ಬೆಂಗಳೂರು: ಇವಿಎಂಗಳ ವಿಶ್ವಾರ್ಹತೆ ಕುರಿತ ಸಮೀಕ್ಷೆಯನ್ನು ರಾಜ್ಯ ಸರ್ಕಾರದ ಯೋಜನೆ ಮತ್ತು ಸಾಂಖ್ಯಿಕ ಇಲಾಖೆಯ ವೆಬ್‌ಸೈಟ್‌ನಿಂದ ಡಿಲೀಟ್ ಮಾಡಲಾಗಿದೆ. ಇವಿಎಂ ಮೇಲೆ ರಾಜ್ಯದ ಜನ ವಿಶ್ವಾಸ ಇಟ್ಟಿದ್ದಾರೆ ಎಂಬ ಅಂಶ ಈ ಸಮೀಕ್ಷೆಯಿಂದ ಬಯಲಾಗಿತ್ತು. ಇದು ಕಾಂಗ್ರೆಸ್‌ನ ಮತಚೋರಿ ಅಭಿಯಾನ ಹಾಗೂ ಇವಿಎಂ ವಿರುದ್ಧದ ಆರೋಪಗಳಿಗೆ ಭಾರೀ ಹಿನ್ನಡೆ ತಂದಿತ್ತು. ಇದೇ ಕಾರಣಕ್ಕೆ ರಾಜ್ಯ ಸರ್ಕಾರ ವೆಬ್‌ಸೈಟ್‌ನಿಂದ ಸಮೀಕ್ಷೆ ಡಿಲೀಟ್ ಮಾಡಿಸಿದೆ ಎನ್ನಲಾಗಿದೆ.
ಇನ್ನು ಸಮೀಕ್ಷೆ ಡಿಲೀಟ್ ವಿಚಾರಕ್ಕೆ ಬಿಜೆಪಿ ತೀವ್ರವಾಗಿ ಟೀಕಿಸಿದೆ. ಈ ಸಂಬಂಧ ಬಿಜೆಪಿ ತನ್ನ ಎಕ್ಸ್‌ನಲ್ಲಿ, ಸಮೀಕ್ಷೆಯಿಂದ ಗಾಬರಿ ಬಿದ್ದು ಡಿಲೀಟ್ ಮಾಡಿಸಲಾಗಿದೆ. ಕುರ್ಚಿಗಾಗಿ ಸಮೀಕ್ಷೆ ಅಳಿಸಿ ಹಾಕಲಾಗಿದೆ. ರಾಹುಲ್ ಗಾಂಧಿ, ಸಿದ್ದರಾಮಯ್ಯಗೆ ಈ ವರದಿ ಮುಖಭಂಗ ತಂದಿತ್ತು ಅಂತ ಟೀಕಿಸಲಾಗಿದೆ. ಇದನ್ನೂ ಓದಿ: EVM ನಿಖರ ಫಲಿತಾಂಶ ಕೊಡುತ್ತೆ – ಕಾಂಗ್ರೆಸ್‌ಗೆ ಭಾರೀ ಮುಜುಗರ ತರಿಸುವ ಸಮೀಕ್ಷೆ ರಾಜ್ಯದಿಂದಲೇ ಪ್ರಕಟ
ಇನ್ನು ಬೆಂಗಳೂರಿನಲ್ಲಿ ಮಾತಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಕರ್ನಾಟಕ ಸರ್ಕಾರದ ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಈ ಸರ್ವೆ ಮಾಡಿಸಿದೆ. ಈಗ ಸಿದ್ದರಾಮಯ್ಯ ಅವರಿಗೆ ನೆನಪಾಗಿದೆ, ಡಾ.ಬಾಲಸುಬ್ರಹ್ಮಣ್ಯಂ ಅವರು ಕೇಂದ್ರದ ಹುದ್ದೆ ಯಲ್ಲಿದ್ದಾರೆ ಅಂತ. ರಾಹುಲ್ ಗಾಂಧಿ ಗಾಳಿ ಸಿದ್ದರಾಮಯ್ಯಗೆ ಬೀಸೋದು ಬೇಡ. 2024 ಕ್ಕೂ ಮುಂಚಿನ ಎಕ್ಸಿಟ್‌ಪೋಲ್ ಫಲಿತಾಂಶ ಬೋಗಸ್ ಅಂದಿದ್ರು. ಮೊನ್ನೆ ಮಹಾರಾಷ್ಟ್ರದ ಎಕ್ಸಿಟ್ ಪೋಲ್ ಅವರ ಪರವಾಗಿ ಬಂದಾಗ. ನಮ್ಮ ಪರ ಬಂದರೂ ಸೋಲಿಸಿದ್ದಾರೆ ಅಂದಿದ್ರು. ಹಾಗೆ ಸಿದ್ದರಾಮಯ್ಯ ರಾಹುಲ್ ಅವರ ಹಾಗೆ ಮಾತಾಡ್ತಿದ್ದಾರೆ ಅಂತ ಕಾಲೆಳೆದ್ರು.
ಇನ್ನು ಪರಿಷತ್ ಸದಸ್ಯ ಎನ್ ರವಿಕುಮಾರ್ ಮಾತಾಡಿ, ಸಮೀಕ್ಷೆ ಕಾಂಗ್ರೆಸ್‌ಗೆ ಮುಜುಗರ ತಂದಿದೆ, ಹಾಗಾಗಿ ಡಿಲೀಟ್ ಮಾಡಿದ್ದಾರೆ ಎಂದು ಹೇಳಿದ್ರು. ಇದನ್ನೂ ಓದಿ: ಮೋದಿ ಹೊಗಳುಭಟ್ಟರ ಸಮೀಕ್ಷಾ ವರದಿಯಲ್ಲಿ ಯಾವ ವಿಶ್ವಾಸಾರ್ಹತೆ ಇರಲು ಸಾಧ್ಯ? – EVM ಸರ್ವೆಗೆ ಸಿಎಂ ಕಿಡಿ


