– ಸೆಲಬ್ರೇಷನ್ ನಡೆಯುವ ಬೀದಿಗಳಲ್ಲಿ ಡ್ರೋನ್ ಕಣ್ಗಾವಲು
ಬೆಂಗಳೂರು: 2025 ರ ವರ್ಷ ಮುಗಿದು, 2026ರ ಕ್ಯಾಲೆಂಡರ್ ಇಯರ್ (New Year 2026) ಶುರು ಆಗೋಕೆ ಕೆಲವೇ ಕ್ಷಣ ಬಾಕಿಯಿದೆ. ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಯುವಜನತೆ ಸಂಭ್ರಮದಲ್ಲಿದೆ. ನ್ಯೂ ಇಯರ್ ಸೆಲಬ್ರೇಷನ್‌ನ ಕೇಂದ್ರಬಿಂದು ಎಂ.ಜಿ ರೋಡ್, ಬ್ರಿಗೇಡ್ ರೋಡ್, ಚರ್ಚ್ ಸ್ಟ್ರೀಟ್, ಕಮರ್ಷಿಯಲ್ ಸ್ಟ್ರೀಟ್ ವರ್ಣರಂಜಿತವಾಗಿವೆ. ಕತ್ತಲಲ್ಲೂ ಕಾಮನಬಿಲ್ಲು ಎಂಬಂತೆ ವಿದ್ಯುತ್ ದೀಪಾಲಂಕಾರಗಳಿಂದ ಬೆಂಗಳೂರು ಝಗಮಗಿಸುತ್ತಿದ್ದು, ಪೊಲೀಸರು (Bengaluru City Police) ಅಷ್ಟೇ ಬಿಗಿ ಭದ್ರತೆ ಕೈಗೊಂಡಿದ್ದಾರೆ.
ಈಗಾಗಲೇ ಮಳೆಯರ (Womens) ಸುರಕ್ಷತೆಗಾಗಿ ʻರಾಣಿ ಚನ್ನಮ್ಮʼ ಪಡೆಯನ್ನ ಅಣಿಗೊಳಿಸಲಾಗಿದೆ. ಇದರೊಂದಿಗೆ ಕುಡಿದು ಟೈಟಾದ ಯುವತಿಯರು, ಮಹಿಳೆಯರನ್ನ ಫ್ರೀ ಆಗಿ ಡ್ರಾಪ್ ಮಾಡೋಕೆ ಆಟ್ರೋ ಡ್ರೈವರ್ಸ್‌ಗಳ ತಂಡವೊಂದು ಮುಂದೆ ಬಂದಿದೆ.
ಹೌದು. ಕೋರಮಂಗಲದಿಂದ (Kormangala) ಇಡೀ ಬೆಂಗಳೂರು ನಗರದ ಯಾವುದೇ ಮೂಲೆಯಲ್ಲಿ ಮನೆಯಿದ್ರೂ ಆಟ್ರೋ ಚಾಲಕರು ಉಚಿತವಾಗಿ ಅವರನ್ನ ಕರೆದುಕೊಂಡು ಹೋಗುವ ಕೆಲಸ ಮಾಡುತ್ತಾರೆ. ಕುಡಿದು ಟೈಟಾಗೋರನ್ನ ತಮ್ಮ ಮನೆಗೆ ಹಾಗೂ ಆರೋಗ್ಯ ಸಮಸ್ಯೆ ಉಂಟಾದವರನ್ನ ಸಮೀಪದ ಆಸ್ಪತ್ರೆಗೆ ದಾಖಲಿಸಲಿದೆ ಈ ತಂಡ.
ಮಹಿಳಾ ಪೊಲೀಸ್ ಭದ್ರತೆಯಲ್ಲಿ ಡ್ರಾಪ್
ಕಳೆದ ವರ್ಷ ಪಾರ್ಟಿ ಬಳಿಕ ಸಾಕಷ್ಟು ಮಹಿಳೆಯರು, ಯುವತಿಯರು ಕುಡಿದು ತೂರಾಡಿದ್ರು, ಮನೆಗೆ ಹೋಗೋಕೆ ಪರದಾಟ ನಡೆಸಿದ್ರು, ಪ್ರಜ್ಞೆ ಇಲ್ಲದಂತೆ ರಸ್ತೆಯಲ್ಲೇ ಬಿದ್ದು ಹೊರಳಾಡುತ್ತಿದ್ದರು. ಹಾಗಾಗಿ ಕುಡಿದ ಮತ್ತಿನಲ್ಲಿರುವ ಯುವತಿಯರನ್ನ ಓರ್ವ ಮಹಿಳಾ ಪೊಲೀಸ್ ಸಿಬ್ಬಂದಿ ಜೊತೆಗೆ ಸುರಕ್ಷಿತವಾಗಿ ಮನೆಗೆ ತಲುಪಿಸಲು 25 ಜನರ ಆಟೋ ಚಾಲಕರ ತಂಡ ಬಂದಿದೆ.
ಇದೇ ಜಾಗದಲ್ಲಿ ಪ್ರತಿದಿನ ಆಟೋ ಓಡಿಸಿ ಜೀವನ ಮಾಡ್ತಿವಿ ಹೀಗಾಗಿ ಸ್ಟೇಷನ್‌ನಿಂದ ಹೀಗೆ ಅಂತಾ ಹೇಳಿದ್ರು ಅದಕ್ಕೆ 25 ಜನ ಬಂದಿದ್ದೀವಿ. ಮುಂದಿನ ವರ್ಷ ಇನ್ನೂ ಜಾಸ್ತಿ ಜನ ಉಚಿತ ಸೇವೆಗೆ ಮುಂದಾಗ್ತೀವಿ ಅಂತ ಆಟೋ ಚಾಲಕರೊಬ್ಬರು ಹೇಳಿದ್ದಾರೆ.
ಡ್ರೋನ್ ಕಣ್ಗಾವಲು
ಇನ್ನೂ ಈಗಾಗಲೇ ಸೆಲಬ್ರೇಷನ್ ನಡೆಯುವ ಸ್ಥಳದಲ್ಲಿ ಪೊಲೀಸ್ ಸರ್ಪಗಾವಲಿನೊಂದಿಗೆ ಸಿಸಿಟಿವಿ ಕ್ಯಾಮೆರಾಗಳನ್ನ ಅಳವಡಿಸಿರುವ ಪೊಲೀಸ್ ಇಲಾಖೆ ಡ್ರೋನ್ ಕಣ್ಗಾವಲಿನ ವ್ಯವಸ್ಥೆ ಕೂಡ ಮಾಡಿಕೊಂಡಿದೆ. ಸಂಭ್ರಮ ನಡೆಯುವ ಬೀದಿಗಳಲ್ಲಿ, ಜನಸಂದಣಿ ಹೆಚ್ಚಿರುವ ಸ್ಥಳಗಳಲ್ಲಿ ಡ್ರೋನ್‌ಗಳನ್ನ ಹಾರಿಸಲಾಗುತ್ತದೆ. ಈ ಮೂಲಕ ಕಿರಾತಕರು, ಜೇಬುಗಳ್ಳರು, ಸರಗಳ್ಳರು ಹಾಗೂ ಅನುಚಿತ ವರ್ತನೆ ತೋರುವವರ ಮೇಲೆ ಹದ್ದಿನ ಕಣ್ಣಿಡಲಾಗಿದೆ.


