ಲಕ್ನೋ: ಅಯೋಧ್ಯೆಯ (Ayodhya) ರಾಮಮಂದಿರದಲ್ಲಿಂದು (ಡಿ.31) ಪ್ರಾಣ ಪ್ರತಿಷ್ಠಾನ 2ನೇ ವಾರ್ಷಿಕೋತ್ಸವ ಅಂಗವಾಗಿ ರಕ್ಷಣಾ ಸಚಿವ ರಾಜ್‌ನಾಥ್ ಸಿಂಗ್ (Rajanath Singh) ಅವರು ಅನ್ನಪೂರ್ಣಾ ದೇವಾಲಯದ ಮೇಲೆ ಧ್ವಜಾರೋಹಣ ನೆರವೇರಿಸಿದರು.
ಪ್ರಾಣ ಪ್ರತಿಷ್ಠಾ ದ್ವಾದಶಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ರಾಜ್‌ನಾಥ್ ಸಿಂಗ್ ಭಾಗಿಯಾಗಿದ್ದರು. ಅವರ ಜೊತೆಗೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಕೂಡ ಉಪಸ್ಥಿತರಿದ್ದರು. ರಾಮ ಮಂದಿರಕ್ಕೆ ತೆರಳುವ ಮುನ್ನ ಇಬ್ಬರು ನಾಯಕರು ಹನುಮಾನ್‌ಗಢಿ ದೇವಾಲಯಕ್ಕೆ ಭೇಟಿ, ನೀಡಿ ಪೂಜೆ ಸಲ್ಲಿಸಿದರು. ನಂತರ ರಾಮಮಂದಿರದಲ್ಲಿ ರಾಮ್ ಲಲ್ಲಾ ವಿಗ್ರಹದ ಮುಂದೆ ಪ್ರಾರ್ಥನೆ ಸಲ್ಲಿಸಿದರು. ಆನಂತರ ಅನ್ನಪೂರ್ಣಾ ದೇವಾಲಯದ ಮೇಲೆ ಧ್ವಜಾರೋಹಣ ನೆರವೇರಿಸಿದರು. ಇದನ್ನೂ ಓದಿ: ರಾಮಲಲ್ಲಾ ವಿಗ್ರಹದ `ಪ್ರಾಣ ಪ್ರತಿಷ್ಠಾ ದ್ವಾದಶಿ’: ವಿಶೇಷ ಅಭಿಷೇಕ, ಧಾರ್ಮಿಕ ಸ್ನಾನ
ಧ್ವಜಾರೋಹಣದ ಬಳಿಕ ಮಾತನಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್, 500 ವರ್ಷಗಳ ಕಾಯುವಿಕೆಯ ನಂತರ ಭವ್ಯವಾದ ದೇವಾಲಯದಲ್ಲಿ ಭಗವಾನ್ ಶ್ರೀ ರಾಮ ಪ್ರತಿಷ್ಠಾಪನೆಗೊಂಡನು. ಇನ್ನೂ ಸಾವಿರಾರು ವರ್ಷಗಳವರೆಗೂ ರಾಮಲಲ್ಲಾ ದೇವಾಲಯವು ರಾಮನ ಜೀವನವನ್ನು ವೈಭವೀಕರಿಸುತ್ತಲೇ ಇರುತ್ತದೆ. ಈ ರಾಮಮಂದಿರ ಅಯೋಧ್ಯೆಯಲ್ಲಿ ಧರ್ಮದ ಧ್ವಜವು ಎತ್ತರಕ್ಕೆ ಹಾರುವಂತೆ ಮಾಡಿದೆ. ಈಗಿನ ಸರ್ಕಾರ ನೇತೃತ್ವದಲ್ಲಿ ಅಯೋಧ್ಯೆ ಪ್ರಗತಿ ಹೊಂದುತ್ತಿದೆ. ರೈಲು ನಿಲ್ದಾಣ ಮತ್ತು ವಿಮಾನ ನಿಲ್ದಾಣದಂತಹ ಸೌಲಭ್ಯಗಳೊಂದಿಗೆ ಅಯೋಧ್ಯೆ ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿದೆ ಎಂದು ಒತ್ತಿಹೇಳಿದರು.
ಪ್ರಾಣ ಪ್ರತಿಷ್ಠಾ ದ್ವಾದಶಿ ಆಚರಣೆಗಳು ಈಗಾಗಲೇ ಪ್ರಾರಂಭವಾಗಿದ್ದು, ಶುಕ್ರವಾರದವರೆಗೆ (ಜ.2) ಮುಂದುವರಿಯಲಿವೆ. ಶನಿವಾರದಿಂದ (ಜ.3) ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಲಿವೆ. ಈ ವಾರ್ಷಿಕೋತ್ಸವದ ಪ್ರಯುಕ್ತ ರಾಮಲಲ್ಲಾ ದರ್ಶನಕ್ಕಾಗಿ 5 ರಿಂದ 6 ಲಕ್ಷ ಭಕ್ತಾಧಿಗಳು ಅಯೋಧ್ಯೆಗೆ ಆಗಮಿಸುವ ನಿರೀಕ್ಷೆ ಇದೆ.
ವಿವಿಐಪಿಗಳ ಭೇಟಿ ಹಿನ್ನೆಲೆ ಅಯೋಧ್ಯೆಯಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ನಗರವನ್ನು 5 ವಲಯಗಳು ಮತ್ತು 10 ಭದ್ರತಾ ವಲಯಗಳಾಗಿ ವಿಂಗಡಿಸಲಾಗಿದೆ. ಜಿಲ್ಲೆಯ ಹೊರಗಿನಿಂದ ಸುಮಾರು 3,000 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಇದರಲ್ಲಿ 4ಕ್ಕೂ ಅಧಿಕ ಪೊಲೀಸ್ ಅಧೀಕ್ಷಕರು, 9 ಉಪಾಧೀಕ್ಷಕರು, ಸುಮಾರು 50 ಇನ್‌ಸ್ಪೆಕ್ಟರ್‌ಗಳು, 150 ಉಪ-ನಿರೀಕ್ಷಕರು ಮತ್ತು ಹಲವಾರು ಕಾನ್‌ಸ್ಟೇಬಲ್‌ಗಳಿದ್ದಾರೆ.
ಪಿಎಸಿ ಮತ್ತು ಪ್ಯಾರಾ ಮಿಲಿಟರಿ ಪಡೆಗಳ 5 ಕಂಪನಿಗಳನ್ನು ನಿಯೋಜಿಸಲಾಗಿದೆ. ಸಿಸಿಟಿವಿ ಕ್ಯಾಮೆರಾ, ಡ್ರೋನ್‌ಗಳ ಮೂಲಕ ನಿಗಾ ಹೆಚ್ಚಿಸಲಾಗಿದ್ದು, ಪ್ರಮುಖ ಸ್ಥಳಗಳಲ್ಲಿ ಆಂಟಿ-ಡ್ರೋನ್ ವ್ಯವಸ್ಥೆಯನ್ನು ಸಕ್ರಿಯಗೊಳಿಸಲಾಗಿದೆ. ಇದನ್ನೂ ಓದಿ:2026 ವರ್ಷ ಭವಿಷ್ಯ

