ಬೆಂಗಳೂರು: ಗಾಂಧಿನಗರ ವಿಧಾನಸಭಾ ಕ್ಷೇತ್ರದಲ್ಲಿ ವೈಟ್ ಟಾಪಿಂಗ್ ಭರದಿಂದ ಸಾಗ್ತಿದೆ. ಏಳೆಂಟು ಕಡೆ ವೈಟ್ ಟಾಪಿಂಗ್ ಆಗ್ತಿದ್ದು ಸಂಚಾರ ದಟ್ಟಣೆಯಿಂದ ಜನ ಹೈರಾಣಾಗಿದ್ದಾರೆ. ಸಂಚಾರ ದಟ್ಟಣೆ ಅಂತಾ ಸ್ಥಳೀಯ ಶಾಸಕರು, ಸಚಿವ ದಿನೇಶ್ ಗುಂಡೂರಾವ್ (Dinesh Gundu Rao) ಅವರನ್ನ ಕೇಳಿದ್ರೆ ಏನು ಮಾಡೋಕೆ ಆಗಲ್ಲ ಎಂಬ ಉತ್ತರ. ಮತ್ತೊಂಡು ಕಡೆ ಗಾಂಧಿ ನಗರ ವಿಧಾನಸಭಾ ಕ್ಷೇತ್ರದಲ್ಲೂ ಪೇ ಪಾರ್ಕಿಂಗ್ ಶುರುವಾಗುವ ಸುಳಿವು ನೀಡಿದ್ದಾರೆ.
ಬೆಂಗಳೂರಿನ (Bengaluru) ಜನದಟ್ಟಣೆ, ಸಂಚಾರ ದಟ್ಟಣೆ (Traffic congestion) ಹೆಚ್ಚಿರುವ ಪ್ರದೇಶ ಅಂದರೆ ಅದು ಗಾಂಧಿನಗರ ವಿಧಾನಸಭಾ ಕ್ಷೇತ್ರ. ಗಾಂಧಿನಗರ ವಿಧಾನಸಭಾ ಕ್ಷೇತ್ರದ ಹಲವು ಕಡೆ ವೈಟ್ ಟಾಪಿಂಗ್ ಕಾಮಗಾರಿ ಶುರುವಾಗಿದೆ. ಅದರಲ್ಲೂ ಮೆಜೆಸ್ಟಿಕ್ ಅಕ್ಕಪಕ್ಕದ ರಸ್ತೆಗಳಲ್ಲಿ ವೈಟ್ ಟಾಪಿಂಗ್ ಕೆಲಸ ಶುರುವಾಗ್ತಿದೆ. ಉಪ್ಪಾರಪೇಟೆಯಿಂದ ಶಾಂತಲಾ ಸಿಲ್ಕ್ ಸರ್ಕಲ್ ಮತ್ತು ಮೆಜೆಸ್ಟಿಕ್‌ನಿಂದ ಮಂತ್ರಿ ಮಾಲ್ ರಸ್ತೆಯಲ್ಲಿ ವೈಟ್ ಟಾಪಿಂಗ್ ಕೆಲಸ ಆಗ್ತಿದೆ. ಇದರಿಂದ ರಸ್ತೆ ಬಂದ್ ಆಗಿ ಟ್ರಾಫಿಕ್ ಸಮಸ್ಯೆ ಆಗ್ತಿದೆ. ಜನ ಹೈರಾಣಾಗಿದ್ದಾರೆ. ಪೀಕ್ ಅವರ್‌ನಲ್ಲಿ ಟ್ರಾಫಿಕ್ ಸಮಸ್ಯೆ ಹೆಚ್ಚಾಗ್ತಿದೆ. ಸಂಚಾರ ಕಷ್ಟ ಆಗ್ತಿದೆ.
ಗಾಂಧಿನಗರ ವಿಧಾನಸಭಾ ಕ್ಷೇತ್ರದ ವೈಟ್ ಟಾಪಿಂಗ್‌ನಿಂದ ಸಂಚಾರ ದಟ್ಟಣೆ ಬಗ್ಗೆ ಸ್ಥಳೀಯ ಶಾಸಕ ಹಾಗೂ ಸಚಿವ ದಿನೇಶ್ ಗುಂಡೂರಾವ್ ಅವರನ್ನ ಕೇಳಿದ್ರೆ ಏನು ಮಾಡೋದಕ್ಕೆ ಆಗಲ್ಲ ಅಡ್ಜೆಸ್ಟ್ ಮಾಡಿಕೊಳ್ಳಿ ಬೇಗ ಕೆಲಸ ಮುಗಿಸುತ್ತೇವೆ ಅಂತಿದ್ದಾರೆ.
ಗಾಂಧಿನಗರದಲ್ಲೂ ಪೇ ಅಂಡ್ ಪಾರ್ಕ್?
ಗಾಂಧಿನಗರ ವಿಧಾನಸಭಾ ಕ್ಷೇತ್ರದಲ್ಲಿ ಪಾರ್ಕಿಂಗ್ ಸಮಸ್ಯೆ ಇದೆ. ಅಡ್ಡಾ ದಿಡ್ಡಿ ವೆಹಿಕಲ್‌ಗಳನ್ನ ನಿಲ್ಲಿಸುತ್ತಾರೆ. ಮೆಜೆಸ್ಟಿಕ್, ಕೆಜಿ ರಸ್ತೆ, ಫ್ರೀಡಂ ಪಾರ್ಕ್ ರಸ್ತೆಗಳು ಸೇರಿದಂತೆ ಹಲವು ಕಡೆ ಪೇ ಅಂಡ್ ಪಾರ್ಕಿಂಗ್ ಮಾಡೋ ಪ್ಲ್ಯಾನ್ ಇದ್ಯಂತೆ. ಜಿಬಿಎ ಅದನ್ನ ಮಾಡುತ್ತೆ ಅಂತ ಪೇ ಅಂಡ್ ಪಾರ್ಕಿಂಗ್ ಶುರು ಬಗ್ಗೆ ಸುಳಿವನ್ನು ಸಚಿವ ದಿನೇಶ್ ಗುಂಡೂರಾವ್ ನೀಡಿದ್ದಾರೆ.
ಗಾಂಧಿನಗರ ವಿಧಾನಸಭಾ ಕ್ಷೇತ್ರದಲ್ಲಿ ವೈಟ್ ಟಾಪಿಂಗ್‌ನಿಂದ ಸಂಚಾರ ದಟ್ಟಣೆ ಒಂದು ಕಡೆ ಆದರೆ ಮತ್ತೊಂದು ಕಡೆ ಪೇ ಅಂಡ್ ಪಾರ್ಕಿಂಗ್‌ಗೆ ಸ್ಥಳ ಗುರುತು ಆಗಲಿದ್ದು. ಯಾವಾಗ ಫೈನಲ್ ಆಗಲಿದೆ ಕಾದು ನೋಡಬೇಕಿದೆ.



