ಬೆಂಗಳೂರು: ಕೋಗಿಲು ಬಡಾವಣೆ ಕುರಿತ ವರದಿಯನ್ನು ಇನ್ನೆರಡು ದಿನಗಳಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರಿಗೆ ನೀಡುವುದಾಗಿ ಶಾಸಕ ಎಸ್.ಆರ್.ವಿಶ್ವನಾಥ್ (SR Vishwanath) ತಿಳಿಸಿದ್ದಾರೆ. ಈ ಜಾಗ ಬಿಬಿಎಂಪಿಗೆ ಹಸ್ತಾಂತರ ಆದ ವಿವರ, ಸರ್ವೇ ನಂಬರ್, ಗೂಗಲ್ ಮ್ಯಾಪ್, ಎಲ್ಲ ಕಾನೂನು ಮತ್ತಿತರ ವಿವರವನ್ನು ಅದು ಒಳಗೊಂಡಿರುತ್ತದೆ ಎಂದು ವಿವರಿಸಿದರು.
ಯಲಹಂಕದ (Yalahanka) ಕೋಗಿಲು ಲೇಔಟ್ (Kogilu Layout) ಬಳಿಯಿರುವ ಫಕೀರ್ ಕಾಲೋನಿ ಮತ್ತು ವಾಸೀಮ್ ಬಡಾವಣೆಯಲ್ಲಿ ಮನೆ- ಗುಡಿಸಲುಗಳ ನೆಲಸಮ ಕುರಿತ ಸತ್ಯಾಸತ್ಯತೆಯನ್ನು ತಿಳಿಯಲು ರಾಜ್ಯ ಬಿಜೆಪಿ ವತಿಯಿಂದ ಸತ್ಯಶೋಧನಾ ತಂಡವು ಇಂದು ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿತು. ಬಹುತೇಕ ನೂರಕ್ಕೆ 95%ರಷ್ಟು ಮನೆ- ಗುಡಿಸಲುಗಳನ್ನು ಕಳೆದ ಎರಡು ವರ್ಷಗಳಿಂದ ಕಟ್ಟಲಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಧರ್ಮಸ್ಥಳ ಬುರುಡೆ ಕೇಸ್| ಶೀಘ್ರವೇ ತನಿಖೆ ನಡೆಸಿ ಪೂರ್ಣ ವರದಿ ಸಲ್ಲಿಸಿ: ಎಸ್‌ಐಟಿಗೆ ಕೋರ್ಟ್ ಆದೇಶ
ರಾಜ್ಯಾಧ್ಯಕ್ಷರು ಈ ವರದಿಯನ್ನು ಮಾನ್ಯ ರಾಜ್ಯಪಾಲರಿಗೆ ನೀಡುವುದು ಅಥವಾ ನ್ಯಾಯಾಲಯದಲ್ಲಿ ಪ್ರಶ್ನಿಸುವ ಕುರಿತು ಚಿಂತನೆ ನಡೆದಿದೆ. ಸ್ಥಳೀಯರಿಗೂ 2.5 ಲಕ್ಷದಲ್ಲೇ ಮನೆಗಳನ್ನು ಕೊಡಿ ಎಂದು ಅವರು ಆಗ್ರಹಿಸಿದರು. ನಾನೂ 100 ಗುಡಿಸಲು ಹಾಕಿಸುವೆ. ಒಡೆದ ಬಳಿಕ ಮನೆ ಕೊಡಬೇಕಾಗುತ್ತದೆ ಎಂದು ತಿಳಿಸಿದರು. ನೆರೆ ಪರಿಹಾರ ಸಂತ್ರಸ್ತರು, ರಾಜಕಾಲುವೆಗಳ ಮೇಲೆ ಮನೆ ಕಟ್ಟಿ ಕಳಕೊಂಡವರಿಗೆ ಮನೆ ನೀಡಿಲ್ಲ. ಇದೆಲ್ಲವೂ ಮತದ ರಾಜಕಾರಣಕ್ಕಾಗಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. 