ಚಿಕ್ಕಮಗಳೂರು: ಇಲ್ಲಿನ (Chikkamagaluru) ಜಿಲ್ಲಾಸ್ಪತ್ರೆಯಲ್ಲಿ (Hospital) ಡ್ಯೂಟಿಯಲ್ಲಿದ್ದ ವೈದ್ಯರಿಲ್ಲದೆ ನರ್ಸ್ ಹಾಗೂ ಕಾಂಪೌಂಡರ್ ಸೇರಿ ಯುವತಿಯೊಬ್ಬಳಿಗೆ ಚಿಕಿತ್ಸೆ ನೀಡಿದ ಆರೋಪ ಕೇಳಿ ಬಂದಿದೆ. ಚಿಕಿತ್ಸೆ ಬಳಿಕ ಶಿವಮೊಗ್ಗಕ್ಕೆ (Shivamogga) ಕರೆದೊಯ್ಯುವಂತೆ ಸೂಚಿಸಿದ್ದಾರೆ. ದುರಾದೃಷ್ಟವಶಾತ್ ಆಕೆ ತರೀಕೆರೆ ಬಳಿ ಮಾರ್ಗ ಮಧ್ಯೆ ಸಾವನ್ನಪ್ಪಿದ್ದು, ಕುಟುಂಬಸ್ಥರು ಆಸ್ಪತ್ರೆ ಮುಂಭಾಗ ಶವವಿಟ್ಟು ಪ್ರತಿಭಟನೆ ನಡೆಸಿದ್ದಾರೆ.
ಮೃತ ಯುವತಿಯನ್ನು ಹೊಸಪೇಟೆ ಗ್ರಾಮದ ಕವಿತಾ (21) ಎಂದು ಗುರುತಿಸಲಾಗಿದೆ. ಯುವತಿ ಕಾಫಿ ಹಣ್ಣು ಕೊಯ್ಯುವಾಗ ತಲೆ ಮೇಲೆ ಮರಬಿದ್ದು ಗಾಯಗೊಂಡಿದ್ದಳು. ಆಕೆಯನ್ನು ತಕ್ಷಣ ಚಿಕ್ಕಮಗಳೂರು ಜಿಲ್ಲಾಸ್ಪತ್ರೆಗೆ ಕರೆತರಲಾಗಿತ್ತು. ಈ ವೇಳೆ ನರ್ಸ್ ಹಾಗೂ ಕಾಂಪೌಂಡರ್ ಒಂದು ಇಂಜೆಕ್ಷನ್ ಕೂಡ ಕೊಡದೇ ಕೇವಲ ಬ್ಯಾಂಡೇಜ್ ಹಾಕಿ, ಶಿವಮೊಗ್ಗಕ್ಕೆ ಕರೆದುಕೊಂಡು ಹೋಗುವಂತೆ ಸೂಚಿಸಿದ್ದರು ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಇದನ್ನೂ ಓದಿ: ಬಾರ್ ಲೈಸೆನ್ಸ್ ನೀಡಲು 2.25 ಕೋಟಿಗೆ ಬೇಡಿಕೆ – ಲೋಕಾಯುಕ್ತ ಬಲೆಗೆ ಬಿದ್ದ ಅಬಕಾರಿ ಡಿಸಿ
ಸ್ಕ್ಯಾನ್ ಮಾಡದೆ, ಎಕ್ಸ್ ರೇ ಮಾಡದೆ, ಒಂದ್ ಇಂಜಕ್ಷನ್ ಕೂಡ ಮಾಡದೆ ಹೇಗೆ ಶಿವಮೊಗ್ಗಕ್ಕೆ ಕಳುಹಿಸಿದ್ರಿ? ಸ್ಥಳಕ್ಕೆ ಜಿಲ್ಲಾ ಸರ್ಜನ್ ಬರಬೇಕು ಎಂದು ಆಗ್ರಹಿಸಿ ಯುವತಿ ಕುಟುಂಬಸ್ಥರು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಹೊಳೆಯಲ್ಲಿ ಸ್ನಾನಕ್ಕೆ ತೆರಳಿದ ಇಬ್ಬರು ಬಾಲಕರು ಜಲ ಸಮಾಧಿ!

