– ಸಾಮಾಜಿಕ ಜಾಲತಾಣದಲ್ಲಿ ಪರ, ವಿರೋಧ ಚರ್ಚೆ
ಮುಂಬೈ: ಸಚಿನ್ ತೆಂಡೂಲ್ಕರ್ (Sachin Tendulkar) ಪುತ್ರಿ ಸಾರಾ ತೆಂಡೂಲ್ಕರ್ (Sara Tendulkar) ಗೋವಾದಲ್ಲಿ ಬಿಯರ್ ಬಾಟಲ್(Beer Bottle) ಅನ್ನು ಕೈಯಲ್ಲಿ ಹಿಡಿದುಕೊಂಡು ಸುತ್ತಾಡುತ್ತಿರುವ ವಿಡಿಯೋ ವೈರಲ್ (Viral Video) ಆಗಿದ್ದು ಪರ, ವಿರೋಧ ಚರ್ಚೆಗೆ ಗ್ರಾಸವಾಗಿದೆ.
ಸಾರಾ ತೆಂಡೂಲ್ಕರ್ ಸ್ನೇಹಿತೆಯರ ಜೊತೆ ಗೋವಾಗೆ ಹೋಗಿದ್ದಾರೆ. ಗೋವಾ ದಾರಿಯಲ್ಲಿ ಬಿಯರ್ ಬಾಟಲ್ ಹಿಡಿದುಕೊಂಡು ನಡೆದುಕೊಂಡು ಬರುತ್ತಿದ್ದರು. ಈ ವೇಳೆ ಬೈಕ್‌ನಲ್ಲಿ ಯಾರೋ ಮೊಬೈಲ್ ಮೂಲಕ ವಿಡಿಯೋ ರೆಕಾರ್ಡ್ ಮಾಡಿಕೊಂಡು ಬರುತ್ತಿದ್ದರು. ಈ ಸಂದರ್ಭದಲ್ಲಿ ಸಾರಾ ಸ್ನೇಹಿತರ ಜೊತೆ ನಡೆದುಕೊಂಡು ಬರುತ್ತಿರುವ ವಿಡಿಯೋ ಸೆರೆಯಾಗಿದ್ದು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.
ಈಗ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ನೆಟ್ಟಿಗರಿಂದ ಪರ, ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ. ಇದನ್ನೂ ಓದಿ: ಈ ಬಾರಿ ಆರ್‌ಸಿಬಿ ಪರ ಆಡಲ್ಲ ಎಲ್ಲಿಸ್ ಪೆರ‍್ರಿ
Sachin Tendulkar : I will never promote alcohol and tobacco.
Le his daughter Sara on streets of Goa with 🥲:pic.twitter.com/zkDbfPHhsT
— Ctrl C Ctrl Memes (@Ctrlmemes_) December 31, 2025
ಸಚಿನ್ ತೆಂಡೂಲ್ಕರ್ ಅವರು ನಾನು ಯಾವುದೇ ಕಾರಣಕ್ಕೂ ಮದ್ಯ ಮತ್ತು ತಂಬಾಕನ್ನು ಪ್ರಚಾರ ಮಾಡುವುದಿಲ್ಲ ಎಂದು ಹೇಳುತ್ತಾರೆ. ಆದರೆ ಪುತ್ರಿ ಬಹಿರಂಗವಾಗಿ ಮದ್ಯದ ಬಾಟಲ್ ಅನ್ನು ಕೈಯಲ್ಲಿ ಹಿಡಿದುಕೊಂಡು ಸುತ್ತಾಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ.
ಇನ್ನು ಕೆಲವರು ಸಾರಾ ಮದ್ಯದ ಬಾಟಲಿಯಲ್ಲಿ ಕೈಯಲ್ಲಿ ಹಿಡಿದರೆ ತಪ್ಪೇನು? ಹುಡುಗಿಯರು ಮದ್ಯಪಾನ ಮಾಡಬಾರದು ಎಂಬ ನಿಯಮ ಇದ್ಯಾ ಎಂದು ಪ್ರಶ್ನಿಸಿ ತಿರುಗೇಟು ನೀಡಿ ಸಾರಾ ಅವರನ್ನು ಬೆಂಬಲಿಸುತ್ತಿದ್ದಾರೆ.

