ವಾಷಿಂಗ್ಟನ್: ವೆನೆಜುವೆಲಾ ಮೇಲಿಂದು ವೈಮಾನಿಕ ದಾಳಿ ನಡೆಸಿದ ಅಮೆರಿಕ, ಕೆಲವೇ ಗಂಟೆಗಳಲ್ಲಿ ವೆನೆಜುವೆಲಾ ಅಧ್ಯಕ್ಷ ನಿಕೋಲಸ್ ಮಡುರೊ (Nicolas Maduro) ಮತ್ತು ಅವರ ಪತ್ನಿ ಸಿಲಿಯಾ ಫ್ಲೋರ್ಸ್ ಅವರನ್ನು ಸೆರೆ ಹಿಡಿದಿರುವುದಾಗಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಪ್ರಕಟಿಸಿದ್ದರು. ಈ ಬೆಳವಣಿಗೆ ನಡೆದ ಕೆಲವೇ ಹೊತ್ತಿನಲ್ಲಿ ಅಮೆರಿಕದ ಯುದ್ಧನೌಕೆಯಲ್ಲಿ ನಿಕೋಲಸ್ ಮಡುರೊ ಇರುವ ಮೊದಲ ಚಿತ್ರವನ್ನ ಬಿಡುಗಡೆ ಮಾಡಿದ್ದಾರೆ.
ತನ್ನ ಸೋಷಿಯಲ್ ಮೀಡಿಯಾ ವೇದಿಕೆ, ಟ್ರೂತ್ ಸೋಷಿಯಲ್‌ನಲ್ಲಿ ಚಿತ್ರ ಬಿಡುಗಡೆ ಮಾಡಿರುವ ಟ್ರಂಪ್ ವೆನಿಜುವೆಲಾದ ಅಧ್ಯಕ್ಷನನ್ನ ನ್ಯೂಯಾರ್ಕ್‌ಗೆ ಕರೆದೊಯ್ಯಲಾಗುತ್ತಿದೆ, ಮಡುರೊ ಪತ್ನಿ ಯುಎಸ್‌ಎಸ್ ಐವೊ ಜಿಮಾದಲ್ಲಿದ್ದು, ಅವರೂ ನ್ಯೂಯಾರ್ಕ್‌ಗೆ ಹೋಗ್ತಿದ್ದಾರೆ ಅಂತ ತಿಳಿಸಿದ್ದಾರೆ. ಇದನ್ನೂ ಓದಿ: ಬಸ್ ಡ್ರೈವರ್‌ನಿಂದ ವೆನೆಜುವೆಲಾ ಅಧ್ಯಕ್ಷನಾಗುವವರೆಗೆ – ನಿಕೋಲಸ್ ಮಡುರೊ ಬದುಕಿನ ರೋಚಕ ಕಥೆ!
ಟ್ರಂಪ್ ಬಿಡುಗಡೆ ಮಾಡಿದ ಚಿತ್ರದಲ್ಲಿ ಇಂದು ಪದಚ್ಯುತಿಗೊಂಡ ಮಡುರೊ ಕೈಗೆ ಕೋಳ ಹಾಕಿರುವುದು ಹಾಗೂ ಕಣ್ಣಿಗೆ ಬಟ್ಟೆ ಕಟ್ಟಿ ಕೂರಿಸಿರುವುದು ಕಂಡುಬಂದಿದೆ. ಕುಡಿಯುವ ನೀರಿನ ಬಾಟಲ್‌ವೊಂದನ್ನ ಕೈನಲ್ಲಿ ಹಿಡಿದುಕೊಂಡಿದ್ದಾರೆ. ಇದನ್ನೂ ಓದಿ: Explainer | ಅಮೆರಿಕ, ರಷ್ಯಾದಲ್ಲಿ ಸೈಕ್ಲೋನ್ ಬಾಂಬ್ ಸ್ಫೋಟ – 1891ರಲ್ಲಿ ಕಂಡಿದ್ದ ಭಯಾನಕ ಪರಿಸ್ಥಿತಿ ಮತ್ತೆ ಮರುಕಳಿಸುತ್ತಾ?
