ಮುಂಬೈ: ಮಹಾರಾಷ್ಟ್ರದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲೂ (Maharashtra Civic Polls) ವೋಟ್ ಚೋರಿ ಆರೋಪ ಕೇಳಿ ಬಂದಿದೆ. ಶಾಯಿ ಗುರುತು ಅಳಿಸಿ ಹೋಗುತ್ತಿದೆ ಎಂಬ ಶೀರ್ಷಿಕೆಯ ಮಾಧ್ಯಮ ವರದಿಯನ್ನು ಹಂಚಿಕೊಂಡಿರುವ ರಾಹುಲ್ ಗಾಂಧಿ (Rahul Gandhi), ಚುನಾವಣಾ ಆಯೋಗವು ಜನರನ್ನ ತಪ್ಪು ದಾರಿಗೆ ಎಳೆಯುತ್ತಿರುವುದು ನಮ್ಮ ಪ್ರಜಾಪ್ರಭುತ್ವದಲ್ಲಿ ವಿಶ್ವಾಸ ಕುಸಿಯಲು ಕಾರಣವಾಗಿದೆ ಎಂದು ಎಕ್ಸ್ ಮೂಲಕ ಆಕ್ರೋಶ ಹೊರಹಾಕಿದ್ದಾರೆ.
Election commission gaslighting citizens is how trust has collapsed in our democracy.
Vote Chori is an anti-national act. pic.twitter.com/3FZKkDPwDg
— Rahul Gandhi (@RahulGandhi) January 16, 2026
ಅಲ್ಲದೇ ಮತ ಕಳ್ಳತನ ರಾಷ್ಟ್ರ ವಿರೋಧಿ ಕೃತ್ಯ ಅಂತಲೂ ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ಠಾಕ್ರೆ ಕೋಟೆ ಧ್ವಂಸ – 30 ವರ್ಷದ ಬಳಿಕ ಮುಂಬೈಗೆ ಬಿಜೆಪಿ ಮೇಯರ್?
ಸದ್ಯ ವೈರಲ್ ಆಗಿರುವ ವಿಡಿಯೋಗಳಲ್ಲಿ ಅಸಿಟೋನ್‌ನಂತಹ ರಾಸಾಯನಿಕಗಳನ್ನ ಬಳಸಿ ಶಾಯಿಯನ್ನು ಹೇಗೆ ಅಳಿಸಬಹುದು ಎಂಬುದನ್ನು ತೋರಿಸಲಾಗಿದೆ. ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಈ ಆರೋಪಗಳನ್ನ ತಳ್ಳಿಹಾಕಿದ್ದಾರೆ. ಆದರೆ, ಚುನಾವಣಾ ಆಯೋಗ (Election Commission) ತನಿಖೆ ನಡೆಸುವುದಾಗಿ ತಿಳಿಸಿದೆ. ಮುಂದಿನ ಚುನಾವಣೆಗಳಲ್ಲಿ ಸಾಂಪ್ರದಾಯಿಕ ಶಾಯಿಯನ್ನ ಬಳಸಲು ನಿರ್ಧರಿಸಲಾಗಿದೆ.

ಈ ಮಧ್ಯೆ, ನಮ್ಮ ಸಾವಿರಾರು ಕಾರ್ಯಕರ್ತರ ಹೆಸರು ಮತಪಟ್ಟಿಯಿಂದ ಕಾಣೆಯಾಗಿದೆ ಅಂತ ಉದ್ಧವ್ ಶಿವಸೇನೆ ಬಣದ ನಾಯಕ ಸಂಜಯ್‌ರಾವತ್ ಗಂಭೀರ ಆರೋಪ ಮಾಡಿದ್ದಾರೆ. ಇದನ್ನೂ ಓದಿ: ಫ್ರೀ ಗ್ಯಾರಂಟಿಯಿಂದ BJP ನೇತೃತ್ವದ ಮಧ್ಯಪ್ರದೇಶ ಸರ್ಕಾರಕ್ಕೆ ಆರ್ಥಿಕ ಸಂಕಷ್ಟ – ಬಾಕಿ ಸಾಲ 4.64 ಲಕ್ಷ ಕೋಟಿಗೆ ಏರಿಕೆ!
ಬಿಜೆಪಿ ಪಾಲಿಗೆ ಶ್ರೀಮಂತ ಪಾಲಿಕೆ!
9 ವರ್ಷಗಳ ನಂತರ ಬೃಹನ್ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ)ಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟಗಳು ಕಮಾಲ್ ಮಾಡಿದೆ. 29 ಕಾರ್ಪೊರೇಷನ್‌ಗಳ ಪೈಕಿ 26ರಲ್ಲಿ ಬಿಜೆಪಿ ಕೂಟ ಜಯಭೇರಿ ಬಾರಿಸಿದೆ. ಒಟ್ಟು 2,869 ವಾರ್ಡ್‌ಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ-ಶಿಂಧೆ ಶಿವಸೇನೆ 1,500ಕ್ಕೂ ಹೆಚ್ಚು ವಾರ್ಡ್‌ಗಳಲ್ಲಿ ಜಯಗಳಿಸಿದೆ. ಬಿಎಂಸಿಯ 224 ವಾರ್ಡ್‌ಗಳಲ್ಲಿ ಬಿಜೆಪಿ ಮಿತ್ರಕೂಟ 131 ಗೆದ್ದಿವೆ. ಮುಂಬೈ, ನವಿಮುಂಬೈ, ಥಾಣೆ, ಪುಣೆ, ನಾಗಪುರ, ನಾಸಿಕ್ ಸೇರಿದಂತೆ ಪ್ರಮುಖ ನಗರಗಳು ಬಿಜೆಪಿ ಪಾಲಾಗಿವೆ. ಈ ಮೂಲಕ, ಇದೇ ಮೊದಲ ಬಾರಿಗೆ ದೇಶದ ಶ್ರೀಮಂತ ಕಾರ್ಪೊರೇಷನ್ ಬಿಎಂಸಿಗೆ ಬಿಜೆಪಿ ಮೇಯರ್ ಸಿಗಲಿದೆ.

