Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಪಟ ಪಟ ಹಾರೋ ಗಾಳಿಪಟ… ಮಕರ ಸಂಕ್ರಾಂತಿಗೆ ಪಟ ಹಾರಿಸೋದೇಕೆ?
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Latest | ಪಟ ಪಟ ಹಾರೋ ಗಾಳಿಪಟ… ಮಕರ ಸಂಕ್ರಾಂತಿಗೆ ಪಟ ಹಾರಿಸೋದೇಕೆ?

Latest

ಪಟ ಪಟ ಹಾರೋ ಗಾಳಿಪಟ… ಮಕರ ಸಂಕ್ರಾಂತಿಗೆ ಪಟ ಹಾರಿಸೋದೇಕೆ?

Public TV
Last updated: January 13, 2026 4:23 pm
Public TV
Share
2 Min Read
WhatsApp Image 2026 01 13 at 4.16.37 PM
SHARE

ಭೂಮಿ ಮೇಲೆ ನಡೆಯುವ ಎಲ್ಲಾ ಚಟುವಟಿಕೆಗಳಿಗೂ ಸೂರ್ಯನೇ ಆಧಾರ. ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಸೂರ್ಯನು ಪ್ರವೇಶಿಸುವ ಕಾಲಕ್ಕೆ ಸಂಕ್ರಾಂತಿ ಅಥವಾ ಸಂಕ್ರಮಣ ಎಂದು ಕರೆಯಲಾಗುತ್ತದೆ. ಈ ಸಂಕ್ರಾಂತಿ ಸಂಭ್ರಮದ ದಿನ ಗಾಳಿಪಟ ಹಾರಿಸುವುದು ಒಂದು ಸಂಪ್ರದಾಯವಾಗಿದೆ. ಆದರೆ ಸಂಕ್ರಾಂತಿ ಹಬ್ಬದಂದು ಗಾಳಿಪಟ ಯಾಕೆ ಹಾರಿಸುತ್ತಾರೆ ಎನ್ನುವ ಬಗ್ಗೆ ಹಲವರಿಗೆ ಗೊತ್ತಿರಲ್ಲ. ಸಂಕ್ರಾಂತಿಯಂದು ಗಾಳಿಪಟ ಯಾಕೆ ಹಾರಿಸುತ್ತಾರೆ? ಏನಿದರ ವಿಶೇಷತೆ ಎನ್ನುವ ಬಗ್ಗೆ ಮಾಹಿತಿ ಇಲ್ಲಿದೆ.

ಮಕರ ಸಂಕ್ರಾಂತಿ, ದಕ್ಷಿಣಾಯನ, ಉತ್ತರಾಯಣಗಳ ದಿನಗಳು ಸಂಕ್ರಾಂತಿಯಂದು ಆರಂಭವಾಗುವುದರಿಂದ ಈ ದಿನ ವಿಶೇಷ ಮಹತ್ವವನ್ನು ಹೊಂದಿದೆ. ಪ್ರತಿ ವರ್ಷ ಜನವರಿ 14 ಅಥವಾ 15 (ಪುಷ್ಯಮಾಸ)ದಲ್ಲಿ ಬರುವ ಮಕರ ಸಂಕ್ರಾಂತಿಯನ್ನು `ಉತ್ತರಾಯಣ ಪುಣ್ಯಕಾಲ’ ಎಂದು ಕರೆಯುತ್ತಾರೆ. ಕೇವಲ ಬದುಕುವುದಕ್ಕೆ ಅಷ್ಟೇ ಅಲ್ಲದೆ, ಸಾಯುವುದಕ್ಕೂ ಉತ್ತರಾಯಣ, ಪುಣ್ಯಕಾಲವನ್ನು ನೋಡುತ್ತಾರೆ. ಈ ಪುಣ್ಯಮುಹೂರ್ತದಲ್ಲಿ ಪುಣ್ಯ ಸ್ಥಳಗಳಲ್ಲಿ ಹಾಗೂ ತುಂಗಾ, ಗಂಗಾ, ಕೃಷ್ಣಾ, ಕಾವೇರಿ ಮುಂತಾದ ಪುಣ್ಯ ನದಿಗಳಲ್ಲಿ ಲಕ್ಷಾಂತರ ದೈವಭಕ್ತರು ತೀರ್ಥಸ್ನಾನ ಮಾಡುತ್ತಾರೆ. ಹಾಗೆಯೇ ಉತ್ತರಾಯಣವನ್ನು ದೇವತೆಗಳ ಕಾಲವೆಂದು ಹಲವರು ನಂಬಿದ್ದಾರೆ.