5ರಂದು ಕೋಗಿಲು ಬಡಾವಣೆಯಲ್ಲೇ ದೊಡ್ಡ ಪ್ರಮಾಣದ ಹೋರಾಟ ನಡೆಸಲಿದ್ದೇವೆ. ರಾಜೀವ್ ಗಾಂಧಿ ಗೃಹ ನಿರ್ಮಾಣ ನಿಗಮದಡಿ ಅರ್ಜಿ ಹಾಕಿದವರು ಹೋರಾಟದಲ್ಲಿ ಭಾಗವಹಿಸುತ್ತಾರೆ. ಅಂತಿಮವಾಗಿ ಕೋರ್ಟಿಗೆ ಹೋಗುತ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: ವಿಬಿ-ಜಿ ರಾಮ್ ಜಿ ಕಾಯ್ದೆಯ ವಿರುದ್ಧ ಕಾಂಗ್ರೆಸ್ ದೇಶವ್ಯಾಪಿ ಪ್ರತಿಭಟನೆ
ವಾಸೀಂ ಒದ್ದು ಒಳಗೆ ಹಾಕಲು ಆಗ್ರಹ:
ಹಣ ಪಡೆದು ಅಕ್ರಮವಾಗಿ ಒಪ್ಪಂದದಡಿ ಮನೆ ಕೊಟ್ಟ, ವಾಸೀಂ ಆದರೂ ಇರಲಿ, ವಿಶ್ವನಾಥ್ ಆದರೂ ಇರಲಿ, ಆತನನ್ನು ಒದ್ದು ಒಳಗಡೆ ಹಾಕಬೇಕು. ಕಾಂಗ್ರೆಸ್ಸಿನವರು ಇವತ್ತು ಇಂಥವರಿಗೆಲ್ಲ ರಕ್ಷಣೆ ಕೊಡುತ್ತಾರೆ ಎಂದು ಟೀಕಿಸಿದರು. ವಾಸೀಂ ಬಡಾವಣೆ ನಿರ್ಮಿಸಿದಾತ ತನ್ನ ಹೆಸರನ್ನು ಇಟ್ಟುಕೊಂಡಿದ್ದಾರೆ. ಅವರು ಕಾಂಗ್ರೆಸ್ಸಿನ ಸ್ಥಳೀಯ ಮುಖಂಡ ಮತ್ತು ಸಚಿವರಿಗೆ ಹತ್ತಿರದ ವ್ಯಕ್ತಿ ಎಂದು ಪ್ರಶ್ನೆಗೆ ಉತ್ತರಿಸಿದರು. 4 ಲಕ್ಷ, 3.5 ಲಕ್ಷಕ್ಕೆ ಗುಡಿಸಲು ಹಾಕಿಸಲು ತಿಳಿಸಿದ ಧ್ವನಿ ಮುದ್ರಿಕೆ ನಮ್ಮ ಬಳಿ ಇದೆ. ಇವರೇ ಕೆಲವು ಬಾಡಿಗೆ ಮನೆಗಳನ್ನು ಕೊಟ್ಟಿದ್ದಾರೆ ಎಂದರು. ಇದನ್ನೂ ಓದಿ: ಬೈಯ್ಯಪ್ಪನಹಳ್ಳಿ NGEF ಜಾಗದಲ್ಲಿ 65 ಎಕರೆ ವೃಕ್ಷೋದ್ಯಾನ: ಎಂಬಿ ಪಾಟೀಲ್
ನೂರಾರು ಜನರಿಗೆ ಮೋಸ ಮಾಡಿದ ಈ ವ್ಯಕ್ತಿ ವಿರುದ್ಧ ಒಂದೇ ಒಂದು ಕೇಸ್ ಮಾಡಿಲ್ಲ. ಅವರಿಗೆ ಆಧಾರ್ ಕಾರ್ಡ್, ಮತದಾರರ ಗುರುತುಚೀಟಿ ಮಾಡಿಸಿಕೊಟ್ಟಿದ್ದಾರೆ. ಅವನ್ನು ಪರಿಶೀಲನೆಗೆ ಅಧಿಕಾರಿಗಳಿಗೆ ನೀಡುವುದಾಗಿ ಹೇಳಿದರು. ವೇಣುಗೋಪಾಲ್ ಕೇರಳದ ಮುಖ್ಯಮಂತ್ರಿ ಹೇಳಿದರೆಂಬ ಅಲ್ಲಿನ ರಾಜಕೀಯ ತೆವಲಿಗಾಗಿ ಇಲ್ಲಿ ಹೀಗೆ ಮಾಡುತ್ತಿದ್ದಾರೆ ಎಂದು ಟೀಕಿಸಿದರು. ಇದನ್ನೂ ಓದಿ: ಕೈಯಲ್ಲಿ ಡಿಗ್ರಿ, ಜೇಬಿನಲ್ಲಿ ಆರ್‌ಡಿಎಕ್ಸ್: ವೈಟ್-ಕಾಲರ್ ಉಗ್ರವಾದ ಬಗ್ಗೆ ರಾಜನಾಥ್ ಸಿಂಗ್ ಕಳವಳ
