ಲಕ್ನೋ: ಉದ್ಯಮಿ, ಅವರ ಹೆಂಡತಿ ಮತ್ತು ಮಗನನ್ನು ಮನೆಯ ಮುಂದೆಯೇ ಗುಂಡಿಟ್ಟು ಕೊಲೆ ಮಾಡಿರುವ ಘಟನೆ ಉತ್ತರಪ್ರದೇಶದ ಸೀತಾಪುರದಲ್ಲಿ ಮಂಗಳವಾರ ರಾತ್ರಿ ನಡೆದಿದೆ. ಘಟನೆಯ ದೃಶ್ಯಾವಳಿ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
60 ವರ್ಷದ ಸುನಿಲ್ ಜೈಸ್ವಾಲ್, ಅವರ ಹೆಂಡತಿ ಮತ್ತು ಮಗನನ್ನು ಗುಂಡಿಟ್ಟು ಹತ್ಯೆ ಮಾಡಲಾಗಿದೆ. ಸುನಿಲ್ ಮಂಗಳವಾರ ರಾತ್ರಿ 9.30ರ ಸುಮಾರಿನಲ್ಲಿ ಮನೆಗೆ ಹಿಂದಿರುಗುವ ವೇಳೆ ಎರಡು ಬೈಕ್‍ಗಳಲ್ಲಿ ಹಿಂಬಾಲಿಸಿಕೊಂಡು ಬಂದ ದಷ್ಕರ್ಮಿಗಳು ಸುನಿಲ್ ಅವರ ಬಳಿ ಇದ್ದ ಬ್ಯಾಗನ್ನು ಕಸಿದುಕೊಳ್ಳಲು ಯತ್ನಿಸಿದ್ದಾರೆ. ಈ ವೇಳೆ ಸುನಿಲ್ ಅವರಿಗೆ ಶೂಟ್ ಮಾಡಿದ್ದಾರೆ.
- Advertisement
ಗುಂಡಿನ ಶಬ್ದ ಕೇಳಿ ಸುನಿಲ್ ಅವರ ಪತ್ನಿ ಮತ್ತು ಮಗ ಗಾಬರಿಯಿಂದ ಹೊರಗೆ ಓಡಿಬಂದಿದ್ದು, ದುಷ್ಕರ್ಮಿಗಳು ತಪ್ಪಿಸಿಕೊಳ್ಳದಂತೆ ತಡೆಯಲು ಯತ್ನಿಸಿದ್ದಾರೆ. ಆದ್ರೆ ಈ ವೇಳೆ ಹೆಂಡತಿಯ ಮೇಲೆ ದುಷ್ಕರ್ಮಿಗಳು ಗುಂಡು ಹಾರಿಸಿದ್ದು, ಮನೆಯೊಳಗೆ ಓಡಿಹೋಗಲು ಯತ್ನಿಸಿದ ಮಗನ ಮೇಲೂ ಶೂಟ್ ಮಾಡೋದನ್ನ ಸಿಸಿಟಿವಿ ದೃಶ್ಯಾವಳಿಯಲ್ಲಿ ಕಾಣಬಹುದು.
- Advertisement
ಘಟನೆಯಲ್ಲಿ ಮೂವರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ ಯಾರನ್ನೂ ಬಂಧಿಸಿಲ್ಲ. ಇದು ದರೋಡೆಯ ಪ್ರಕರಣವಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.