ಬೆರ್ನ್: ಕ್ರಾನ್ಸ್-ಮೊಂಟಾನಾ ಸ್ಕೀ ರೆಸಾರ್ಟ್ (Swiss Ski Resort) ಪಟ್ಟಣದಲ್ಲಿ ಸಂಭವಿಸಿದ ಸ್ಫೋಟದಲ್ಲಿ ಹಲವಾರು ಜನರು ಸಾವನ್ನಪ್ಪಿದ್ದಾರೆ.
ಸ್ಫೋಟದಲ್ಲಿ ಅನೇಕರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಐಷಾರಾಮಿ ಅಪ್ಲೈನ್ ಸ್ಕೀ ರೆಸಾರ್ಟ್ನೊಳಗಿನ ಬಾರ್ನಲ್ಲಿ ಸ್ಫೋಟ ಸಂಭವಿಸಿದೆ ಎಂದು ಪ್ರಾಥಮಿಕ ವರದಿಗಳು ಸೂಚಿಸುತ್ತವೆ. ಇದನ್ನೂ ಓದಿ: 2020ರ ನಂತರ 2025ರ ಡಿಸೆಂಬರ್ನಲ್ಲಿ ದಾಖಲೆಯ ಚಳಿ – ದೆಹಲಿಯಲ್ಲಿ 6.4 ಡಿಗ್ರಿಗಿಳಿದ ಕನಿಷ್ಠ ತಾಪಮಾನ
ಘಟನೆಗೆ ನಿಖರವಾದ ಕಾರಣ ಏನೆಂಬುದು ಇನ್ನೂ ತಿಳಿದಿಲ್ಲ. ಸಂಗೀತ ಕಚೇರಿಯ ಸಮಯದಲ್ಲಿ ಪಟಾಕಿಗಳಿಂದ ಸ್ಫೋಟ ಸಂಭವಿಸಿರಬಹುದು ಎಂದು ಸ್ವಿಸ್ ಮಾಧ್ಯಮಗಳು ವರದಿ ಮಾಡಿವೆ. ಆದರೆ ಕಾರಣ ತಿಳಿದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಫೋಟದ ಬಳಿಕ ಬಾರ್ನಿಂದ ದೊಡ್ಡ ಪ್ರಮಾಣದಲ್ಲಿ ಹೊಗೆ ಹೊಮ್ಮಿತು. ಈ ದೃಶ್ಯದ ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಸಂತ್ರಸ್ತರ ಕುಟುಂಬಗಳಿಗೆ ಸಹಾಯವಾಣಿ ಸ್ಥಾಪಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಸ್ವಿಸ್ ಆಲ್ಪ್ಸ್ನ ಹೃದಯಭಾಗದಲ್ಲಿರುವ ಕ್ರಾನ್ಸ್-ಮೊಂಟಾನಾ, ಅತ್ಯಂತ ಜನಪ್ರಿಯ ಪ್ರವಾಸಿ ತಾಣವಾಗಿದೆ. ಸ್ಕೀಯಿಂಗ್, ಸ್ನೋಬೋರ್ಡಿಂಗ್ ಮತ್ತು ಗಾಲ್ಫ್ನಂತಹ ಚಟುವಟಿಕೆಗಳಿಗಾಗಿ ಜಾಗತಿಕ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಇದನ್ನೂ ಓದಿ: ಫೆ.1 ರಿಂದ ಹೊಸ ತೆರಿಗೆ, ಸೆಸ್ ಜಾರಿ – ಸಿಗರೇಟ್, ಬೀಡಿ, ಪಾನ್ ಮಸಾಲಾ ದುಬಾರಿ

