– ತನಗೆ ಸಿಕ್ಕಿದ ಪ್ರಶಸ್ತಿಯನ್ನು ಟ್ರಂಪ್‌ಗೆ ನೀಡಿದ ಮಚಾದೋ
ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರಿಗೆ ಕೊನೆಗೂ ನೊಬೆಲ್ ಶಾಂತಿ ಪ್ರಶಸ್ತಿ (Nobel Peace Award) ಸಿಕ್ಕಿದೆ. 2025ನೇ ಸಾಲಿನ ನೊಬೆಲ್ ಶಾಂತಿ ಪ್ರಶಸ್ತಿ ವಿಜೇತೆ ವೆನೆಜುವೆಲಾದ(Venezuela) ವಿರೋಧ ಪಕ್ಷದ ಮಾರಿಯಾ ಕೊರಿನಾ ಮಚಾದೋ (Maria Corina Machado) ಅವರು ತನಗೆ ಸಿಕ್ಕಿದ್ದ ಪ್ರಶಸ್ತಿಯನ್ನು ಟ್ರಂಪ್ ಅವರಿಗೆ ನೀಡಿದ್ದಾರೆ.
ಗುರುವಾರ ಶ್ವೇತಭವನದಲ್ಲಿ ನಡೆದ ಕಾರ್ಯಕ್ರದಲ್ಲಿ ಮಾರಿಯಾ ಕೊರಿನಾ ಮಚಾದೊ ಅವರು ತಮ್ಮ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಟ್ರಂಪ್ ಅವರಿಗೆ ಹಸ್ತಾಂತರ ಮಾಡಿದರು.
ನೊಬೆಲ್ ಚಿನ್ನದ ಪದಕವು ಈಗ ಟ್ರಂಪ್ ಅವರ ಬಳಿಯೇ ಉಳಿದಿದೆ ಎಂದು ಶ್ವೇತಭವನದ (White House) ಅಧಿಕಾರಿಯೊಬ್ಬರು ದೃಢಪಡಿಸಿದ್ದಾರೆ. ಕಾರ್ಯಕ್ರಮದ ಬಳಿಕ ಮಚಾದೊ ಚಿನ್ನದ ಪದಕವನ್ನು ಬಿಟ್ಟು ಹೋಗಿರುವುದಾಗಿ ವರದಿಗಾರರಿಗೆ ತಿಳಿಸಿದ್ದಾರೆ.
REPORTER: “Did you offer to President Trump your Nobel Peace Prize?”
MARÍA CORINA MACHADO: “I presented the President of the United States the medal…the Nobel Peace Prize.”
“Two hundred years ago, General Lafayette gave Simón Bolívar a medal with George Washington’s face on… pic.twitter.com/xR69XpQCk8
— Fox News (@FoxNews) January 16, 2026
ನಮ್ಮ ದೇಶದ ಸ್ವಾತಂತ್ರ್ಯಕ್ಕೆ ಅವರ ವಿಶಿಷ್ಟ ಬದ್ಧತೆಗೆ ಮನ್ನಣೆಯಾಗಿ ಅಮೆರಿಕದ ಅಧ್ಯಕ್ಷರಿಗೆ ನೊಬೆಲ್ ಶಾಂತಿ ಪ್ರಶಸ್ತಿಯ ಪದಕವನ್ನು ಪ್ರದಾನ ಮಾಡಿದ್ದೇನೆ ಮಚಾದೊ ತಿಳಿಸಿದ್ದಾರೆ.
( @realDonaldTrump – Truth Social Post )
( Donald J. Trump – Jan 15 2026, 7:48 PM ET )
It was my Great Honor to meet María Corina Machado, of Venezuela, today. She is a wonderful woman who has been through so much. María presented me with her Nobel Peac… pic.twitter.com/7U7MeWvPy9
— Donald J Trump Posts TruthSocial (@TruthTrumpPost) January 16, 2026
ನೊಬೆಲ್ ಪದಕ ಸ್ವೀಕರಿಸಿದ ಬಳಿಕ ಪ್ರತಿಕ್ರಿಯಿಸಿದ ಟ್ರಂಪ್, ಇಂದು ವೆನೆಜುವೆಲಾದ ಮರಿಯಾ ಕೊರಿನಾ ಮಚಾದೊ ಅವರನ್ನು ಭೇಟಿಯಾಗುವುದು ನನಗೆ ದೊರೆತ ದೊಡ್ಡ ಗೌರವ. ಅವರು ತುಂಬಾ ಕಷ್ಟಗಳನ್ನು ಅನುಭವಿಸಿದ ಅದ್ಭುತ ಮಹಿಳೆ. ನನ್ನ ಕೆಲಸಕ್ಕೆ ಮರಿಯಾ ಅವರು ತನಗೆ ಸಿಕ್ಕಿದ್ದ ನೊಬೆಲ್ ಶಾಂತಿ ಪ್ರಶಸ್ತಿಯನ್ನು ನನಗೆ ನೀಡಿದರು. ಧನ್ಯವಾದಗಳು ಮರಿಯಾ! ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಈ ಬಾರಿ ಬುಲೆಟ್ ಮಿಸ್ ಆಗಲ್ಲ: ಟ್ರಂಪ್‌ಗೆ ಇರಾನ್ ಹತ್ಯೆ ಬೆದರಿಕೆ
ನೊಬೆಲ್ ಶಾಂತಿ ಪ್ರಶಸ್ತಿಯನ್ನು ವರ್ಗಾಯಿಸುವ ಅಥವಾ ಇತರರೊಂದಿಗೆ ಹಂಚಿಕೊಳ್ಳುವ ಯಾವುದೇ ಅವಕಾಶ ಇಲ್ಲ ಎಂದು ನಾರ್ವೇಜಿಯನ್ ನೊಬೆಲ್ ಸಂಸ್ಥೆ ಸ್ಪಷ್ಟಪಡಿಸಿದೆ.
