ನವಿ ಮುಂಬೈ: ನ್ಯಾಟ್ ಸಿವರ್-ಬ್ರಂಟ್, ಹರ್ಮನ್‌ಪ್ರೀತ್ ಕೌರ್ ಸ್ಫೋಟಕ ಫಿಫ್ಟಿ ಆಟ ಹಾಗೂ ನಿಕೋಲಾ ಕ್ಯಾರಿ, ಅಮೆಲಿಯಾ ಕೆರ್ ಬೆಂಕಿ ಬೌಲಿಂಗ್ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಮುಂಬೈ 50 ರನ್‌ಗಳ ಭರ್ಜರಿ ಜಯಗಳಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ 20 ಓವರ್‌ಗಳಿಗೆ 4 ವಿಕೆಟ್ ನಷ್ಟಕ್ಕೆ 195 ರನ್ ಗಳಿಸಿತು. ಗುರಿ ಬೆನ್ನತ್ತಿದ ಡೆಲ್ಲಿ 19 ಓವರ್‌ಗೆ 145 ರನ್‌ಗೆ ಆಲೌಟ್ ಆಗಿ ಸೋಲೊಪ್ಪಿಕೊಂಡಿತು.
ಮುಂಬೈ ಪರ ನ್ಯಾಟ್ ಸಿವರ್-ಬ್ರಂಟ್ (70), ಹರ್ಮನ್‌ಪ್ರೀತ್ ಕೌರ್ (74) ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಇವರಿಬ್ಬರ ಹೊಡಿಬಡಿ ಆಟದಿಂದ ತಂಡ ಬೃಹತ್ ಮೊತ್ತ ಪೇರಿಸಿತ್ತು.
ಬ್ಯಾಟಿಂಗ್ ವೈಫಲ್ಯದಿಂದ ಡೆಲ್ಲಿ ಕ್ಯಾಪಿಟಲ್ಸ್ ಸೋಲನುಭವಿಸಿದೆ. ತಂಡದ ಪರ ಚಿನೆಲ್ಲೆ ಹೆನ್ರಿ (56) ಫಿಫ್ಟಿ ಏಕಾಂಗಿ ಹೋರಾಟ ಬಿಟ್ಟರೆ ಉಳಿದ ಬ್ಯಾಟರ್‌ಗಳು ಕಳಪೆ ಪ್ರದರ್ಶನ ನೀಡಿದರು. ಅಂತಿಮವಾಗಿ ಡೆಲ್ಲಿ 145 ರನ್‌ಗಳಿಗೆ ಆಲೌಟ್ ಆಗಿ ಸೋತಿತು. ಮುಂಬೈ ಪರ ನಿಕೋಲಾ ಕ್ಯಾರಿ, ಅಮೆಲಿಯಾ ಕೆರ್ ತಲಾ ಮೂರು ವಿಕೆಟ್ ಕಿತ್ತು ಗಮನ ಸೆಳೆದರು.