ನನ್ನ ಕ್ಷೇತ್ರದಲ್ಲಿ 20 ಸಾವಿರ ಮನೆ ನಿರ್ಮಾಣ ನಡೆದಿದೆ. 6 ವರ್ಷದ ಹಿಂದೆ 1 ಲಕ್ಷ ಕಟ್ಟಿ ಮನೆಗಾಗಿ ಬೇಡಿಕೆ ಇಟ್ಟವರಿಗೆ ಇನ್ನೂ ಮನೆ ಕೊಟ್ಟಿಲ್ಲ. ರಾಜೀವ್ ಗಾಂಧಿ ಗೃಹ ನಿರ್ಮಾಣ ನಿಗಮದಡಿ ಬೈಯಪ್ಪನಹಳ್ಳಿಯಲ್ಲಿ ನಿರ್ಮಿಸಿದ ಮನೆಗಳನ್ನು ಕೊಡುವುದಾಗಿ ಹೇಳಿದ್ದಾರೆ. ಅದಕ್ಕೂ ಒಂದು ಕಾನೂನಿದೆ. 5 ವರ್ಷ ಬೆಂಗಳೂರು ನಗರದಲ್ಲಿ ಇದ್ದು, ಅಧಿಕಾರಿಗಳು ಕೊಟ್ಟ ವಾಸಸ್ಥಳ ದೃಢೀಕರಣ ಪತ್ರ ಬೇಕಿದೆ. ಆನ್‌ಲೈನ್‌ನಲ್ಲಿ ಅರ್ಜಿ ಹಾಕಬೇಕು. ಇದರಡಿ ಅಲ್ಪಸಂಖ್ಯಾತರಿಗೆ 10% ಮನೆಗಳಿವೆ ಎಂದು ತಿಳಿಸಿದರು. ಅಲ್ಪಸಂಖ್ಯಾತರ ಕೋಟಾದಡಿ ಬೈಯಪ್ಪನಹಳ್ಳಿಯಲ್ಲಿ 58 ಮನೆ ಖಾಲಿ ಇದೆ. ಈಗ 250 ಜನರು ಇಲ್ಲಿದ್ದುದಾಗಿ ಹೇಳಿದರೆ, 40ರಷ್ಟು ಮನೆಯ ವಿವರ ಮಾತ್ರ ಸಿಗುತ್ತಿದೆ ಎಂದು ಅಧಿಕಾರಿಗಳು ಹೇಳುತ್ತಾರೆ. 94 ಸಿಸಿ ಅಡಿ ಮನೆ ಕೊಡಲು 2015ರ ಮೊದಲೇ ಮನೆ ಕಟ್ಟಿರಬೇಕು. ಅವರು ಸಕಾಲದಲ್ಲಿ ಅರ್ಜಿ ಹಾಕಿರಬೇಕು. ಹಸ್ತಾಂತರ ಆದ ಜಾಗದಲ್ಲಿ ತೆರವು ಕಾರ್ಯಕ್ಕೆ ಇದರಡಿ ಮನೆ ಕೊಡಲಾಗದು ಎಂದು ವಿವರಿಸಿದರು. ಇದನ್ನೂ ಓದಿ: ಸಂಪುಟ ಪುನರ್‌ರಚನೆಯಾದಾಗ ಮಂತ್ರಿ ಸ್ಥಾನ ಸಿಗುತ್ತೆ: ಶಿವಲಿಂಗೇಗೌಡ ವಿಶ್ವಾಸ
ಬೈಯಪ್ಪನಹಳ್ಳಿಯದು ಅಪಾರ್ಟ್‌ಮೆಂಟ್ ಮನೆ. ಎಸ್+ 12, ಲಿಫ್ಟ್ ಇರುವಂಥದ್ದು. ಇಂಥ ಅಪಾರ್ಟ್ಮೆಂಟ್ ಮನೆ ಕೊಟ್ಟರೆ ಕನಿಷ್ಠ 500ರಿಂದ 600 ರೂ. ನಿರ್ವಹಣಾ ವೆಚ್ಚ ಕೊಡಬೇಕಾಗುತ್ತದೆ. ಜೆರಾಕ್ಸ್‌ಗೂ ದುಡ್ಡಿಲ್ಲ ಎನ್ನುವ ಬಡವರು ಹೇಗೆ ಇದನ್ನು ನಿರ್ವಹಿಸಲು ಸಾಧ್ಯ ಎಂದು ಕೇಳಿದರು. ಇದನ್ನೂ ಓದಿ: ಸುಂಟರಗಾಳಿಗೆ ಕುಸಿದ ಪೆಂಡಾಲ್ – ಸತೀಶ್ ಜಾರಕಿಹೊಳಿ ಅಪಾಯದಿಂದ ಪಾರು
ಬಿಬಿಎಂಪಿಯಿಂದ 5 ಲಕ್ಷ, ಅಲ್ಪಸಂಖ್ಯಾತರ ಇಲಾಖೆಯಿಂದ 2.5 ಲಕ್ಷ ನೀಡುವುದಾಗಿ ಹೇಳಿದ್ದಾರೆ. ಇವರು 2.5 ಲಕ್ಷ ಕೊಟ್ಟರೆ ಸಾಕು ಎನ್ನುತ್ತಾರೆ. ಹೀಗೆ ಹಣ ಕೊಡಲಾಗದು ಎಂದರು. ಅಸಹಜ ಹೇಳಿಕೆ ಕೊಟ್ಟಿದ್ದಾರೆ. ಸರ್ಕಾರ ಇವರ ಕಿವಿಯಲ್ಲಿ ಹೂವು ಇಡುತ್ತಿದೆ ಎಂದು ದೂರಿದರು. ಇದನ್ನೂ ಓದಿ: ಕಾರವಾರ: ಹೆದ್ದಾರಿಯಲ್ಲಿ ಸ್ಫೋಟಗೊಂಡ ಸಿಲಿಂಡರ್ – ಲಾರಿ ಬೆಂಕಿಗಾಹುತಿ


