ಬೆಂಗಳೂರು: ಕೋಗಿಲು ಲೇಔಟ್‌ನಲ್ಲಿ ಶೆಡ್‌ಗಳ (Kogilu Layout Demolition) ತೆರವು ಕಾರ್ಯಾಚರಣೆ ಸ್ಥಳಕ್ಕೆ ರಾಜೀವ್ ಗಾಂಧಿ ವಸತಿ ಯೋಜನೆಯ 20 ಅಧಿಕಾರಿಗಳು ಭೇಟಿ ನೀಡಿದ್ದಾರೆ.
ಈ ಜಾಗದಲ್ಲಿ 180 ಮಂದಿ ಇಲ್ಲಿ ವಾಸವಾಗಿದ್ದಾರೋ ಇಲ್ವೋ ಎಂಬುದನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಆಧಾರ್ ಕಾರ್ಡ್, ವೋಟರ್ ಐಡಿ, ಜಿಪಿಎಸ್ ಪೋಟೋದೊಂದಿಗೆ ಮನೆ ಕಳೆದುಕೊಂಡವರ ಸಂಪೂರ್ಣ ಲಿಸ್ಟ್ ಪಡೆದು ಪರ್ಯಾಯ ಮನೆ ನೀಡಲು ಮಾಹಿತಿ ಸಂಗ್ರಹಿಸುತ್ತಿದ್ದಾರೆ.
ಮಾನವ ಹಕ್ಕುಗಳ ಆಯೋಗಕ್ಕೆ ದೂರು ದಾಖಲಾದ ಹಿನ್ನೆಲೆ ಮಾನವ ಹಕ್ಕುಗಳ ಎಡಿಜಿಪಿ ದೇವ ಜ್ಯೋತಿ ರೆ ಸ್ಥಳಕ್ಕೆ ಆಗಮಿಸಿದ್ದಾರೆ. ನಂತರ ಮಾತನಾಡಿದ ಅವರು, 167 ಮನೆಗಳನ್ನು ಕೆಡವಲಾಗಿದೆ ಎಂದು ದೂರು ಬಂದಿದೆ. ಇದರ ಅನ್ವಯ ತನಿಖೆ ಸಾಗುತ್ತಿದೆ ಎಂದು ತಿಳಿಸಿದರು.
ಮಾನವ ಹಕ್ಕುಗಳ ಆಯೋಗದಿಂದ ಗ್ರೇಟರ್ ಬೆಂಗಳೂರು ಪ್ರಾಧಿಕಾರ, ಯಲಹಂಕ ತಹಶೀಲ್ದಾರ್ ಅವರಿಗೆ ನೋಟಿಸ್ ನೀಡಲು ನಿರ್ಧಾರ ಮಾಡಲಾಗಿದೆ. ಕೋಗಿಲು ಲೇಔಟ್ ಮಾಡಿರುವ ಸ್ಥಳೀಯ ನಾಯಕರಿಗೂ ನೋಟಿಸ್ ನೀಡಿ ವಿಚಾರ ನಡೆಸಲಾಗುವುದು ಎಂದು ಅವರು ಹೇಳಿದರು.