Ellu Bella Makar Sankranti 2

ಮೊದಲು ದಕ್ಷಿಣದತ್ತ ವಾಲಿ ಚಲಿಸುತ್ತಿದ್ದ ಸೂರ್ಯ, ಸಂಕ್ರಮಣ ದಿನದಿಂದ ಉತ್ತರ ದಿಕ್ಕಿಗೆ ತಿರುಗಿ ಚಲಿಸುತ್ತಾನೆ. ಆಯನ ಎಂದರೆ ಚಲಿಸುವುದು, ಆದರಿಂದ ಉತ್ತರಾಯಣ, ದಕ್ಷಿಣಾಯನ ಎಂದು ಹೆಸರು ಸೃಷ್ಟಿಯಾಗಿದ್ದು. ಹೀಗೆ ಸೂರ್ಯ ಪಥ ಬದಲಾಗುವುದರಿಂದ ನಮ್ಮ ದೇಶದಲ್ಲಿ ಈ ಸಮಯಕ್ಕೆ ಚಳಿ ಕಡಿಮೆಯಾಗಿ ಹಗಲು ಹೆಚ್ಚು ಸಂಭವಿಸುತ್ತದೆ.

ಗಾಳಿಪಟವನ್ನು ಏಕೆ ಹಾರಿಸುತ್ತಾರೆ?
ಸಂಕ್ರಾಂತಿಯ ಹಬ್ಬದ ದಿನ ವರ್ಣ ರಂಜಿತ ಗಾಳಿಪಟಗಳನ್ನು ಆಗಸದಲ್ಲಿ ಹಾರಿಸಿ ಜನರು ಖುಷಿಪಡುತ್ತಾರೆ. ಈ ಸಂಭ್ರಮ ಉತ್ತರಾಯಣದಾದ್ಯಂತ ಮುಂದುವರಿಯುತ್ತದೆ. ಸಂಕ್ರಾಂತಿ ಒಂದೆಡೆ ಸುಗ್ಗಿಯ ಋತುವಿನ ಆಗಮನವನ್ನು ಸೂಚಿಸುವ ಹಬ್ಬವಾದರೆ, ಇನ್ನೊಂದೆಡೆ ಚಳಿಗಾಲದ ಅಂತ್ಯವನ್ನು ಸಾಂಕೇತಿಕವಾಗಿ ತೋರುವ ದಿನ ಎನ್ನಲಾಗುತ್ತೆ.

Photo credit Ocean Shores Kites

ಆರೋಗ್ಯ ಪ್ರಯೋಜನವೂ ಇದೆಯೇ?
ಚಳಿಗಾಲದಲ್ಲಿ ಸಾಕಷ್ಟು ಉತ್ಪತ್ತಿಯಾಗುವ ಕಾರಣಕ್ಕೆ ಮನುಷ್ಯ ಅನಾರೋಗ್ಯಕ್ಕೆ ತುತ್ತಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಆದ್ದರಿಂದ ಮಕರ ಸಂಕ್ರಾಂತಿಯ ಸಮಯದಲ್ಲಿ ಮುಂಜಾನೆ ಸೂರ್ಯನ ಕಿರಣಗಳು ದೇಹದ ಮೇಲೆ ಬೀಳುವುದರಿಂದ ಬ್ಯಾಕ್ಟೀರಿಯಾಗಳು ನೈಸರ್ಗಿಕವಾಗಿ ನಾಶವಾಗುತ್ತವೆ. ಜೊತೆಗೆ ದೇಹಕ್ಕೆ ವಿಟಮಿನ್ ಡಿ ದೊರಕುತ್ತದೆ. ಇದು ಚರ್ಮದ ಸಮಸ್ಯೆ ನಿವಾರಣೆಗೆ ಉತ್ತಮ ಪರಿಣಾಮ ಬೀರುತ್ತದೆ. ಈ ಕಾರಣಕ್ಕೆ ಸಂಕ್ರಾಂತಿಯ ದಿನ ಹಾಗೂ ಉತ್ತರಾಯಣ ಋತುವಿನ ಕಾಲದಲ್ಲಿ ಹೆಚ್ಚಾಗಿ ಗಾಳಿಪಟವನ್ನು ಹಾರಿಸಲಾಗುತ್ತದೆ.

