ಬೆಂಗಳೂರು: ಯೆಲ್ಲೋ ಲೈನ್ ಮೆಟ್ರೋ (Yellow Line Metro) ಪ್ರಯಾಣಿಕರಿಗೆ ಗುಡ್‌ನ್ಯೂಸ್ ಸಿಕ್ಕಿದೆ. ಸಂಕ್ರಾಂತಿಯಂದು (Sankranti) ಮಾರ್ಗಕ್ಕೆ ಮತ್ತೊಂದು ರೈಲು ಸೇರ್ಪಡೆಯಾಗಲಿದೆ.
ಇದೇ 15 ರಿಂದ ಟ್ರ‍್ಯಾಕ್‌ಗೆ 7 ನೇ ರೈಲು ಇಳಿಯಲಿದೆ. ಪೀಕ್ ಅವರ್‌ನಲ್ಲಿ ಪ್ರತಿ ರೈಲು ನಡುವಿನ ಸಮಯ 13 ರಿಂದ 10 ನಿಮಿಷಕ್ಕೆ ಇಳಿಯಲಿದೆ. ಇದನ್ನೂ ಓದಿ: ಮಾಜಿ ಸಚಿವ ಜನಾರ್ದನ ರೆಡ್ಡಿಗೆ ಮತ್ತೆ ಗಣಿ ಸಂಕಷ್ಟ
ಸದ್ಯ ಮಾರ್ಗದಲ್ಲಿ 6 ರೈಲು ಓಡಾಟ ಮಾಡುತ್ತಿದ್ದು, ಪೀಕ್ ಅವರ್‌ನಲ್ಲಿ 13 ನಿಮಿಷಕ್ಕೊಂದು ರೈಲು ಓಡಾಟ ಮಾಡುತ್ತಿವೆ. ಭಾನುವಾರ ಮತ್ತು ನಾನ್ ಪೀಕ್ ಅವರ್‌ನಲ್ಲಿ 15 ರಿಂದ 14 ನಿಮಿಷಕ್ಕೆ ರೈಲು ಓಡಾಟ ನಡುವಿನ ಅಂತರ ಇಳಿಕೆಯಾಗಲಿದೆ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ.

