ಗದಗ: ಲಕ್ಕುಂಡಿಯಲ್ಲಿ ಸಿಕ್ಕ ನಿಧಿ ವಿಜಯನಗರ ಅರಸರು ಅಥವಾ ಚಾಲುಕ್ಯರ ಕಾಲದ ಒಡವೆಗಳು ಇರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಒಟ್ಟು 470 ಗ್ರಾಂ ತೂಕದ ಚಿನ್ನಾಭರಣಗಳು ಪತ್ತೆಯಾಗಿದ್ದು ಎಷ್ಟು ವರ್ಷ ಹಳೆಯದು ಎನ್ನುವುದರ ಬಗ್ಗೆ 3 ದಿನದ ಒಳಗಡೆ ನಿಖರ ಮಾಹಿತಿ ಸಿಗುವ ಸಾಧ್ಯತೆಯಿದೆ.
ಜಿಲ್ಲಾಧಿಕಾರಿ ಸಿಎನ್ ಶ್ರೀಧರ್ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿ, ಸುಮಾರು 300 ವರ್ಷಗಳಿಗಿಂತ ಹಳೇ ಕಾಲದ ಒಡವೆಗಳು ಇದಾಗಿದೆ. ಕೇಂದ್ರ ಪುರಾತತ್ವ ಇಲಾಖೆ 4 ಅಧಿಕಾರಿಗಳು ರಾಜ್ಯ ಪುರಾತತ್ವ ಇಲಾಖೆ 4 ಜನರ ತಂಡದಿಂದ ಪರಿಶೀಲನೆ ನಡೆದಿದೆ. ಪೊಲೀಸ್ ಇಲಾಖೆ ಕಣ್ಗಾವಲಿನಲ್ಲಿ ವಿಡಿಯೋ ಚಿತ್ರೀಕರಣದೊಂದಿಗೆ ಪರಿಶೀಲನೆ ನಡೆದಿದೆ. ನಿಖರ ವರದಿ ಬರಲು 3 ದಿನ ಬೇಕಾಗಬಹುದು ಎಂದು ತಜ್ಞರು ಹೇಳಿದ್ದಾರೆ ಎಂದು ತಿಳಿಸಿದರು.
ಯಾವ ಆಭರಣ? ಎಷ್ಟು ಗ್ರಾಂ?
* ಕೈ ಕಡಗದ 1 ತುಂಡು – 33ಗ್ರಾಂ
* ಕಂಠದ ಹಾರ 1 ತುಂಡು – 12 ಗ್ರಾಂ
* ಕಂಠದ ಹಾರ 1 ತುಂಡು – 44ಗ್ರಾಂ
* ಕಂಠದ ಹಾರ ತುಂಡು – 137 ಗ್ರಾಂ
* ಕುತ್ತಿಗೆ ಸರ – 49 ಗ್ರಾಂ ಇದನ್ನೂ ಓದಿ: ಲಕ್ಕುಂಡಿಯಲ್ಲಿ ನಿಧಿ ಪತ್ತೆ – ನಿಧಿಯ 1 ಭಾಗ ಕುಟುಂಬಕ್ಕೆ, ಮಗನಿಗೆ ದ್ವಿತೀಯ ಪಿಯುವರೆಗೆ ಉಚಿತ ಶಿಕ್ಷಣದ ಭರವಸೆ
* 5 ದೊಡ್ಡ ಗುಂಡಿನ ತೊಡೆತುಂಡು – 34 ಗ್ರಾಂ
* 2 ದೊಡ್ಡ ಗುಂಡಿನ ತೊಡೆತುಂಡು – 17 ಗ್ರಾಂ
* 1 ದೊಡ್ಡ ಗುಂಡು, 1 ಸಣ್ಣ ಗುಂಡಿನ ತುಂಡು – 11 ಗ್ರಾಂ
* 1 ದೊಡ್ಡ ಗುಂಡು, 1 ಸಣ್ಣ ಗುಂಡಿನ ತುಂಡು – 11 ಗ್ರಾಂ
* ವಂಕಿ ಉಂಗುರ-23 ಗ್ರಾಂ
* ಕಿವಿಯೋಲೆ ತುಂಡು – 3 ಗ್ರಾಂ
* ನಾಗ ರೂಪದ ಕಿವಿಯೋಲೆ ಬಿಳಿ ಮಣಿ – 7 ಗ್ರಾಂ
” ನಾಗ ಮಣಿ ರೂಪದ ಕಿವಿಯೋಲೆ ಕೆಂಪು ಮಣಿ – 7 ಗ್ರಾಂ
* ಓಲೆ (ನೀಲಿ ಹರಳಿನದ್ದು) – 5 ಗ್ರಾಂ
* ಓಲೆ (ನೀಲಿ ಹರಳಿನದ್ದು) – 5 ಗ್ರಾಂ
* ಕೇಸರಿ ಹವಳದ ಓಲೆ – 5 ಗ್ರಾಂ ಇದನ್ನೂ ಓದಿ: ಭೂಮಿಯ ಒಳಗೆ ಬೆಲೆ ಬಾಳುವ ವಸ್ತುಗಳು ಸಿಕ್ಕಿದರೆ ಅದು ಸರ್ಕಾರದ ಆಸ್ತಿ: ಹೆಚ್‌ಕೆ ಪಾಟೀಲ್
* ಕೈ ತೋಡೆ ಲಾಕ್ – 5 ಗ್ರಾಂ
* ಉಂಗುರ – 8 ಗ್ರಾಂ
* 1 ಬಿಳಿ ಹರಳು, 1 ಕೆಂಪು ಹರಳು, 1 ಹಸಿರು ಹರಳು ಅಂಗಿ ಗುಂಡಿ ಮತ್ತು 1 ತುಂಡು ಗೆಜ್ಜೆ -4 ಗ್ರಾಂ
* 2 ಕಡ್ಡಿಗಳು – 3 ಗ್ರಾಂ
* 22 ತೂತು ಬಿಲ್ಲೆಗಳು – 48 ಗ್ರಾಂ
* ಶಿಥಿಲಗೊಂಡ 1 ಮಡಿಕೆ, 1ಮುಚ್ಚಳ ಹಾಗೂ 3 ಸಣ್ಣ ತುಂಡು – 634 ಗ್ರಾಂ