This recognition of the struggle of all Venezuelans is a boost to conclude our task: to conquer Freedom.
We are on the threshold of victory and today, more than ever, we count on President Trump, the people of the United States, the peoples of Latin America, and the democratic…
— María Corina Machado (@MariaCorinaYA) October 10, 2025
ವೆನೆಜುವೆಲಾದ ಜನರ ಪ್ರಜಾಪ್ರಭುತ್ವ ಹಕ್ಕುಗಳನ್ನು ಮರಳಿ ಪಡೆಯಲು, ಸರ್ವಾಧಿಕಾರದಿಂದ ಪ್ರಜಾಪ್ರಭುತ್ವಕ್ಕೆ ನ್ಯಾಯಯುತ ಮತ್ತು ಶಾಂತಿಗಾಗಿ ಹೋರಾಟ ನಡೆಸಿದ್ದಾಗಿ ಮಾರಿಯಾ ಕೊರಿನಾ ಮಚಾದೋ ಅವರನ್ನ ಆಯ್ಕೆ ಮಾಡಲಾಗಿದೆ ಎಂದು ನಾರ್ವೆಯ ನೊಬೆಲ್ ಪ್ರಶಸ್ತಿಯ ಆಯ್ಕೆ ಸಮಿತಿ ಹೇಳಿತ್ತು. ಇದನ್ನೂ ಓದಿ: ಇರಾನ್ ವಿರುದ್ಧ ಮಿಲಿಟರಿ ದಾಳಿ ವಾರ, ತಿಂಗಳ ಕಾಲ ನಡೆಯಬಾರದು: ಟ್ರಂಪ್ ಸೂಚನೆ
ನಾನು 8 ಯುದ್ಧಗಳನ್ನು ನಿಲ್ಲಿಸಿದ್ದೇನೆ. ಬರಾಕ್ ಒಬಾಮ ಏನು ಮಾಡಿದ್ದಾರೆ? ಏನು ಮಾಡದ ಒಬಾಮಗೆ ನೊಬೆಲ್ ಸಿಗುವುದಾದರೆ ನನಗೆ ಯಾಕೆ ಸಿಗಬಾರದು ಎಂದು ಟ್ರಂಪ್ ಈ ಹಿಂದೆ ಪ್ರಶ್ನಿಸಿದ್ದರು. ಅಷ್ಟೇ ಅಲ್ಲದೇ ಇಸ್ರೇಲ್ ಮತ್ತು ಪಾಕಿಸ್ತಾನ ನೊಬೆಲ್ ಶಾಂತಿ ಪ್ರಶಸ್ತಿಗೆ ಟ್ರಂಪ್ ಅವರ ಹೆಸರನ್ನು ನಾಮ ನಿರ್ದೇಶನ ಮಾಡಿತ್ತು.
ಯಾರು ಈ ಮರಿಯಾ ಕೊರಿನಾ ಮಚಾದೊ?
ಸದ್ಯ ವಿರೋಧ ಪಕ್ಷದ ನಾಯಕಿಯೂ ಆಗಿರುವ ಮಚಾದೋ ವೆನೆಜುವೆಲಾದ ಪ್ರಜಾಪ್ರಭುತ್ವ ಪರ ಚಳವಳಿಯಲ್ಲಿ ಪ್ರಮುಖ ವ್ಯಕ್ತಿಯಾಗಿದ್ದಾರೆ. ಮಡುರೊ ಅವರ ಸರ್ವಾಧಿಕಾರಿ ಆಡಳಿತವನ್ನು ಧಿಕ್ಕರಿಸಿ ಹೋರಾಟ ನಡೆಸಿದ್ದರು. ಅವರು ಬೆದರಿಕೆಗಳನ್ನು ಎದುರಿಸಿದ್ದಲ್ಲದೆ, ಬಂಧನಕ್ಕೊಳಗಾಗಿದ್ದಾರೆ. ಪ್ರಯಾಣ ನಿಷೇಧ ಮತ್ತು ರಾಜಕೀಯ ಕಿರುಕುಳವನ್ನು ಎದುರಿಸಿದ್ದರು. ವೆನೆಜುವೆಲಾದಲ್ಲಿ ಅವರನ್ನು ಐರನ್ ಲೇಡಿ ಎಂದು ಕರೆಯಲಾಗುತ್ತಿದೆ.

