Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಸುರಾಮ್ ಮೂವೀಸ್ ನಿರ್ಮಾಣದ 4ನೇ ಚಿತ್ರ `LSD’ – ಪ್ರಮುಖಪಾತ್ರದಲ್ಲಿ ಚೈತ್ರಾ ಜೆ ಆಚಾರ್
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Cinema | ಸುರಾಮ್ ಮೂವೀಸ್ ನಿರ್ಮಾಣದ 4ನೇ ಚಿತ್ರ `LSD’ – ಪ್ರಮುಖಪಾತ್ರದಲ್ಲಿ ಚೈತ್ರಾ ಜೆ ಆಚಾರ್

Cinema

ಸುರಾಮ್ ಮೂವೀಸ್ ನಿರ್ಮಾಣದ 4ನೇ ಚಿತ್ರ `LSD’ – ಪ್ರಮುಖಪಾತ್ರದಲ್ಲಿ ಚೈತ್ರಾ ಜೆ ಆಚಾರ್

Public TV
Last updated: December 28, 2025 9:37 pm
Public TV
Share
2 Min Read
LSD Chaitra Achar
SHARE

ಸುರಾಮ್ ಮೂವೀಸ್ ಲಾಂಛನದಲ್ಲಿ ಜಯರಾಮ್ ದೇವಸಮುದ್ರ ನಿರ್ಮಿಸುತ್ತಿರುವ ಹಾಗೂ ಶಕ್ತಿಪ್ರಸಾದ್ ನಿರ್ದೇಶನದಲ್ಲಿ ಚೈತ್ರಾ ಜೆ ಆಚಾರ್ (Chaitra Achar) ಪ್ರಮುಖಪಾತ್ರದಲ್ಲಿ ನಟಿಸುತ್ತಿರುವ “LSD”(ಲೈಲಾಸ್ ಸ್ವೀಟ್ ಡ್ರೀಮ್) ಚಿತ್ರದ ಟೈಟಲ್ ಟೀಸರ್ ಇತ್ತೀಚೆಗೆ ಬಿಡುಗಡೆಯಾಗಿದೆ. ಟೈಟಲ್ ಟೀಸರ್ ಬಹಳ ಕುತೂಹಲ ಮೂಡಿಸಿದೆ. ಟೀಸರ್ ಬಿಡುಗಡೆ ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.

“LSD”, ನಮ್ಮ ಸುರಾಮ್ ಮೂವೀಸ್ ನಿರ್ಮಾಣದ ನಾಲ್ಕನೇ ಚಿತ್ರ. “ನಿದ್ರಾದೇವಿ ನೆಕ್ಸ್ಟ್ ಡೋರ್” ನಮ್ಮ ಸಂಸ್ಥೆಯ ಮೊದಲ ನಿರ್ಮಾಣದ ಚಿತ್ರ. ನಂತರ ಶ್ರೀಮುರಳಿ ಅಭಿನಯದ “ಉಗ್ರಾಯಧಮ್” ಹಾಗೂ “ನೀ ನಂಗೆ ಅಲ್ವಾ” ಚಿತ್ರಗಳ ಚಿತ್ರೀಕರಣ ನಡೆಯುತ್ತಿದೆ. ಹೊಸಪ್ರತಿಭೆಗಳಿಗೆ ಅವಕಾಶ ಮಾಡಿಕೊಡಬೇಕೆಂಬುದು ನಮ್ಮ ಸಂಸ್ಥೆಯ ಮುಖ್ಯ ಉದ್ದೇಶ. ಹಾಗಾಗಿ ಯುವ ಪ್ರತಿಭೆ ಶಕ್ತಿಪ್ರಸಾದ್ ಅವರು ಬಂದು “LSD” ಚಿತ್ರದ ಕಥೆ ಹೇಳಿದಾಗ ಬಹಳ ಇಷ್ಟವಾಯಿತು. ನಿರ್ಮಾಣಕ್ಕೆ ಮುಂದಾದೆ. ಚೈತ್ರಾ ಜೆ ಆಚಾರ್, ಎಂ.ಡಿ.ಪಲ್ಲವಿ, ಅವಿನಾಶ್ ಮುಂತಾದವರು ಈ ಚಿತ್ರದ ಪ್ರಮುಖಪಾತ್ರದಲ್ಲಿ ನಟಿಸುತ್ತಿದ್ದಾರೆ‌. ನಮ್ಮ ಚಿತ್ರಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ನಿರ್ಮಾಪಕ ಜಯರಾಮ್ ದೇವಸಮುದ್ರ.