ಈಗಾಗಲೇ ಅಮೆರಿಕ ಮಡುರೊ ವಿರುದ್ಧ ಮಾದಕ ದ್ರವ್ಯ, ಭಯೋತ್ಪಾದನಾ ಪಿತೂರಿ, ಕೊಕೇನ್ ಆಮದು ಪಿತೂರಿ, ಮಿಷಿನ್ ಗನ್ ಹಾಗೂ ವಿನಾಶಕಾರಿ ಸಾಧನಗಳನ್ನು ಹೊಂದಿರುವ ಪಿತೂರಿಗಳು ಸೇರಿ ಹಲವು ದೋಷಾರೋಪಗಳನ್ನ ಹೊರಿಸಿದೆ. ಇದನ್ನೂ ಓದಿ: ವೆನೆಜುವೆಲಾದ ಮೇಲೆ ಏರ್‌ಸ್ಟೈಕ್, ಅಧ್ಯಕ್ಷ ಸೆರೆ: ಟ್ರಂಪ್ ಘೋಷಣೆ
ಸತತ ಪ್ರಯತ್ನಗಳು ವಿಫಲವಾಗಿ ದಾಳಿ ಮಾಡಿದ ಅಮೆರಿಕ
2013ರಿಂದ ಸತತವಾಗಿ ವೆನೆಜುವೆಲಾದ ಅಧ್ಯಕ್ಷ ಸ್ಥಾನದಲ್ಲಿರುವ ಮಡುರೊ ಅವರ ಅಧಿಕಾರವನ್ನ ಟ್ರಂಪ್ ಆಡಳಿತ ಪ್ರಶ್ನಿಸುತ್ತಿದೆ. ಇತ್ತೀಚೆಗೆ, ಅಂದ್ರೆ 2024ರಲ್ಲಿ ವೆನೆಜುವೆಲಾದಲ್ಲಿ ನಡೆದಿರುವ ಚುನಾವಣೆಯು ನ್ಯಾಯಯುತವಾಗಿಲ್ಲ ಎಂಬುದು ಅಮೆರಿಕದ ವಾದ. ಹಲವಾರು ಚುನಾವಣಾ ಅಕ್ರಮಗಳನ್ನು ಎಸಗಿ ಮಡುರೊ ಅವರು ಅಧಿಕಾರಕ್ಕೆ ಪದೇ ಪದೇ ಬರುತ್ತಿದ್ದಾರೆ ಎಂಬುದು ಅಮೆರಿಕದ ವಾದ. ಅದೇ ಕಾರಣಕ್ಕಾಗಿ, ವೆನೆಜುವಲಾದ ಆಂತರಿಕ ವಿಚಾರಗಳಲ್ಲಿ ಅಮೆರಿಕ ಹಸ್ತಕ್ಷೇಪ ಮಾಡುತ್ತಾ, ಹಲವಾರು ರಾಜತಾಂತ್ರಿಕ ಪ್ರಯತ್ನಗಳು ಮತ್ತು ಆರ್ಥಿಕ ಒತ್ತಡಗಳನ್ನು ಹೇರುವ ಮೂಲಕ ಮಡುರೊ ಅವರನ್ನು ಅಧಿಕಾರದಿಂದ ಕೆಳಕ್ಕಿಳಿಸಲು ಅಮೆರಿಕ ಸತತವಾಗಿ ಪ್ರಯತ್ನಿಸುತ್ತಲೇ ಇದೆ. ಆ ಎಲ್ಲಾ ಪ್ರಯತ್ನಗಳು ವಿಫಲವಾಗಿದ್ದಕ್ಕೆ ಈಗ ನೇರವಾಗಿ ದಾಳಿ ನಡೆಸಲು ಮುಂದಾಗಿದೆ ಅಮೆರಿಕ.


