ನವದೆಹಲಿ: 2020ರ ನಂತರ 2025ರ ಡಿಸೆಂಬರ್‌ನಲ್ಲಿಯೇ ದಾಖಲೆಯ ಚಳಿಗೆ ದೆಹಲಿ (Delhi) ಸಾಕ್ಷಿಯಾಗಿದ್ದು, ಕನಿಷ್ಠ ತಾಪಮಾನ 6.4 ಡಿಗ್ರಿಗೆ ಇಳಿದಿದೆ.
ಬುಧವಾರ (ಡಿ.31) ದೆಹಲಿಯಲ್ಲಿ ಗರಿಷ್ಠ ತಾಪಮಾನ 14.2 ಡಿಗ್ರಿ ಸೆಲ್ಸಿಯಸ್‌ಗೆ ಕುಸಿದಿದ್ದು, ಕನಿಷ್ಠ ತಾಪಮಾನ 6.4 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಇದನ್ನೂ ಓದಿ: ಸ್ವಿಸ್ ಸ್ಕೀ ರೆಸಾರ್ಟ್‌ನ ಬಾರ್‌ನಲ್ಲಿ ಸ್ಫೋಟ: ಹಲವರು ಸಾವು
ಭಾರತೀಯ ಹವಾಮಾನ ಇಲಾಖೆ ಪ್ರಕಾರ, ದೆಹಲಿಯಲ್ಲಿ `ಕೋಲ್ಡ್ ಡೇ’ ಹಾಗೂ ದಟ್ಟ ಮಂಜು ಮುಂದುವರಿದಿದ್ದು, ಸಫದರ್‌ಜಂಗ್ ಮತ್ತು ಪಾಲಂನಲ್ಲಿ ಗೋಚರತೆ 50 ಮೀಟರ್‌ಗೆ ಕುಸಿದಿದೆ. ಮುಂದಿನ ಐದು ದಿನಗಳವರೆಗೆ ಮಂಜು ಮುಂದುವರಿಯುವ ಸಾಧ್ಯತೆಯಿದೆ ಎಂದು ವರದಿ ಮಾಡಿದೆ.
ಪಂಜಾಬ್ ಮತ್ತು ಹರಿಯಾಣದ ಮೇಲೆ ಉಂಟಾದ ಚಕ್ರಾವರ್ತ ಚಂಡಮಾರುತದ ಪರಿಣಾಮದಿಂದಾಗಿ ಇಂದು (ಜ.1) ದೆಹಲಿಯಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿದ್ದು, ತುಂತುರು ಮಳೆಯಾಗುವ ಸಾಧ್ಯತೆಯಿದೆ. ಜ.3ರಿಂದ ಶೀತಗಾಳಿಯ ಹೆಚ್ಚಾಗುವ ಸಾಧ್ಯತೆಯಿದ್ದು, ಕನಿಷ್ಠ ತಾಪಮಾನ 5 ಡಿಗ್ರಿಗಿಂತ ಕಡಿಮೆಯಾಗಬಹುದು. ಹಿಮಾಲಯ ಪ್ರದೇಶದಲ್ಲಿ ಸಾಧಾರಣ ಮಳೆ ಹಾಗೂ ಹಿಮಪಾತವೂ ಆಗುವ ಸಾಧ್ಯತೆಯುದೆ.
ದೆಹಲಿ, ಪಂಜಾಬ್, ಹರಿಯಾಣ, ಒಡಿಶಾ ಮತ್ತು ಉತ್ತರ ಪ್ರದೇಶದ ಕೆಲವು ಭಾಗಗಳಲ್ಲಿ ದಟ್ಟ ಮಂಜು ಮುಂದುವರಿಯಲಿದ್ದು, ಉತ್ತರ ಭಾರತದಾದ್ಯಂತ ಚಳಿಗಾಲದ ಪ್ರಭಾವ ತೀವ್ರಗೊಳ್ಳುತ್ತಿದೆ.ಇದನ್ನೂ ಓದಿ: ಹೊಸ ವರ್ಷದ ಮೊದಲ ದಿನ ಗುರುವಾರ – ಮಂತ್ರಾಲಯಕ್ಕೆ ಹರಿದು ಬಂದ ಭಕ್ತಸಾಗರ