ಸ್ವರ್ಗಕ್ಕೆ ಹಾರುವ ಗಾಳಿಪಟ
ಇನ್ನೊಂದು ನಂಬಿಕೆಯ ಪ್ರಕಾರ, ಸಂಕ್ರಾಂತಿ ಮತ್ತು ಉತ್ತರಾಯಣದ ಸಂದರ್ಭದಲ್ಲಿ ಗಾಳಿಪಟ ಹಾರಿಸಿದರೆ ಅವುಗಳು ಸ್ವರ್ಗಕ್ಕೆ ಹಾರಿಹೋಗುತ್ತವೆ ಎನ್ನುವ ನಂಬಿಕೆಯಿದೆ. ಉತ್ತಮ ಪೈರು ಹಾಗೂ ಜೀವನದಲ್ಲಿ ಖುಷಿ ನೀಡಿದ್ದಕ್ಕೆ ದೇವರಿಗೆ ಕೃತಜ್ಞತೆಯನ್ನು ಸಲ್ಲಿಸಲು ಸಂಕ್ರಾಂತಿಯಂದು ಗಾಳಿಪಟವನ್ನು ಹಾರಿಸುತ್ತಾರೆ ಎನ್ನುವ ಮಾತಿದೆ. ಅಲ್ಲದೆ ಉತ್ತರಾಯಣದ ಸಮಯದಲ್ಲಿ ನೀಲಿ ಬಾನಂಗಳ ಗಾಳಿಪಟ ಹಾರಿಸಲು ಸಜ್ಜಾದಂತೆ ಇರುತ್ತದೆ. ಅದು ಗಾಳಿಪಟಗಳನ್ನು ಹಾರಿಸಲು ಸೂಕ್ತ ಸಮಯವಾಗಿರುತ್ತದೆ. ಜೊತೆಗೆ ಬಾನಂಗಳದಲ್ಲಿ ಗಾಳಿಪಟದ ಬಣ್ಣದ ಚಿತ್ತಾರದ ಸುಂದರ ನೋಟ ಕಣ್ಣಿಗೆ ಆನಂದ ನೀಡುತ್ತದೆ. ಆದ್ದರಿಂದ ಗಾಳಿಪಟ ಹಾರಿಸಲಾಗುತ್ತದೆ ಎನ್ನಲಾಗುತ್ತೆ.

ಗಾಳಿಪಟ ಸ್ಪರ್ಧೆ
ಭಾರತದ ಬಹುತೇಕ ಭಾಗಗಳಲ್ಲಿ ಸಂಕ್ರಾಂತಿಯನ್ನು ಆಚರಿಸಲಾಗುತ್ತದೆ. ಸಾಂಪ್ರದಾಯಿಕ ಹಿನ್ನೆಲೆಯಲ್ಲಿ ಗಾಳಿಪಟ ಹಾರಿಸುವ ಪ್ರತೀತಿ ಕೂಡ ಭಾರತದಲ್ಲಿದೆ. ಈ ಸಂಪ್ರದಾಯ ಹಾಗೂ ರೂಢಿಯನ್ನು ಗಂಭೀರವಾಗಿ ಪರಿಗಣಿಸಲಾಗುತ್ತದೆ. ಹೀಗಾಗೆ ಹಲವೆಡೆ ಗಾಳಿಪಟ ಸ್ಪರ್ಧೆಯನ್ನು ಕೂಡ ಆಯೋಜಿಸಲಾಗುತ್ತದೆ. ಅದರಲ್ಲೂ ಗುಜರಾತ್‍ನಲ್ಲಿ ಗಾಳಿಪಟ ಹಾರಿಸುವ ದೊಡ್ಡ ಸ್ಪರ್ಧೆಯೇ ನಡೆಯುತ್ತದೆ. ಈ ಸ್ಪರ್ಧೆಯಲ್ಲಿ ಹಲವು ರಾಜ್ಯಗಳ ಜನರು ಭಾಗವಹಿಸುತ್ತಾರೆ. ಈ ಸುಂದರ ಸ್ಪರ್ಧೆಯನ್ನು ಕಣ್ತುಂಬಿಕೊಳ್ಳಲು ಕೇವಲ ದೇಶವಾಸಿಗಳಷ್ಟೇ ಅಲ್ಲದೆ ವಿದೇಶದಿಂದಲೂ ಪ್ರವಾಸಿಗರು ಕಣ್ತುಂಬಿಕೊಳ್ತಾರೆ.

