ಚಿಕ್ಕಮಗಳೂರು: ಮುಖ್ಯಮಂತ್ರಿ (Siddaramaiah) -ಉಪಮುಖ್ಯಮಂತ್ರಿಗಳೇ (D.K Shivakumar) ನಿಮ್ಮ ರಾಜಕೀಯದ ಸ್ವಾರ್ಥ – ತೆವಲಿಗೆ ಕನ್ನಡಿಗರ ಸ್ವಾಭಿಮಾನವನ್ನ ಒತ್ತೆ ಇಟ್ಟು ಸಾಯಿಸಬೇಡಿ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ (C.T. Ravi) ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಪಶ್ಚಿಮ ಬಂಗಾಳ ಪ್ರವಾಸದಲ್ಲಿರುವ ಅವರು, ಕರ್ನಾಟಕದಲ್ಲಿ ಕೇರಳ (Kerala) ದರ್ಬಾರ್ ಮಾಡುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದರು. ಈ ವೇಳೆ ಮುಖ್ಯಮಂತ್ರಿಗಳೇ ನಿಮ್ಮ ರಾಜಕೀಯ ಸ್ವಾರ್ಥಕ್ಕೆ ಕರ್ನಾಟಕ-ಕನ್ನಡಿಗರ ಹಿತಾಸಕ್ತಿ-ಸ್ವಾಭಿಮಾನವನ್ನ ಒತ್ತೆ ಇಡಬೇಡಿ ಎಂದು ಸರ್ಕಾರಕ್ಕೆ ಕಿವಿ ಹಿಂಡಿದ್ದಾರೆ. ಮುಖ್ಯಮಂತ್ರಿಗಳೇ ಎಲ್ಲೋಯ್ತು ನಿಮ್ಮ ಸ್ವಾಭಿಮಾನ. ಸಿಎಂ-ಡಿಸಿಎಂ ಅವರೇ ಕೊಗಿಲು ಗ್ರಾಮ (Kogilu Layout) ಅಕ್ರಮ ಎಂದು ನೀವೇ ಹೇಳಿದ್ರಿ. ಹಾಗಾದ್ರೆ, ಈಗೇಕೆ ಅಕ್ರಮವನ್ನ ಸಮರ್ಥಿಸುತ್ತಿದ್ದೀರಿ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ವೇಣುಗೋಪಾಲ್ ಸರ್ಕಾರದ ಅಧಿಕಾರದಲ್ಲಿ ಹಸ್ತಕ್ಷೇಪ ಮಾಡಿಲ್ಲ, ಸಲಹೆ ನೀಡಿದ್ದಾರೆ: ಡಿಕೆಶಿ
ರಾಜಕೀಯದ ಅನಿವಾರ್ಯತೆಯಲ್ಲಿ ಕೇರಳದ ಅಕ್ರಮವನ್ನ ಸಮರ್ಥಿಸುವ ಅನಿವಾರ್ಯತೆ ನಿಮಗೆ ಇರಬಹುದು. ಆದರೆ, ಕನ್ನಡಿಗರಿಗಿಲ್ಲ. ಕರ್ನಾಟಕಕ್ಕೂ ಇಲ್ಲ. ಅಕ್ರಮ ಎಂದ ಮೇಲೆ ಸಮರ್ಥಿಸುವ ಅವಶ್ಯಕತೆ ಇಲ್ಲ. ಮೊದಲ ದಿನ ತೋರಿಸಿದ ವಿಶ್ವಾಸದ ಮಾತು ಈಗ್ಯಾಕೆ ಮಂಕಾಯ್ತು. ಅಕ್ರಮ ಅಕ್ರಮವೇ, ಅಕ್ರಮವನ್ನ ಬೆಂಬಲಿಸುವ ಅಗತ್ಯವಿಲ್ಲ ಎಂದು ಕಿಡಿಕಾರಿದ್ದಾರೆ.
ನಾವು ಮಾತನಾಡಿದರೆ ರಾಜಕೀಯವಾಗುತ್ತೆ. ನೀವು ಮಾತನಾಡಿದರೆ ಅದು ರಾಜಕಾರಣವಾಗಲ್ಲ. ಕರ್ನಾಟಕದ ಸ್ವಾಭಿಮಾನವನ್ನ ಒತ್ತೆ ಇಡುವ ಅಧಿಕಾರವನ್ನ ಯಾವ ರಾಜಕೀಯ ಪಕ್ಷಕ್ಕೂ ಕೊಟ್ಟಿಲ್ಲ ಎಂದು ನೀವು ಮಾತನಾಡಿ ಎಂದು ಕನ್ನಡ ಪರ ಸಂಘಟನೆಗಳಿಗೆ ಮನವಿ ಮಾಡಿದ್ದಾರೆ. ಕೇರಳದ ಸಂಸದ ಬಂದು ಕರ್ನಾಟಕಕ್ಕೆ ಪಾಠ ಮಾಡವ ಅವಶ್ಕಕತೆ ಇಲ್ಲ. ಮುಖ್ಯಮಂತ್ರಿ-ಉಪಮುಖ್ಯಮಂತ್ರಿಗಳೇ ನೀವು ಕರ್ನಾಟಕದ ಹಿತಾಸಕ್ತಿಯನ್ನು ಕಡೆಗಣಿಸಿ ರಾಜಕಾರಣ ಮಾಡಿದರೆ ಕರ್ನಾಟಕದ ಜನ ಸಹಿಸೋದಿಲ್ಲ. ಕ್ಷಮಿಸೋದಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಬೆಂಗಳೂರು| ಅಕ್ರಮ ಒತ್ತುವರಿ ತೆರವು ಸ್ಥಳಕ್ಕೆ ಕೇರಳ ಎಂಪಿ, ಎಂಎಲ್‌ಎಗಳ ಭೇಟಿ

