ಬಿಗ್ ಮನೆಗೆ ಎಂಟ್ರಿ ಕೊಟ್ಟಾಗ ಮಾಳು ಜೊತೆ ಹೆಚ್ಚು ಸಮಯ ಕಳೆದವರು ಸ್ಪಂದನಾ. ಹೀಗಾಗಿ ಮನೆಯಿಂದ ಹೊರ ಬಂದ ಬಳಿಕ ಮಾಳು ಕಠೋರ ಮಾತಿನ ಬಗ್ಗೆ ಅಚ್ಚರಿ ಹೊರಹಾಕಿದ್ದಾರೆ. ತಾವೇ ಸರ್ವಶ್ರೇಷ್ಠ ಎಂಬರ್ಥದ ಮಾಳು ನಿಪನಾಳ (Malu Nipanal) ಹೇಳಿಕೆಗೆ ಕುರಿತು ಸ್ಪಂದನಾ ʻಪಬ್ಲಿಕ್ ಟಿವಿʼ ಸಂದರ್ಶನದಲ್ಲಿ ಮಾತನಾಡಿದ್ದಾರೆ.
ಕಳೆದವಾರ ನಡೆದ ಡಬಲ್ ಎಲಿಮಿನೇಷನ್ ಮೇಳೆ ಮಾಳು ಮನೆಯಿಂದ ಹೊರಬಂದು, ಸ್ಪಂದನಾ ಸೇಫ್ ಆಗಿದ್ದರು. ಬಿಗ್ ಮನೆಯಿಂದ ಹೊರ ಬಂದ ಬಳಿಕ ಮಾಳು ಬಿಗ್‌ಬಾಸ್ ಗೆಲ್ಲೋ ಸಾಮರ್ಥ್ಯ ತಮಗೆ ಮಾತ್ರವೇ ಇತ್ತು ಎಂಬರ್ಥದಲ್ಲಿ ಮಾತನಾಡಿದ್ದರು. ಈ ವಿಚಾರಕ್ಕೆ ಪ್ರತಿಕ್ರಿಯೆ ಕೊಟ್ಟ ಸ್ಪಂದನಾ ಎಮೋಷನಲ್ ಆಗಿ ಮಾತಮಾಡಿರಬಹುದು, ನಮ್ಮ ಜನ ನನ್ನನ್ನ ಕೈ ಹಿಡಿಯುತ್ತಾರೆ, ನೀನು ಹೆದರಬೇಡ ಅಪ್ಪಿ ಎಂದು ಮಾಳು ನನಗೆ ಧೈರ್ಯ ಹೇಳ್ತಿದ್ದರು. ಜೊತೆಗೆ ಭಯವೂ ಅವರಲ್ಲಿತ್ತು. ಬಹುಶಃ ಹೊರಬಂದ್ಮೇಲೆ ಎಮೋಷನಲ್ ಆಗಿ ಆ ರೀತಿ ಮಾತನಾಡಿರಬಹುದು. ಅವರ ಸ್ಟೇಟ್‌ಮೆಂಟ್ ಕೇಳಿ ಅಚ್ಚರಿ ಆಯ್ತು ಎಂದಿದ್ದಾರೆ.
ಮಾಳು ಅವರಿಗೆ ಮನೆಯಲ್ಲಿ ಇದ್ದಾಗಲೂ ಕಾನ್ಫಿಡೆನ್ಸ್ ಇತ್ತು. 2ನೇ ವಾರ ಕಳೆದ ಮೇಲೆ ಹೆಂಗೋ ಏನೋ ಅನ್ನೋ ಭಯವೂ ಅವರಲ್ಲಿತ್ತು. ಹೊರಗೆ ಬಂದ ಮೇಲೆ ಯಾಕೆ ಹಾಗೆ ಮಾತನಾಡಿದ್ರೋ ಗೊತ್ತಿಲ್ಲ. ಒನ್ ಬೈ ಒನ್ ಸಂದರ್ಶನ ಇತ್ತು. ಎಮೋಷನಲ್ ಆಗಿ ಹಾಗೆ ಹೇಳಿದ್ದಾರೆ ಅನ್ಸುತ್ತೆ. ಆದ್ರೆ ವ್ಯಕ್ತಿತ್ವದಲ್ಲಿ ಹಾಗೆಲ್ಲಾ ಇಲ್ಲ ಅಂತ ಸ್ಪಂದನಾ ಹೇಳಿದ್ದಾರೆ.