TAGGED:festivalKite FlyingMakar Sankranti
Share This Article
Facebook Whatsapp Whatsapp Telegram

Cinema news

Rashika
ರಾಶಿಕಾ ಹೇಳೋ ಆ 5 ಫೈನಲಿಸ್ಟ್‌ಗಳ್ಯಾರು?
Cinema Districts Karnataka Latest Sandalwood Top Stories
Allu Arjun Lokesh Kanagaraj
ಅಲ್ಲು ಅರ್ಜುನ್, ಲೋಕೇಶ್ ಕಾಂಬಿನೇಷನ್ ಅದ್ಧೂರಿ ಬಜೆಟ್ ಚಿತ್ರ..!
Cinema Latest South cinema Top Stories
yash
ನಟ ಯಶ್ ಬರ್ತಡೇಗೆ ರಸ್ತೆಯಲ್ಲಿ ಬ್ಯಾನರ್ ಹಾಕಿದ್ದಕ್ಕೆ FIR
Bengaluru City Cinema Districts Karnataka Latest Main Post Sandalwood
YASH 5
ಮುಂಬೈ ಏರ್‌ಪೋರ್ಟ್‌ನಲ್ಲಿ ಕ್ಯಾಮೆರಾ ಕಣ್ಣಿಗೆ ಬಿದ್ದ ರಾಕಿಭಾಯ್
Cinema Sandalwood

You Might Also Like

Yellow Line Metro
Bengaluru City

ಯೆಲ್ಲೋ ಲೈನ್ ಮೆಟ್ರೋ ಪ್ರಯಾಣಿಕರಿಗೆ ಗುಡ್‌ನ್ಯೂಸ್ – ಸಂಕ್ರಾಂತಿಯಂದು ಟ್ರ್ಯಾಕ್‌ಗೆ 7ನೇ ರೈಲು

Public TV
By Public TV
16 minutes ago
Janardhana Reddy 2
Bellary

ಮಾಜಿ ಸಚಿವ ಜನಾರ್ದನ ರೆಡ್ಡಿಗೆ ಮತ್ತೆ ಗಣಿ ಸಂಕಷ್ಟ 

Public TV
By Public TV
43 minutes ago
supreme Court 1
Court

ಜನಪ್ರತಿನಿಧಿಗಳಿಗೆ ಸಂಬಂಧಿಸಿದ ಅಪರಾಧಗಳ ತನಿಖೆಗೆ ಪೂರ್ವಾನುಮತಿ ಕಡ್ಡಾಯ – ಸೆಕ್ಷನ್ 17Aಯ ಸಾಂವಿಧಾನಿಕ ಸಿಂಧುತ್ವ ಬಗ್ಗೆ ಸುಪ್ರೀಂ ವಿಭಜಿತ ತೀರ್ಪು

Public TV
By Public TV
48 minutes ago
sabarimala kerala karnataka
Chikkamagaluru

ಕೇರಳಿಗರ ಕ್ಯಾತೆ; ಕರ್ನಾಟಕದ ಮಾಲಾಧಾರಿಗಳ ವಾಹನಗಳನ್ನು 100 ಕಿಮೀ ದೂರದಲ್ಲೇ ತಡೆದ ಕೇರಳ ಸರ್ಕಾರ

Public TV
By Public TV
1 hour ago
armed robbery gang in chikkamagaluru
Chikkamagaluru

ಚಿಕ್ಕಮಗಳೂರಲ್ಲಿ ರಾತ್ರಿ ವೇಳೆ ಮಚ್ಚು, ರಾಡ್ ಹಿಡಿದು ಓಡಾಡ್ತಿದೆ ರಾಬರಿ ಗ್ಯಾಂಗ್‌!

Public TV
By Public TV
1 hour ago
iran protests
Latest

ಇರಾನ್‌ನಲ್ಲಿ ಭುಗಿಲೆದ್ದ ಪ್ರತಿಭಟನೆ; 2,000 ಮಂದಿ ಸಾವು

Public TV
By Public TV
1 hour ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?