LSD Chaitra Achar 1

ನಾನು ನನ್ನ ತಂಡದ ಜೊತೆಗೆ ಅನೇಕ ಕಿರುಚಿತ್ರಗಳನ್ನು ನಿರ್ಮಾಣ ಮಾಡಿದ್ದೇನೆ. ಬೆಳ್ಳಿತೆರೆಯಲ್ಲಿ ಇದು ನನ್ನ ಮೊದಲ ಚಿತ್ರ. ಅವಕಾಶ ಮಾಡಿಕೊಟ್ಟ ನಿರ್ಮಾಪಕರಿಗೆ ಧನ್ಯವಾದ. “LSD” ಎಂದರೆ “ಲೈಲಾಸ್ ಸ್ವೀಟ್ ಡ್ರೀಮ್” ಅಂತ. ಇದೊಂದು ವಿಭಿನ್ನ ಕಥಾಹಂದರ ಹೊಂದಿರುವ ಚಿತ್ರ. ತಾಯಿ – ಮಗಳ ಬಾಂಧವ್ಯದ ಚಿತ್ರವೂ ಹೌದು. ಚೈತ್ರಾ ಜೆ ಆಚಾರ್ ಪ್ರಮುಖಪಾತ್ರದಲ್ಲಿ ಅಭಿನಯಿಸುತ್ತಿದ್ದು, ಅವರ ತಾಯಿ ಪಾತ್ರದಲ್ಲಿ ಎಂ.ಡಿ.ಪಲ್ಲವಿ ನಟಿಸುತ್ತಿದ್ದಾರೆ. ಬ್ಯುಸ್ ನೆಸ್ ಮ್ಯಾನ್ ಪಾತ್ರದಲ್ಲಿ ಹಿರಿಯನಟ ಅವಿನಾಶ್ ಕಾಣಿಸಿಕೊಳ್ಳುತ್ತಿದ್ದಾರೆ. ಮಿಥುನ್ ಮುಕುಂದನ್ ಸಂಗೀತ ನಿರ್ದೇಶನ, ರಿತೇಶ್ ಛಾಯಾಗ್ರಹಣ ಹಾಗೂ ಬಲರಾಮ್ ಅವರ ಸಂಕಲನವಿರುವ ಈ ಚಿತ್ರಕ್ಕೆ ಈಗಾಗಲೇ ಒಂದು ಹಂತದ ಚಿತ್ರೀಕರಣ ಮುಕ್ತಾಯವಾಗಿದ್ದು, ಜನವರಿ 15 ರಿಂದ ಎರಡನೇ ಹಂತದ ಚಿತ್ರೀಕರಣ ಆರಂಭವಾಗಲಿದೆ ಎಂದು ನಿರ್ದೇಶಕ ಶಕ್ತಿಪ್ರಸಾದ್ ತಿಳಿಸಿದರು.

