ಬ್ಯಾಂಕಾಕ್: ಚಲಿಸುತ್ತಿದ್ದ ರೈಲಿನ (Train) ಮೇಲೆ ಕ್ರೇನ್ ಬಿದ್ದು ಕನಿಷ್ಠ 22 ಜನ ಮೃತಪಟ್ಟ ಘಟನೆ ಥೈಲ್ಯಾಂಡ್‌ನ (Thailand) ಈಶಾನ್ಯ ಪ್ರಾಂತ್ಯದಲ್ಲಿ ನಡೆದಿದೆ.
ಬ್ಯಾಂಕಾಕ್‌ನಿಂದ ಈಶಾನ್ಯಕ್ಕೆ 230 ಕಿಮೀ (143 ಮೈಲುಗಳು) ದೂರದಲ್ಲಿರುವ ನಖೋನ್ ರಾಟ್ಚಸಿಮಾ ಪ್ರಾಂತ್ಯದ ಸಿಖಿಯೊ ಜಿಲ್ಲೆಯಲ್ಲಿ ಬುಧವಾರ ಬೆಳಿಗ್ಗೆ ಈ ದುರಂತ ಸಂಭವಿಸಿದೆ. ಇದನ್ನೂ ಓದಿ: 1 ಡಾಲರ್ 10.92 ಲಕ್ಷ ರಿಯಲ್‌ಗೆ ಸಮ – ದಾಖಲೆಯ ಕನಿಷ್ಠ ಮಟ್ಟಕ್ಕೆ ಕುಸಿದ ಇರಾನ್ ಕರೆನ್ಸಿ
DEVELOPING: Dozens of people have been killed and injured after a construction crane lifting a section of a bridge collapsed onto a passenger train in Sikhio, Thailand.
Contributed by @AZ_Intel_. pic.twitter.com/wnYDIszrrs
— Open Source Intel (@Osint613) January 14, 2026
ರೈಲು ಉಬೊನ್ ರಾಟ್ಚತಾನಿ ಪ್ರಾಂತ್ಯಕ್ಕೆ ಹೋಗುತ್ತಿತ್ತು. ಈ ವೇಳೆ ಹೈಸ್ಪೀಡ್ ರೈಲು ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದ ಕ್ರೇನ್ ಕುಸಿದು ಒಂದು ಬೋಗಿಯ ಮೇಲೆ ಬಿದ್ದಿದೆ.
ಕ್ರೇನ್ ಬೋಗಿಯ ಮೇಲೆ ಬಿದ್ದ ಕೂಡಲೇ ರೈಲು ಹಳಿ ತಪ್ಪಿದೆ. ರೈಲಿನಲ್ಲಿ ಸುಮಾರು 195 ಜನ ಪ್ರಯಾಣಿಸುತ್ತಿದ್ದರು. ಅಪಘಾತದ ಬಗ್ಗೆ ತನಿಖೆಗೆ ಸರ್ಕಾರ ಆದೇಶಿಸಿದೆ.

