ಟೆಹ್ರಾನ್: ಇರಾನ್ (Iran) ದೇಶದಲ್ಲಿ ಸರ್ಕಾರದ ವಿರುದ್ಧ ಜನಾಕ್ರೋಶ ಭುಲೆದ್ದಿದೆ. ಆರ್ಥಿಕ ಸಂಕಷ್ಟ, ಹಣದುಬ್ಬರದಿಂದ ಇರಾನ್ ಜನತೆ ಸಂಕಷ್ಟ ಅನುಭವಿಸುತ್ತಿದ್ದು, ಸರ್ವೋಚ್ಛ ನಾಯಕ ಖಮೇನಿ ವಿರುದ್ಧ ಆಕ್ರೋಶ ತಾರಕಕ್ಕೇರಿದೆ.
ಕಳೆದ ಭಾನುವಾರದಿಂದ ಶುರುವಾದ ಪ್ರತಿಭಟನೆಗಳಲ್ಲಿ (Iran Protest) ಬಲಿಯಾದವರ ಸಂಖ್ಯೆ 7ಕ್ಕೆ ಏರಿಕೆಯಾಗಿದೆ. ಮುಲ್ಲಾಗಳು ದೇಶ ಬಿಟ್ಟು ತೊಲಗಿ ಅಂತ ಘೋಷಣೆಗಳು ಮೊಳಗಿವೆ. ‘ಮುಲ್ಲಾ ಮರೆಯಾಗುವವರೆಗೂ ಈ ನೆಲ ಮುಕ್ತವಾಗುವುದಿಲ್ಲ ಘೋಷವಾಕ್ಯಗಳು ಕೇಳಿ ಬರುತ್ತಿವೆ. ಹಲವೆಡೆ ಇಸ್ಲಾಮಿಕ್ ರಿಪಬ್ಲಿಕ್‌ನ ಧ್ವಜಗಳನ್ನು ಸುಡಲಾಗುತ್ತಿದೆ. ಹತ್ತಕ್ಕೂ ಹೆಚ್ಚು ವಿವಿಗಳ ವಿದ್ಯಾರ್ಥಿಗಳು ಪ್ರತಿಭಟನೆಗಳಲ್ಲಿ ಭಾಗಿಯಾಗಿದ್ದಾರೆ. ವರ್ತಕರು, ಅಂಗಡಿ ಮಾಲೀಕರು ಅಂಗಡಿ ಮುಂಗಟ್ಟು ಬಂದ್ ಮಾಡಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ. ಇದನ್ನೂ ಓದಿ: ಜರ್ಮನಿಯ ಮನೆಯಲ್ಲಿ ಬೆಂಕಿ ಅವಘಡ; ಹೊಸ ವರ್ಷದಂದೇ ಭಾರತೀಯ ವಿದ್ಯಾರ್ಥಿ ಸಾವು

ಅಮೆರಿಕ ಮಧ್ಯಪ್ರವೇಶ
ಇನ್ನೂ ಇರಾನ್‌ನಲ್ಲಿ ಶಾಂತಿಯುತ ಪ್ರತಿಭಟನಾಕಾರರ ಮೇಲೆ ಗುಂಡಿನ ದಾಳಿ ನಡೆಸಿ ಹಿಂಸಾತ್ಮಕವಾಗಿ ಹತ್ತಿಕ್ಕಿದರೆ, ಅವರ ರಕ್ಷಣೆಗೆ ಅಮೆರಿಕ ಮಧ್ಯಪ್ರವೇಶಿಸಲಿದೆ, ತಕ್ಕ ಉತ್ತರ ಕೊಡಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಹೇಳಿದ್ದಾರೆ. ಇದನ್ನೂ ಓದಿ: ನ್ಯೂಯಾರ್ಕ್ ಮೇಯರ್ ಆಗಿ ಪ್ರಮಾಣ ವಚನ – ಇತಿಹಾಸ ಬರೆದ ಮಮ್ದಾನಿ
ತಮ್ಮ ಸಾಮಾಜಿಕ ಮಾಧ್ಯಮ ವೇದಿಕೆ ಟ್ರುತ್ ಸೋಶಿಯಲ್ ನಲ್ಲಿ ಪ್ರಕಟಿಸಿದ ಹೇಳಿಕೆಯಲ್ಲಿ, ಇರಾನ್ ನಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಅಮೆರಿಕ ನಿಕಟವಾಗಿ ಗಮನಿಸುತ್ತಿದೆ. ಪರಿಸ್ಥಿತಿ ಗಂಭೀರವಾದರೆ ಕ್ರಮ ಕೈಗೊಳ್ಳಲು ಸಿದ್ಧವಿದೆ ಎಂದು ಟ್ರಂಪ್ ವಾರ್ನಿಂಗ್ ಕೊಟ್ಟಿದ್ದಾರೆ.

ಆರ್ಥಿಕ ಸಂಕಷ್ಟ – ದಂಗೆ ಎದ್ದ ಜನ
ಆರ್ಥಿಕ ಸಂಕಷ್ಟದ ಹಿನ್ನೆಲೆಯಲ್ಲಿ ಕಳೆದ 3 ವರ್ಷಗಳಲ್ಲಿ ಇರಾನ್ ನಲ್ಲಿ ಕಂಡುಬಂದ ಅತಿದೊಡ್ಡ ಪ್ರತಿಭಟನೆಗಳು ಹಲವು ಪ್ರಾಂತ್ಯಗಳಲ್ಲಿ ಹಿಂಸಾತ್ಮಕ ಸ್ವರೂಪ ಪಡೆದುಕೊಂಡಿವೆ. ಈ ಪ್ರತಿಭಟನೆಗಳಲ್ಲಿ ಸಾವನ್ನಪ್ಪಿದವರ ಸಂಖ್ಯೆ 7ಕ್ಕೆ ತಲುಪಿದೆ. ಈ ಮಧ್ಯೆ ಇರಾನ್ ಕರೆನ್ಸಿ ಇರಾನ್ ರಿಯಾಲ್ ತೀವ್ರ ಕುಸಿತ ಕಂಡಿದೆ. ಇದನ್ನೂ ಓದಿ: ಬಾಂಗ್ಲಾದಲ್ಲಿ ಮತ್ತೆ ಹಿಂದೂಗಳ ಮೇಲೆ ದಾಳಿ – ಕೆರೆಗೆ ಹಾರಿ ಪಾರಾದ ಉದ್ಯಮಿ