ನನಗೆ ಶಕ್ತಿಪ್ರಸಾದ್ ಅವರು ಸುಮಾರು ಒಂದುವರೆ ವರ್ಷಗಳ ಹಿಂದೆ ಈ ಕಥೆ ಹೇಳಿದರು. ತುಂಬಾ ಇಷ್ಟವಾಯಿತು. ಶಕ್ತಿಪ್ರಸಾದ್ ಈ ಮೊದಲು ಬೇರೆ ಭಾಷೆಗಳ ನಿರ್ಮಾಪಕರ ಬಳಿ ಈ ಕಥೆ ಹೇಳಿದ್ದಾರೆ. ಅವರೆಲ್ಲರೂ ಕಥೆ ಮೆಚ್ಚಿಕೊಂಡು ನಿರ್ಮಾಣಕ್ಕೆ ಮುಂದಾಗಿದ್ದರು. ಆದರೆ ಕನ್ನಡದಲ್ಲೇ ಈ ಚಿತ್ರ ಮಾಡಬೇಕೆಂಬ ಉದ್ದೇಶದಿಂದ ಅವರು ಬೇರೆ ಭಾಷೆಗಳಲ್ಲಿ ಈ ಚಿತ್ರ ಮಾಡಲಿಲ್ಲ. ನಂತರ ನಿರ್ಮಾಪಕ ಜಯರಾಮ್ ದೇವಸಮುದ್ರ ಅವರು ಕನ್ನಡದಲ್ಲಿ ನಿರ್ಮಾಣಕ್ಕೆ ಮುಂದಾದರು. ನಾನು ಈ ಚಿತ್ರದಲ್ಲಿ ಈವರೆಗೂ ಮಾಡಿರದ ಪಾತ್ರದಲ್ಲಿ ಅಭಿನಯಿಸುತ್ತಿದ್ದೇನೆ ಎಂದು ನಟಿ ಚೈತ್ರಾ ಜೆ ಆಚಾರ್ ಹೇಳಿದರು.

ಕೆಲವು ವರ್ಷಗಳ ನಂತರ ಮತ್ತೆ ಸಿನಿಮಾದಲ್ಲಿ ನಾನು ಈ ಸಿನಿಮಾದಲ್ಲಿ ನಟಿಸುತ್ತಿದ್ದೇನೆ. ಚೈತ್ರಾ ಜೆ ಆಚಾರ್ ಅವರ ಮೂಲಕ ನನಗೆ ಈ ವಿಷಯ ತಿಳಿಯಿತ್ತು. ಶಕ್ತಿಪ್ರಸಾದ್ ಅವರು ಒಳ್ಳೆಯ ಕಥೆ ಮಾಡಿಕೊಂಡಿದ್ದಾರೆ. ನಾನು ಚೈತ್ರಾ ಜೆ ಆಚಾರ್ ಅವರ ಅಮ್ಮನ ಪಾತ್ರದಲ್ಲಿ ಅಭಿನಯಿಸುತ್ತಿದ್ದೇನೆ ಎಂದರು ಎಂ.ಡಿ.ಪಲ್ಲವಿ.

ನಾನು ಸಾಕಷ್ಟು ಸಿನಿಮಾ ತಂಡಗಳ ಜೊತೆಗೆ ಕೆಲಸ ಮಾಡಿದ್ದೇನೆ. ಆದರೆ ಈ ತಂಡದ ಜೊತೆಗೆ ಕೆಲಸ ಮಾಡಿರುವುದು ಬಹಳ ಖುಷಿಯಾಗಿದೆ. ನನ್ನದು ಈ ಚಿತ್ರದಲ್ಲಿ ಬ್ಯುಸಿನೆಸ್ ಮ್ಯಾನ್ ಪಾತ್ರ ಎಂದು ಹಿರಿಯ ನಟ ಅವಿನಾಶ್ ಹೇಳಿದರು. ಸಂಗೀತ ನಿರ್ದೇಶನದ ಕುರಿತು ಮಿಥುನ್ ಮುಕುಂದನ್ ಹಾಗೂ ಛಾಯಾಗ್ರಹಣದ ಬಗ್ಗೆ ರಿತೇಶ್ ಮಾತನಾಡಿದರು.

