ಬೆಂಗಳೂರು: ಇಡೀ ವಿಶ್ವವೇ 2025ರ ಕ್ಯಾಲೆಂಡರ್ ಪುಟ ತಿರುವಲು ಸಜ್ಜಾಗಿದೆ. ಕೆಲವು ದೇಶಗಳು ಈಗಾಗಲೇ 2026 ರ ಹೊಸ ವರ್ಷವನ್ನ (New Year 2026) ಸಂಭ್ರಮದಿಂದ ಸ್ವಾಗತಿಸಿವೆ. ಆದ್ರೆ ಭಾರತದಲ್ಲಿ ಹೊಸ ವರ್ಷಕ್ಕೆ ಇನ್ನೂ ಕೆಲವೇ ಗಂಟೆಗಳು ಬಾಕಿಯಿದೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಂತೂ ಈಗಾಗಲೇ ನ್ಯೂಇಯರ್ ಜೋಶ್ ಹೆಚ್ಚಾಗಿದೆ. ಆದ್ರೆ ಯಲಹಂಕದಲ್ಲಿ ಜನ ಸಂಭ್ರಮಕ್ಕೆ ತಣ್ಣೀರು ಬಿದ್ದಿದೆ.
ಹೌದು. ಹೊಸ ವರ್ಷ ಸಂಭ್ರಮಾಚರಣೆಗೆ ಕೆಲವೇ ಹೊತ್ತು ಇರುವಾಗಲೇ ಅಕಾಲಿಕ ಮಳೆ (Rain) ಸುರಿದಿದೆ. ಹೊಸ ವರ್ಷಕ್ಕೆ ಸಿಂಗಾರಗೊಂಡಿದ್ದ ಪ್ರಮುಖ ಸ್ಥಳಗಳಲ್ಲೇ ಅರ್ಧಗಂಟೆಗೂ ಹೆಚ್ಚು ಕಾಲ ಸಾಧಾರಣ ಮಳೆಯಾಗಿದೆ. ಇದನ್ನೂ ಓದಿ: ಅದ್ದೂರಿ ಪಟಾಕಿ ಪ್ರದರ್ಶನದೊಂದಿಗೆ 2026ಕ್ಕೆ ವೆಲ್‌ಕಮ್ ಹೇಳಿದ ನ್ಯೂಜಿಲೆಂಡ್

ಇದು ಹೊಷ ವರ್ಷ ಸಂಭ್ರಮದಲ್ಲಿ ಕುಣಿದು ಕುಪ್ಪಳಿಸಲು ರೆಡಿಯಾಗಿದ್ದ ಕೆಲ ಯುವ ಸಮೂಹದವರಿಗೆ ಬೇಸರ ತರಿಸಿದೆ. ಇದನ್ನೂ ಓದಿ: ಕೋಗಿಲು ಲೇಔಟ್ ತೆರವು ಪ್ರಕರಣ – ಪೌರತ್ವದ ಬಗ್ಗೆ NIA ತನಿಖೆ ಆಗಲಿ; ರಾಜ್ಯ ಸರ್ಕಾರಕ್ಕೆ ಬಿಜೆಪಿ ಆಗ್ರಹ
ಯಲಹಂಕ ಸುತ್ತಮುತ್ತಲಿನ ಕೆಲ ಭಾಗಗಳಲ್ಲಿ ಮಳೆಯಾಗಿದ್ದು, ಅಲ್ಲಲ್ಲಿ ನೀರು ನಿಂತಂತಾಗಿದೆ. ಇದನ್ನೂ ಓದಿ: ಹೊಸ ವರ್ಷಕ್ಕೂ ಮುನ್ನ ಭರ್ಜರಿ ಬೇಟೆ – 150 ಕೆಜಿ ಸ್ಫೋಟಕ, 200 ಬ್ಯಾಟರಿ, 1,100 ಮೀ ವೈರ್ ಸೀಜ್

