ವಾಷಿಂಗ್ಟನ್: ವೆನೆಜುವೆಲಾದ ಅಧ್ಯಕ್ಷನ ಸೆರೆ ಬಳಿಕ ಈಗ ಕೊಲಂಬಿಯಾ ಅಧ್ಯಕ್ಷರಿಗೆ ಡೊನಾಲ್ಡ್ ಟ್ರಂಪ್ (Donald Trump) ಎಚ್ಚರಿಕೆ ನೀಡಿದ್ದಾರೆ.
ವೆನೆಜುವೆಲಾದಲ್ಲಿ (Venezuela) ವಾಷಿಂಗ್ಟನ್ ಮಿಲಿಟರಿ ಆಪರೇಷನ್ ಅಬ್ಸೊಲ್ಯೂಟ್ ರೆಸೊಲ್ವ್ ನಡೆಸಿದ ಒಂದು ದಿನದ ನಂತರ ನಿಕೋಲಸ್ ಮಡುರೊ (Nicolas Maduro) ಅವರನ್ನು ಸೆರೆ ಹಿಡಿದು ನ್ಯೂಯಾರ್ಕ್ನ ಜೈಲಿಗೆ ಹಾಕಲಾಗಿದೆ. ಇದರ ಬೆನ್ನಲ್ಲೇ ಈಗ ಕೊಲಂಬಿಯಾದ ಅಧ್ಯಕ್ಷ ಗುಸ್ಟಾವೊ ಪೆಟ್ರೋ (Gustavo Petro) ಅವರಿಗೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ನಿಮ್ಮ ಕಾರ್ಯವೈಖರಿ ನೋಡಿಕೊಳ್ಳಿ ಎಂದು ವಾರ್ನಿಂಗ್ ಕೊಟ್ಟಿದ್ದಾರೆ. ಇದನ್ನೂ ಓದಿ: ವೆನೆಜುವೆಲಾದ ಮೇಲೆ ಅಮೆರಿಕ ದಾಳಿ – 40 ಮಂದಿ ನಾಗರಿಕರು ಸಾವು
ಯುಎಸ್ ಕ್ರಮಗಳು ಲ್ಯಾಟಿನ್ ಅಮೆರಿಕದ ಸಾರ್ವಭೌಮತ್ವದ ಮೇಲಿನ ದಾಳಿ. ಅವು ಮಾನವೀಯ ಬಿಕ್ಕಟ್ಟಿಗೆ ಕಾರಣವಾಗುತ್ತದೆ ಎಂದು ವೆನೆಜುವೆಲಾ ಮೇಲಿನ ದಾಳಿ ಕುರಿತು ಕೊಲಂಬಿಯಾ ಅಧ್ಯಕ್ಷರು ಪ್ರತಿಕ್ರಿಯಿಸಿದ್ದರು. ಈ ಹೇಳಿಕೆಗೆ ಟ್ರಂಪ್, ಅವರು ಕೊಕೇನ್ ತಯಾರಿಸುತ್ತಿದ್ದಾರೆ. ಅದನ್ನು ಯುನೈಟೆಡ್ ಸ್ಟೇಟ್ಸ್ಗೆ ಕಳುಹಿಸುತ್ತಿದ್ದಾರೆ. ಆದ್ದರಿಂದ ಅವರು ತಮ್ಮ ಮಾದಕ ದ್ರವ್ಯಗಳ ಕಡೆಗೆ ನೋಡಿಕೊಳ್ಳಲಿ ಎಂದು ತಿರುಗೇಟು ನೀಡಿದ್ದಾರೆ.
ಮಾದಕವಸ್ತು ಕಳ್ಳಸಾಗಣೆ ಹಡಗುಗಳ ವಿರುದ್ಧ ಕ್ರಮಕ್ಕೆ ಟ್ರಂಪ್ ಕೆರಿಬಿಯನ್ನಲ್ಲಿ ಆದೇಶಿಸಿ, ಮಿಲಿಟರಿ ನಿಯೋಜಿಸಿದ್ದಾರೆ. ಇದಕ್ಕೆ ಪೆಟ್ರೋ ತೀವ್ರ ಟೀಕಾಕಾರರಾಗಿದ್ದಾರೆ. ತಮ್ಮ ಮಾದಕವಸ್ತು ವಿರೋಧಿ ಕಾರ್ಯತಂತ್ರದ ಭಾಗವಾಗಿ, ಟ್ರಂಪ್ ಇತ್ತೀಚೆಗೆ ಕೊಲಂಬಿಯಾದಲ್ಲಿ ಮಾದಕವಸ್ತು ಉತ್ಪಾದನಾ ಘಟಕಗಳನ್ನು ಹೊಡೆದು ಹಾಕ್ತೀವಿ ಎಂದು ತಿಳಿಸಿದ್ದರು. ‘ಇದು ಆಕ್ರಮಣಕಾರಿ ಬೆದರಿಕೆ’ ಎಂದು ಪೆಟ್ರೋ ಖಂಡಿಸಿದ್ದಾರೆ. ಇದನ್ನೂ ಓದಿ: ಅಮೆರಿಕ ಯುದ್ಧ ನೌಕೆಯಲ್ಲಿ ವೆನೆಜುವೆಲಾ ಅಧ್ಯಕ್ಷ – ಮೊದಲ ಚಿತ್ರ ಬಿಡುಗಡೆ ಮಾಡಿದ ಟ್ರಂಪ್
ವೆನೆಜುವೆಲಾ ದೇಶವನ್ನು ತಾತ್ಕಾಲಿಕವಾಗಿ ಅಮೆರಿಕವೇ ಮುನ್ನಡೆಸಲಿದೆ ಎಂದು ಟ್ರಂಪ್ ಹೇಳಿಕೆ ಹೇಳಿಕೆ ನೀಡಿದ್ದರು. ಆ ದೇಶದಲ್ಲಿ ಸುರಕ್ಷಿತ ಮತ್ತು ಸರಿಯಾದ ಪರಿವರ್ತನೆಯನ್ನು ಮಾಡಲು ಸಾಧ್ಯವಾಗುವವರೆಗೆ ನಾವು ದೇಶವನ್ನು ಮುನ್ನಡೆಸುತ್ತೇವೆ. ಅಗತ್ಯವಿದ್ದರೆ ಎರಡನೇ ಮತ್ತು ದೊಡ್ಡ ದಾಳಿಗೆ ಸಿದ್ಧ ಎಂದು ಟ್ರಂಪ್ ಘೋಷಿಸಿದ್ದಾರೆ.


