ಆನೇಕಲ್: ರಸ್ತೆಬದಿ ನಡೆದುಕೊಂಡು ಹೋಗ್ತಿದ್ದ ಪಾದಚಾರಿಗೆ ಸಿಮೆಂಟ್ ಮಿಕ್ಸರ್ ಲಾರಿ ಗುದ್ದಿದ ಪರಿಣಾಮ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಆನೇಕಲ್ (Anekal) ತಾಲೂಕಿನ ಸಿಂಗೇನ ಅಗ್ರಹಾರ ಗ್ರಾಮದಲ್ಲಿ ನಡೆದಿದೆ.
ಸಿಂಗೇನ ಅಗ್ರಹಾರ ನಿವಾಸಿ ನಾರಾಯಣಸ್ವಾಮಿ ಮೃತ ದುರ್ದೈವಿ.ಇದನ್ನೂ ಓದಿ: ಪ್ಯಾರಾಗ್ಲೈಡರ್ ಟೇಕಾಫ್ ಆದ ಕೆಲಹೊತ್ತಲ್ಲೇ ಅಪಘಾತ; ಪೈಲಟ್ ಸಾವು, ಪ್ರವಾಸಿಗನಿಗೆ ಗಾಯ
ಶನಿವಾರ (ಡಿ.27) ಸಂಜೆ 7 ಗಂಟೆ ಸುಮಾರಿಗೆ ಮೃತ ವ್ಯಕ್ತಿ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ವೇಗವಾಗಿ ಬಂದ ಸಿಮೆಂಟ್ ಮಿಕ್ಸರ್ ಲಾರಿ ವ್ಯಕ್ತಿಗೆ ಗುದ್ದಿದೆ. ಪರಿಣಾಮ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಅಪಘಾತವಾದರೂ ಲಾರಿಯನ್ನು ನಿಲ್ಲಿಸದೇ ಚಾಲಕ ಹಾಗೆ ತೆರಳಿದ್ದಾನೆ. ಅಪಘಾತದ ದೃಶ್ಯ ಸ್ಥಳದಲ್ಲೇ ಇದ್ದ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು, ಈ ಸಂಬಂಧ ಅತ್ತಿಬೆಲೆ ಪೊಲೀಸ್ (Attibele Police) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಇದನ್ನೂ ಓದಿ: ಲವ್-ಸೆಕ್ಸ್ ದೋಖಾ; ಯುವತಿ ಜೊತೆ ಸಲುಗೆ ಬೆಳೆಸಿ 37 ಲಕ್ಷ ವಂಚನೆ – ಆರೋಪಿ ಬಂಧನ

