ಬೆಂಗಳೂರು: ಹುಬ್ಬಳ್ಳಿಯಲ್ಲಿ (Hubballi) ಬಿಜೆಪಿ ಕಾರ್ಯಕರ್ತೆಯೇ ಬಟ್ಟೆ ಹರಿದುಕೊಂಡಿದ್ದಾಳೆ. ಬಿಜೆಪಿ ರಾಜಕೀಯ ಆರೋಪ ಮಾಡುತ್ತಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ (Santosh Lad) ಕಿಡಿಕಾರಿದ್ದಾರೆ.
ವಿಧಾನ ಸೌಧದಲ್ಲಿ ಮಾತನಾಡಿದ ಅವರು, ಆ ಮಹಿಳೆಯೇ ಪೊಲೀಸರಿಗೆ ಕಚ್ಚಿದ್ದಾಳೆ. 10 ಜನ ಕಾನ್‌ಸ್ಟೇಬಲ್‌ಗಳ ಮೇಲೆ ಹಲ್ಲೆ ಮಾಡಿದ್ದಾಳೆ. ಆ ಮಹಿಳೆಯೇ ಬಟ್ಟೆ ಬಿಚ್ಚಿದ್ದಾರೆ. ಕರ್ನಾಟಕದಲ್ಲಿ ನಮ್ಮ ಪೊಲೀಸರು ಬಟ್ಟೆ ಬಿಚ್ಚುವ ಸಂಪ್ರದಾಯ ಯಾವತ್ತು ಇಟ್ಟುಕೊಂಡಿಲ್ಲ ಅಂತ ತಿಳಿಸಿದರು.
ಆಕೆಯ ಮೇಲೆ ಹಲ್ಲೆ ಆಗಿರೋದು ನಿಜ. ಹಲ್ಲೆ ಆಗಿರುವ ವಿಚಾರಕ್ಕೆ ಕ್ರಮ ಆಗಬೇಕು. ದೂರು ದಾಖಲಾಗಿದೆ ಕಾನೂನು ಪ್ರಕಾರ ಕ್ರಮ ಆಗುತ್ತದೆ. ನಾನೇ ಉಸ್ತುವಾರಿ ಸಚಿವನಾಗಿ ಹಲ್ಲೆ ವಿಚಾರಕ್ಕೆ ಕ್ರಮ ತೆಗೆದುಕೊಳ್ಳಲು ಸೂಚನೆ ನೀಡಿದ್ದೇನೆ ಎಂದರು. ಇದನ್ನೂ ಓದಿ: ಮಹಿಳೆಯೇ ಬಟ್ಟೆ ಬಿಚ್ಚಿ ಸೀನ್ ಕ್ರಿಯೇಟ್ ಮಾಡಿದ್ದಾಳೆ, ಆಕೆ ವಿರುದ್ಧ 9 ಕೇಸ್ ಇದೆ: ಹು-ಧಾ ಆಯುಕ್ತ ಶಶಿಕುಮಾರ್
ನಾನು ಸಮರ್ಥನೆ ಮಾಡಲ್ಲ:
ಬಳ್ಳಾರಿಯಲ್ಲಾದ ಗಲಾಟೆ ಪ್ರಕರಣಕ್ಕೆ ನನ್ನ ಬೆಂಬಲ ಇಲ್ಲ. ಅ ಘಟನೆ ನಾನು ಸಮರ್ಥನೆ ಮಾಡುವುದಿಲ್ಲ. ಈಗಾಗಲೇ ಸಿಎಂ,ಸರ್ಕಾರ ಕ್ರಮ ತೆಗೆದುಕೊಂಡಿದ್ದಾರೆ. ಇನ್ನು ಅನೇಕ ವಿಡಿಯೋಗಳು ಸೋಶಿಯಲ್ ಮೀಡಿಯದಲ್ಲಿ ಬರುತ್ತಿವೆ. ಸರ್ಕಾರ ಕಾನೂನು ಕ್ರಮ ತೆಗೆದುಕೊಳ್ಳುತ್ತದೆ ಎಂದರು.
ಮೃತನ ಕುಟುಂಬಕ್ಕೆ ಸಚಿವ ಜಮೀರ್ ಅಹಮದ್ 25 ಲಕ್ಷ ರೂ. ನಗದು ಕೊಟ್ಟ ವಿಚಾರ ಆದಾಯ ತೆರಿಗೆ ಇಲಾಖೆಗೆ ಬರುದಿಲ್ವೇ ಎಂಬ ಪ್ರಶ್ನೆಗೆ ಅದು ಐಟಿಗೆ ಬರಬಹುದು. ಆದರೆ ಜಮೀರ್ ನಗದು ನೀಡಿರುವುದು ನನಗೆ ಗೊತ್ತಿಲ್ಲ. ನಾನು ನೋಡಿಲ್ಲ ಎಂದು ಹೇಳಿ ಜಾರಿಕೊಂಡರು.

