ಬೆಂಗಳೂರು/ತಿರುವನಂತಪುರಂ: ದೆಹಲಿ ಪ್ರವಾಸದ ಬಳಿಕ ಡಿ.30ಕ್ಕೆ ಸಿಎಂ ಸಿದ್ದರಾಮಯ್ಯ (Siddaramaiah) ಕೇರಳ ಪ್ರವಾಸ ಕೈಗೊಂಡಿದ್ದಾರೆ. ಈ ವೇಳೆ ಕೆ.ಸಿ ವೇಣುಗೋಪಾಲ್ (KC Venugopal) ಅವರ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದು, ಪವರ್ ಫೈಟ್‌ಗೆ ಬ್ರೇಕ್ ಹಾಕೋಕೆ ತಂತ್ರ ಮಾಡ್ತಿದ್ದಾರೆ ಎನ್ನಲಾಗುತ್ತಿದೆ.
ಶನಿವಾರ (ಡಿ.27) ದೆಹಲಿಗೆ ತೆರಳಿದ್ದ ಸಿದ್ದರಾಮಯ್ಯ ಅವರು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಜೊತೆ ಮಾತುಕತೆ ನಡೆಸಿದ್ದರು. ದೆಹಲಿ ಪ್ರವಾಸದ ಬಳಿಕ ಡಿ.30 ಹಾಗೂ ಡಿ.31ರಂದು ಕೇರಳಕ್ಕೆ (Kerala) ತೆರಳಲಿದ್ದಾರೆ. ಈ ವೇಳೆ ನಾರಾಯಣ ಧರ್ಮ ಸಂಘದಿಂದ ಆಯೋಜಿಸಲಾಗಿರುವ 93ನೇ ಶಿವಗಿರಿ ತೀರ್ಥೋದ್ಭವ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದು, ಕೆ.ಸಿ ವೇಣುಗೋಪಾಲ್ ಅವರ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಮನ್ ಕಿ ಬಾತ್‌ನಲ್ಲಿ ಕನ್ನಡ ಭಾಷೆ ಬಗ್ಗೆ ಮೋದಿ ಮಾತು; ದುಬೈನಲ್ಲಿ ಕನ್ನಡಾಭಿಮಾನಕ್ಕೆ ಪ್ರಧಾನಿ ಶ್ಲಾಘನೆ
ದೆಹಲಿ ಪ್ರವಾಸದಲ್ಲಿ ಹೈಕಮಾಂಡ್ ಭೇಟಿ ಬಳಿಕ ಸಿಎಂ ಸಿದ್ದರಾಮಯ್ಯ ಹೊಸ ತಂತ್ರ ಮಾಡುತ್ತಿದ್ದಾರಾ? ಅಥವಾ ಪವರ್ ಶೇರಿಂಗ್ ಫೈಟ್‌ಗೆ ಬ್ರೇಕ್ ಹಾಕೋಕೆ ಯತ್ನಿಸುತ್ತಿದ್ದಾರಾ? ಎಂಬ ಪ್ರಶ್ನೆ ಮೂಡಿದೆ. ಇದೆಲ್ಲರದ ಮಧ್ಯೆ ಸಿಎಂ ಆಕ್ಟೀವ್ ಆಗಿರೋದು ಎದ್ದು ಕಾಣ್ತಿದೆ.
ಇತ್ತೀಚಿಗಷ್ಟೇ ಡಿ.3ರಂದು ಮಂಗಳೂರಿನಲ್ಲಿ ನಡೆದ ಗುರುಗಾಂಧಿ ಕಾರ್ಯಕ್ರಮದಲ್ಲಿ ಕೆ.ಸಿ ವೇಣುಗೋಪಾಲ್ ಅವರೊಂದಿಗೆ ಸಿಎಂ ಸಿದ್ದರಾಮಯ್ಯ ವೇದಿಕೆ ಹಂಚಿಕೊಂಡಿದ್ದರು.ಇದನ್ನೂ ಓದಿ: ಮೆಟ್ರೋದಲ್ಲಿ ಮೊಬೈಲ್ ಸೌಂಡ್ ಜಾಸ್ತಿ ಇಡೋದು, ತಿಂಡಿ ತಿನ್ನೋದು ಮಾಡಿದ್ರೆ ಬೀಳುತ್ತೆ ದಂಡ

