– ಡಿ.31 ಬೆಳಿಗ್ಗೆ 5ರಿಂದ ಮಧ್ಯರಾತ್ರಿ 3:10ರವರೆಗೆ ಕಾರ್ಯನಿರ್ವಹಿಸಿದ್ದ ಮೆಟ್ರೋ
ಬೆಂಗಳೂರು: ಹೊಸ ವರ್ಷದ (New Year) ಹಿನ್ನೆಲೆ ಒಂದೇ ದಿನದಲ್ಲಿ 8.93 ಲಕ್ಷ ಜನರು ನಮ್ಮ ಮೆಟ್ರೋದಲ್ಲಿ (Namma Metro) ಪ್ರಯಾಣಿಸಿದ್ದು, 3.08 ಕೋಟಿ ರೂ. ಆದಾಯ ಸಂಗ್ರಹವಾಗಿದೆ.
ಹೊಸ ವರ್ಷಾಚರಣೆ ಹಿನ್ನೆಲೆ ಬಿಎಂಆರ್‌ಸಿಎಲ್ (BMRCL) ಮೂರು ಮಾರ್ಗಗಳಾದ ನೇರಳೆ, ಹಸಿರು ಹಾಗೂ ಹಳದಿ ಮೆಟ್ರೋ ರೈಲುಗಳ ಸೇವಾ ಸಮಯ ವಿಸ್ತರಿಸಿತ್ತು. 2025ರ ಡಿ.31ರಂದು ಬೆಳಿಗ್ಗೆ 5 ಗಂಟೆಯಿಂದ ಮಧ್ಯರಾತ್ರಿ 3:10ರವರೆಗೆ ಮೆಟ್ರೋ ರೈಲುಗಳು ಸಂಚರಿಸಿದ್ದು, ಈ ಅವಧಿಯಲ್ಲಿ ಬರೋಬ್ಬರಿ 8,93,903 ಜನರು ಮೆಟ್ರೋದಲ್ಲಿ ಪ್ರಯಾಣಿಸಿದ್ದಾರೆ. ಇದನ್ನೂ ಓದಿ: ಹೊಸ ವರ್ಷ ಎಲ್ಲರಿಗೂ ಆರೋಗ್ಯ, ಸಮೃದ್ಧಿ ತರಲಿ: ಜನತೆಗೆ ಪ್ರಧಾನಿ ಮೋದಿ ವಿಶ್
ಒಂದೇ ದಿನದಲ್ಲಿ ಮೂರು ಮಾರ್ಗ ಒಟ್ಟಾಗಿ ಬರೋಬ್ಬರಿ 3,08 ಕೋಟಿ ರೂ. ಆದಾಯ ಹರಿದುಬಂದಿದೆ.

