ಚೆನ್ನೈನಲ್ಲಿ ಮಹಿಳೆಯೋರ್ವರು ತಡರಾತ್ರಿ ಆಪ್‌ವೊಂದರ ಮೂಲಕ ಮೂರು ಪ್ಯಾಕೆಟ್ ಇಲಿ ಪಾಷಾಣ ಆರ್ಡರ್ ಮಾಡಿದ್ದರು. ಅದರಂತೆ ಡೆಲಿವರಿ ಬಾಯ್ ಪಾರ್ಸೆಲ್‌ನ್ನು ನೀಡಲು ಹೋದಾಗ ಮನೆಯ ಬಾಗಿಲು ತೆರೆದು ಮಹಿಳೆ ಅಳುತ್ತಿದ್ದರು. ಇದನ್ನು ಗಮನಿಸಿದ ಡೆಲಿವರಿ ಬಾಯ್, ಸುಮ್ಮನೆ ಆರ್ಡರ್ ನೀಡಿ ಅಲ್ಲಿಂದ ಹೊರಗೆ ಹೋಗದೆ, ಆಕೆಯ ಬಳಿ ಹೋಗಿ ಮಾತನಾಡಿಸಿದ್ದಾನೆ. ಇದನ್ನೂ ಓದಿ: ಪಂಜಾಬ್ | ಪತ್ನಿ, ಇಬ್ಬರು ಹೆಣ್ಣುಮಕ್ಕನ್ನು ಗುಂಡಿಕ್ಕಿ ಕೊಂದು, ಆತ್ಮಹತ್ಯೆಗೆ ಶರಣಾದ ವ್ಯಕ್ತಿ
ಸಮಸ್ಯೆ ಏನೇ ಇರಲಿ, ದಯವಿಟ್ಟು ಆತ್ಮಹತ್ಯೆಯಂತಹ ನಿರ್ಧಾರ ತೆಗೆದುಕೊಳ್ಳಬೇಡಿ. ನಿಮ್ಮ ಜೀವ ಅಮೂಲ್ಯವಾದುದು. ಕಷ್ಟದ ಕ್ಷಣಗಳು ಶಾಶ್ವತವಲ್ಲ, ಅವು ಕಳೆದು ಹೋಗುತ್ತವೆ ಎಂದು ಸಮಾಧಾನಪಡಿಸಿದ್ದಾರೆ. ಬಳಿಕ ಆರ್ಡರ್ ಕ್ಯಾನ್ಸಲ್ ಮಾಡಿ, ವಿಷದ ಪ್ಯಾಕೆಟ್‌ಗಳನ್ನು ವಾಪಸ್ ತೆಗೆದುಕೊಂಡು ಹೋಗಿದ್ದಾನೆ.
ಈ ಘಟನೆಯನ್ನು ಯುವಕ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಇಂದು ನಾನು ಏನೋ ಒಂದು ದೊಡ್ಡ ಸಾಧನೆ ಮಾಡಿದ ತೃಪ್ತಿ ಇದೆ ಎಂದು ಬರೆದುಕೊಂಡಿದ್ದಾನೆ. ನೆಟ್ಟಿಗರು `ರಿಯಲ್ ಹೀರೋ’ ಎಂದು ಶ್ಲಾಘಿಸಿದ್ದಾರೆ.ಇದನ್ನೂ ಓದಿ: ದೆಹಲಿ ಸಾಕೇತ್ ಕೋರ್ಟ್‌ನಲ್ಲಿ ಕ್ಲರ್ಕ್ ಆತ್ಮಹತ್ಯೆ – ಕೆಲಸದ ಒತ್ತಡಕ್ಕೆ ಬಲಿಯಾದ ಹರೀಶ್ ಸಿಂಗ್