TAGGED:chaitra acharLSDsandalwood
Share This Article
Facebook Whatsapp Whatsapp Telegram

Cinema news

trisha krishnan
ಶ್ರೀಮಂತ ಉದ್ಯಮಿಯನ್ನ ಮದ್ವೆಯಾಗಿ, 4 ಮಕ್ಕಳನ್ನು ಬೆಳೆಸುತ್ತಿದ್ದೇನೆ – ಸಿನಿಮಾ ನಿವೃತ್ತಿ ವದಂತಿಗೆ ನಟಿ ತ್ರಿಶಾ ಕೌಂಟರ್
Cinema Latest South cinema Top Stories
Rashmika Mandanna
ಕೊಡಗಿನಲ್ಲಿ ರಶ್ಮಿಕಾ – ವಿಜಯ್‌ ಡಿನ್ನರ್‌ ಪಾರ್ಟಿ; ಕೊಡವ ಶೈಲಿಯ ಭರ್ಜರಿ ಆತಿಥ್ಯ!
Cinema Kodagu Latest Main Post Sandalwood South cinema
Rashmika Mandanna Father
ರಶ್ಮಿಕಾಗೆ ಮದುವೆಯ ಉಡುಗೊರೆಯಾಗಿ ತಮ್ಮ ಮನೆಯನ್ನೇ ನೀಡಿದ ತಂದೆ ಮದನ್‌ ಮಂದಣ್ಣ
Cinema Districts Karnataka Kodagu Latest South cinema Top Stories
DARSHAN RENUKASWAMY
ರೇಣುಕಾಸ್ವಾಮಿ ಕೊಲೆ ಕೇಸ್‌ ಆಧರಿತ ಸಿನಿಮಾ ‘ಬಾಸ್’‌ ರಿಲೀಸ್‌ಗೆ ಕೋರ್ಟ್‌ ತಡೆಯಾಜ್ಞೆ
Bengaluru City Cinema Court Latest Sandalwood Top Stories

You Might Also Like

Donald Trump Strait Of Hormuz
Latest

ಹಾರ್ಮುಜ್‌ ಜಲಸಂಧಿಯಲ್ಲಿ ಟೋಲ್‌ – ಇರಾನ್‌ನೊಂದಿಗೆ ಜಂಟಿ ಉದ್ಯಮ ಬಯಸಿದ ಟ್ರಂಪ್‌

Public TV
By Public TV
3 hours ago
Gujarat Titans 1
Cricket

ಗೆಲ್ಲುವ ಪಂದ್ಯ ಕೈಚೆಲ್ಲಿದ ಡೆಲ್ಲಿ – ಗುಜರಾತ್‌ಗೆ 1 ರನ್‌ ರೋಚಕ ಜಯ 

Public TV
By Public TV
3 hours ago
krs party worker arrest
Latest

ಗೃಹಸಚಿವರನ್ನು ಪ್ರಶ್ನೆ ಮಾಡಿದ ಕೆಆರ್‌ಎಸ್ ಪಕ್ಷದ ‌ಮುಖಂಡ ಬಂಧನ

Public TV
By Public TV
4 hours ago
Bhutnal Lake
Bengaluru City

ಪ್ರವಾಸಕ್ಕೆ ಹೋಗಿದ್ದ ಬೆಂಗ್ಳೂರಿನ ಮೂವರು ಕೆರೆಯಲ್ಲಿ ಮುಳುಗಿ ಸಾವು

Public TV
By Public TV
4 hours ago
Strait of Hormuz Ships
Latest

ಒಂದು ಬ್ಯಾರಲ್‌ ತೈಲಕ್ಕೆ 1 ಡಾಲರ್‌ ತೆರಿಗೆ – ಕ್ರಿಪ್ಟೋ ಕರೆನ್ಸಿಯಲ್ಲಿ ಟ್ಯಾಕ್ಸ್‌ ಪಾವತಿಗೆ ಇರಾನ್‌ ಡಿಮ್ಯಾಂಡ್‌

Public TV
By Public TV
5 hours ago
Sanjay Malhotra
Latest

ರೆಪೋ ದರ ಯಥಾಸ್ಥಿತಿ ಮುಂದುವರಿಸಲು RBI ನಿರ್ಧಾರ

Public TV
By Public TV
5 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?