ಮುಂಬೈ: ಶಫಾಲಿ ವರ್ಮಾ ಆಲ್‌ರೌಂಡರ್ ಆಟ ಹಾಗೂ ಲಿಜೆಲ್ ಲೀಯ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಯುಪಿ ವಾರಿಯರ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ 7 ವಿಕೆಟ್‌ಗಳಿಂದ ಗೆಲವು ಸಾಧಿಸಿದೆ. ಇದರೊಂದಿಗೆ ಸತತ 2 ವಿರೋಚಿತ ಸೋಲಿನ ಬಳಿಕ WPLನಲ್ಲಿ ಡೆಲ್ಲಿ ಗೆಲುವಿನ ಖಾತೆ ತೆರೆದಿದೆ.
ನವಿ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಯುಪಿ ವಾರಿಯರ್ಸ್ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 154 ರನ್ ಬಾರಿಸಿದರು. 155 ರನ್‌ಗಳ ಗುರಿ ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ ತಂಡ 20 ಓವರ್‌ಗಳಲ್ಲಿ 3 ವಿಕೆಟ್‌ಗಳ ನಷ್ಟಕ್ಕೆ 158 ರನ್ ಗಳಿಸಿ ಗೆಲವು ಸಾಧಿಸಿದೆ.ಇದನ್ನೂ ಓದಿ: WPL 2026: ಹರ್ಮನ್‌ಪ್ರೀತ್ ಬೆಂಕಿ ಬ್ಯಾಟಿಂಗ್ - ಗುಜರಾತ್ ವಿರುದ್ಧ ಮುಂಬೈಗೆ 7 ವಿಕೆಟ್‌ಗಳ ಭರ್ಜರಿ ಜಯ
ಗೆಲುವಿನ ಗುರಿ ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ ಪರ ಲಿಜೆಲ್ ಲೀ ಹಾಗೂ ಶಫಾಲಿ ವರ್ಮಾ ಭರ್ಜರಿ 94 ರನ್‌ಗಳ ಜೊತೆಯಾಟವಾಡಿದರು. ಲಿಜೆಲ್ ಲೀ 44 ಎಸೆತಗಳಲ್ಲಿ 67 ರನ್ ಬಾರಿಸಿದರು. ಶಫಾಲಿ ವರ್ಮಾ 32 ಎಸೆತಗಳಲ್ಲಿ 36 ರನ್, ಲಾರಾ ವೋಲ್ವಾರ್ಡ್ ಔಟಾಗದೇ 24 ಎಸೆಗಳಲ್ಲಿ 25 ರನ್, ಜೆಮಿಮಾ ರೊಡ್ರಿಗಸ್ 12 ಎಸೆತಗಳಲ್ಲಿ 21 ರನ್‌ಗಳಿಸಿದರು. ಯುಪಿ ವಾರಿಯರ್ಸ್ ಪರ ಬೌಲಿಂಗ್ ಮಾಡಿದ ದೀಪ್ತಿ ಶರ್ಮಾ 2 ಹಾಗೂ ಆಶಾ ಸೋಭಾನಾ 1 ವಿಕಟ್ ಪಡೆದರು.
ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ್ದ ಯುಪಿ ವಾರಿಯರ್ಸ್ ಪರ ಮೆಗ್ ಲ್ಯಾನಿಂಗ್ 38 ಎಸೆತಗಳಲ್ಲಿ 9 ಬೌಂಡರಿ, 1 ಸಿಕ್ಸ್ ಬಾರಿಸಿ 54 ರನ್ ಗಳಿಸಿದರೆ, ಹರ್ಲೀನ್ ಡಿಯೋಲ್ 38 ಎಸೆತಗಳಲ್ಲಿ 7 ಬೌಂಡರಿ ಹೊಡೆದು 47 ರನ್ ಕಲೆ ಹಾಕಿದರು. ಫೋಬೆ ಲಿಚ್‌ಫೀಲ್ಡ್ 20 ಎಸೆತಗಳಲ್ಲಿ 27 ರನ್ ಹಾಗೂ ಶ್ವೇತಾ ಸೆಹ್ರಾವತ್ 12 ಎಸೆತಗಳಲ್ಲಿ 11 ರನ್ ಗಳಿಸಿದರು.
ಡೆಲ್ಲಿ ಪರ ಬೌಲಿಂಗ್ ಮಾಡಿದ ಮರಿಜಾನ್ನೆ ಕಪ್ಪ್, ಶಫಾಲಿ ವರ್ಮಾ ತಲಾ 2 ವಿಕೆಟ್ ಕಿತ್ತರು. ಇನ್ನೂ ನಂದಿನಿ ಶರ್ಮಾ, ಸ್ನೇಹ್ ರಾಣಾ, ಶ್ರೀ ಚರಣಿ ತಲಾ 1 ವಿಕೆಟ್ ಪಡೆದುಕೊಂಡರು.ಇದನ್ನೂ ಓದಿ: WPL 2026 | ರಾಯಲ್ ಆಗಿ ವಾರಿಯರ್ಸ್ ಚಾಲೆಂಜ್ ಗೆದ್ದ ಬೆಂಗಳೂರು – ನಂ.1 ಪಟ್ಟಕ್ಕೆ ಜಿಗಿದ ಆರ್‌ಸಿಬಿ

