ್ತೆ ಎಂದು ಮಾತನಾಡಿದ್ದಾರೆ. ಇದನ್ನೂ ಓದಿ: ನಾನು ವಿನ್ನರ್ ಆಗುವ ನಿರೀಕ್ಷೆ ಹೆಚ್ಚಿತ್ತು: 2ನೇ ರನ್ನರ್ ಅಪ್ ಅಶ್ವಿನಿ ಗೌಡ ರಿಯಾಕ್ಷನ್
ಬಡವನ ಗೆಟಪ್‌ನಲ್ಲಿ ಗಿಲ್ಲಿ ವಿನ್ನರ್ ಆದ್ರು. ಅಷ್ಟೇ ಬಿಟ್ರೆ, ಬಡವ ಅಂತ ಹೇಳಿದ್ರೆ ತಪ್ಪಾಗುತ್ತೆ. ಅದನ್ನ ನಾವು ಯಾವತ್ತೂ ಸ್ಟ್ರ್ಯಾಟಜಿ ಕಾರ್ಡ್ ಆಗಿ ಬಳಸಬಾರದು. ಗಿಲ್ಲಿ ಗೆದ್ದಿದ್ದಾರೆ. ಅವರ ವ್ಯಕ್ತಿತ್ವ ಮತ್ತು ಆಟದ ವಿಚಾರದಲ್ಲಿ ಖಂಡಿತ ನನಗೆ ಹೆಮ್ಮೆಯಿದೆ. ಯಾಕಂದ್ರೆ ಅವರೂ ನನ್ನ ಜೊತೆ ಪ್ರಯಾಣ ಮಾಡಿದ ಪ್ರತಿಸ್ಪರ್ಧಿ. ನಾನು ಅವರನ್ನ ಯಾವತ್ತೂ ಬಿಟ್ಟುಕೊಡೇಕೆ ಇಷ್ಟ ಪಡಲ್ಲ ಎಂದು ಹೇಳಿದ್ದಾರೆ.
ಯುದ್ಧ ಮಾಡಬೇಕಾದ್ರೆ ಕತ್ತಿಯನ್ನು ಕೈಯಲ್ಲಿ ಹಿಡಿದುಕೊಂಡಿರ್ತೀವಿ. ಬಿಗ್ ಬಾಸ್ ಮುಗಿದ ಮೇಲೆ ಕತ್ತಿಯನ್ನು ಕೆಳಗಡೆ ಇಡ್ತೀವಿ. ಮತ್ತೆ ಅದನ್ನು ಕೈಗೆ ಎತ್ತಿಕೊಳ್ಳಲು ನನಗೆ ಇಷ್ಟ ಇಲ್ಲ. ಹಾಗಾಗಿ, ಗಿಲ್ಲಿ ಗೆದ್ದಿದ್ದಾರೆ. ಅವರ ಭವಿಷ್ಯ ಉಜ್ವಲ ಆಗ್ಲಿ, ಒಳ್ಳೆದಾಗ್ಲಿ. ನನ್ನನ್ನು ಅತ್ತೆ ಮಗಳು ಅಂತ ಕರೆದಿದ್ದಾರೆ. ನಾನು ಅವರನ್ನ ಮಾವನ ಮಗ ಅಂತ ಕರೆದಿದ್ದೀನಿ. ಖಂಡಿತ ಒಳ್ಳೆದಾಗಬೇಕು ಎಂದು ಆಶಿಸಿದ್ದಾರೆ. ಇದನ್ನೂ ಓದಿ: BBK 12 | ಕಾವ್ಯನ್ನ ಮದ್ವೆ ಆಗ್ತೀರಾ ಅಂದಿದ್ದಕ್ಕೆ ಗಿಲ್ಲಿ ಕೊಟ್ಟ ಉತ್ತರ ಏನು?

