ಬೆಂಗಳೂರು: ನಮ್ಮ ಮೆಟ್ರೋ ಪ್ರಯಾಣಿಕರಿಗೆ ಬಿಎಂಆರ್‌ಸಿಎಲ್ (BMRCL) ಗುಡ್‌ನ್ಯೂಸ್ ನೀಡಿದೆ. ಶೀಘ್ರವೇ ಪಿಂಕ್ ಲೈನ್ ಮೆಟ್ರೋ (Pink Line Metro) ಟ್ರ್ಯಾಕಿಗಿಳಿಯಲಿದ್ದು, ನಾಳೆಯಿಂದ ರೋಲಿಂಗ್ ಸ್ಟಾಕ್ ಟೆಸ್ಟ್ ಆರಂಭವಾಗಲಿದೆ.
ಈ ಕುರಿತು ಬಿಎಂಆರ್‌ಸಿಎಲ್ ಮಾಹಿತಿ ಹಂಚಿಕೊಂಡಿದೆ. ನಾಳೆಯಿಂದ (ಜ.11) ರೋಲಿಂಗ್ ಸ್ಟಾಕ್ ಪರೀಕ್ಷೆಗಳು ಆರಂಭವಾಗಲಿದ್ದು, ಈ ಮೂಲಕ ಸಿಗ್ನಲಿಂಗ್ ವ್ಯವಸ್ಥೆ, ಬ್ರೇಕ್‌ನ ಕಾರ್ಯಕ್ಷಮತೆ, ರೈಲಿನ ವೇಗ, ವಿದ್ಯುತ್ ಹಾಗೂ ದೂರಸಂಪರ್ಕ ವ್ಯವಸ್ಥೆಗಳ ಪರೀಕ್ಷೆ ನಡೆಯಲಿದೆ. ಇದನ್ನೂ ಓದಿ: ಅಪ್ರಾಪ್ತೆ ಮೇಲೆ ಗ್ಯಾಂಗ್ ರೇಪ್; 8 ಆರೋಪಿಗಳ ಬಂಧನ
ಕಾಳೆನ ಅಗ್ರಹಾರದಿಂದ ತಾವರೆಕೆರೆಯವರೆಗೆ ಇರುವ ಗುಲಾಬಿ ಮಾರ್ಗದಲ್ಲಿ (ಸುಮಾರು 7.5 ಕಿ.ಮೀ ಉದ್ದ) ರೋಲಿಂಗ್ ಸ್ಟಾಕ್ ಪರೀಕ್ಷೆಗಳನ್ನು ನಡೆಸಲಾಗುವುದು. ಜ.11ರಿಂದ ಏಪ್ರಿಲ್ ಮಧ್ಯಭಾಗದವರೆಗೆ ನಡೆಯಲಿದೆ. ಈ ಮುಖ್ಯ ಪರೀಕ್ಷೆಗಳು ವಾಣಿಜ್ಯ ಸಂಚಾರ ಮಾಡುವ ಮೊದಲು ಕೈಗೊಳ್ಳಲಾಗುವ ಅತ್ಯಂತ ಮಹತ್ವದ ಚಟುವಟಿಕೆಯಾಗಿದ್ದು, ರೈಲುಗಳ ಕಾರ್ಯಕ್ಷಮತೆ ಹಾಗೂ ವ್ಯವಸ್ಥೆಗಳ ಪರಸ್ಪರ ಸಂಯೋಜನೆಯ ಸಮಗ್ರ ಪರಿಶೀಲನೆಯನ್ನು ಒಳಗೊಂಡಿರುತ್ತದೆ. ಅನುಮೋದನೆ ಪಡೆಯಲು ಈ ಪರೀಕ್ಷೆಗಳು ಅಗತ್ಯವಾಗಿದೆ.
ಈ ಸಮಯದಲ್ಲಿ ಟ್ರಾಕ್ಷನ್ ಮತ್ತು ಬ್ರೇಕ್, ಆಸಿಲೇಷನ್, ಸಿಗ್ನಲಿಂಗ್, ವಿದ್ಯುತ್ ಮತ್ತು ದೂರಸಂಪರ್ಕ ವ್ಯವಸ್ಥೆಗಳೊಂದಿಗೆ ಏಕೀಕರಣ ಸೇರಿದಂತೆ ಹಲವು ಪರೀಕ್ಷೆಗಳು ನಡೆಸಲಾಗುತ್ತವೆ. ಇದು ಗುಲಾಬಿ ಮಾರ್ಗದಲ್ಲಿನ ಯೋಜನೆಯ ಮಹತ್ವದ ಮೈಲಿಗಲ್ಲಿನತ್ತ ಸಾಗುತ್ತಿರುವುದನ್ನು ಸೂಚಿಸುತ್ತದೆ ಎಂದು ತಿಳಿಸಿದೆ.ಇದನ್ನೂ ಓದಿ: ಬೆಳಗಾವಿ | ಪಾಲಿಕೆ ಆಯುಕ್ತರ ಡಿಪಿ ಹಾಕೊಂಡು ಉಪ ಆಯುಕ್ತರಿಗೆ ಹಣಕ್ಕೆ ಮೆಸೇಜ್ – ಸೈಬರ್ ಖದೀಮರ ಹೊಸ ಆಟ!

