ಉಡುಪಿ: ವಿದೇಶದಲ್ಲಿ ತಲೆಮರೆಸಿಕೊಂಡಿರುವ ಭೂಗತಪಾತಕಿ ಕಲಿ ಯೋಗೀಶ್ (Kali Yogesh) ವಿರುದ್ಧ ಕಾಪು ಪೊಲೀಸರು ಕೋಕಾ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕಲಿ ಯೋಗೀಶ್ ಪಾಂಗಾಳ ಶರತ್ ಶೆಟ್ಟಿ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿದ್ದಾನೆ. 2022 ಡಿಸೆಂಬರ್‌ನಲ್ಲಿ ಶರತ್ ಶೆಟ್ಟಿ ಕೊಲೆ ನಡೆದಿತ್ತು. ಜಾಗದ ತಕರಾರು ವಿಚಾರದಲ್ಲಿ ಈ ಹತ್ಯೆ ನಡೆದಿತ್ತು. ಯೋಗೀಶ್ ಆಚಾರ್ಯ ಕೊಲೆ ಪ್ರಕರಣದ ಮತ್ತೋರ್ವ ಆರೋಪಿಯಾಗಿದ್ದಾನೆ. ಇದನ್ನೂ ಓದಿ: ಉತ್ತರಾಖಂಡ | ಕಂದಕಕ್ಕೆ ಉರುಳಿದ ಬಸ್ – 7 ಮಂದಿ ಸಾವು, 12 ಜನರಿಗೆ ಗಾಯ
ಏನಿದು ಕೋಕಾ ಕಾಯ್ದೆ?
ಕರ್ನಾಟಕ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆ (KCOCA), ಇದು ಸಂಘಟಿತ ಅಪರಾಧಗಳು, ಮಾಫಿಯಾ ಮತ್ತು ಭಯೋತ್ಪಾದಕ ಚಟುವಟಿಕೆಗಳನ್ನು ತಡೆಯಲು ಜಾರಿಗೆ ತಂದ ಕಠಿಣ ಕಾನೂನಾಗಿದೆ. ಆರೋಪಿಗಳಿಗೆ ಕಠಿಣ ಶಿಕ್ಷೆ, ಜಾಮೀನು ರಹಿತ ಬಂಧನ ಮತ್ತು ಆಸ್ತಿ ಮುಟ್ಟುಗೋಲಿಗೆ ಅವಕಾಶ ನೀಡುತ್ತದೆ. ಈ ಕಾಯ್ದೆಯ ಅಡಿಯಲ್ಲಿ, ಸಂಘಟಿತ ಅಪರಾಧಗಳಲ್ಲಿ ಭಾಗವಹಿಸುವವರಿಗೆ ಗರಿಷ್ಠ ಗಲ್ಲು ಶಿಕ್ಷೆ ಅಥವಾ ಜೀವಾವಧಿ ಜೈಲು ಶಿಕ್ಷೆ ವಿಧಿಸಬಹುದು. ಆರೋಪ ಪಟ್ಟಿ ಸಲ್ಲಿಸಲು 365 ದಿನಗಳವರೆಗೆ ಸಮಯಾವಕಾಶ ಇರುತ್ತದೆ. ಇದನ್ನೂ ಓದಿ: ಪತ್ನಿಗೆ ನಡುರಸ್ತೆಯಲ್ಲೇ ಗುಂಡಿಟ್ಟು ಕೊಂದ ಪತಿ; ಬಿಹಾರ ಮೂಲದ ವ್ಯಕ್ತಿಯಿಂದ 80 ಸಾವಿರಕ್ಕೆ ಗನ್ ಖರೀದಿಸಿದ್ದ ಆರೋಪಿ

