ಕಾರವಾರ: ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಇದೇ ಮೊದಲಬಾರಿ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕದಂಬ ನೌಕಾನೆಲೆಗೆ ಆಗಮಿಸಿ ಅರಬ್ಬಿ ಸಮುದ್ರದಲ್ಲಿ ಐಎನ್‌ಎಸ್ ವಾಗ್ಶೀರ್ ಸಬ್‌ಮೆರಿನ್‌ನಲ್ಲಿ (INS Vagsheer Submarine) ಪ್ರಯಾಣಿಸಿದರು. ಈ ಮೂಲಕ ಸಬ್‌ಮೆರಿನ್‌ನಲ್ಲಿ ಪ್ರಯಾಣಿಸಿದ 2 ನೇ ರಾಷ್ಟಪತಿ ಎಂಬ ದಾಖಲೆ ಬರೆದರು.
ಕಾರವಾರದ ಕದಂಬ ನೌಕಾನೆಲೆಗೆ ಆಗಮಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಬರಮಾಡಿಕೊಂಡರು. ಏಷ್ಯದ ಅತಿದೊಡ್ಡ ನೌಕಾನೆಲೆ ಆಗಿರುವ ಕಾರವಾರದ ಕದಂಬ ನೌಕಾನೆಲೆ ಫೇಸ್ -2 ಕಾಮಗಾರಿ ಸಹ ಮುಕ್ತಾಯವಾಗಿದ್ದು ಯುದ್ದ ಹಡಗುಗಳು, ಸಬ್‌ಮೆರಿನ್‌ಗಳ ನಿಲ್ದಾಣ ತಾಣವಾಗಿದೆ. ರಿಪೇರಿ ಯಾರ್ಡ್ ಸಹ ಇದೇ ಭಾಗದಲ್ಲಿ ನಿರ್ಮಾಣವಾಗುತ್ತಿದೆ. ಇದೀಗ ರಾಷ್ಟ್ರಪತಿ ಮುರ್ಮು ಭೇಟಿ ನೀಡಿ ಸಬ್‌ಮೆರಿನ್‌ನಲ್ಲಿ ಒಂದು ತಾಸುಗಳ ಐತಿಹಾಸಿಕ ಪ್ರಯಾಣ ನಡೆಸಿದರು. ಇದನ್ನೂ ಓದಿ: ಡಿ.30ಕ್ಕೆ ಸಿಎಂ ಕೇರಳ ಪ್ರವಾಸ – ಕೆಸಿವಿ ಕಾರ್ಯಕ್ರಮದಲ್ಲಿ ಭಾಗಿ, ಪವರ್ ಫೈಟ್‌ಗೆ ಬ್ರೇಕ್ ಹಾಕೋಕೆ ತಂತ್ರ

ಈ ಸಂದರ್ಭದಲ್ಲಿ ರಿಯಲ್ ಅಡ್ಮಿರಲ್ ದಿನೇಶ್ ಕುಮಾರ್ ತ್ರಿಪಾಟಿ, ಚೀಫ್ ಆಫ್ ನೇವಲ್ ಸ್ಟಾಫ್ ಮತ್ತು ರಿಯರ್ ಅಡ್ಮಿರಲ್ ವಿಕ್ರಂ ಮೆನನ್ ಮತ್ತು ಇತರೆ ಹಿರಿಯ ಅಧಿಕಾರಿಗಳು ಸಾಥ್ ನೀಡಿದರು. ಇದನ್ನೂ ಓದಿ: ಮನ್ ಕಿ ಬಾತ್‌ನಲ್ಲಿ ಕನ್ನಡ ಭಾಷೆ ಬಗ್ಗೆ ಮೋದಿ ಮಾತು; ದುಬೈನಲ್ಲಿ ಕನ್ನಡಾಭಿಮಾನಕ್ಕೆ ಪ್ರಧಾನಿ ಶ್ಲಾಘನೆ

