ಬಿಗ್ ಬಾಸ್ ಮನೆಯಿಂದ ಸೂರಜ್ ಹೊರನಡೆದಿದ್ದಾರೆ. ಬಿಗ್ ಬಾಸ್ (Bigg Boss) ವಾರಾಂತ್ಯದಲ್ಲಿ ಡಬಲ್ ಎಲಿಮಿನೇಷನ್ ಶಾಕ್ ಕೊಟ್ಟ ಬೆನ್ನಲ್ಲೇ ಶನಿವಾರ ಸೂರಜ್ ಸಿಂಗ್ (Suraj Singh) ಮನೆಯಿಂದ ಔಟ್ ಆದರು.
ಈ ವಾರ ಕಿಚ್ಚನ ಅನುಪಸ್ಥಿತಿಯಲ್ಲಿ ಎಲಿಮಿನೇಷನ್ ನಡೆದಿದೆ. ಧನುಷ್, ಧ್ರುವಂತ್, ಸೂರಜ್, ರಾಷಿಕಾ, ರಕ್ಷಿತಾ, ಮಾಳು, ಸ್ಪಂದನಾ ಎಲಿಮಿನೇಷನ್ ರೌಂಡ್‌ನಲ್ಲಿದ್ದರು. ಮೊದಲ ಸುತ್ತಿನಲ್ಲಿ ಧ್ರುವಂತ್, ಸೂರಜ್, ರಾಷಿಕಾ, ಸ್ಪಂದನಾರನ್ನು ಎಲಿಮಿನೇಷನ್ ಅಗ್ನಿಪರೀಕ್ಷೆಗೆ ಒಳಪಡಿಸಲಾಯಿತು. ಅಂತಿಮವಾಗಿ ಸೂರಜ್ ಮನೆಯಿಂದ ಹೊರ ಬಂದಿದ್ದಾರೆ. ಅಚ್ಚರಿ ಎಂಬಂತೆ ಅವರನ್ನು ಹೊರ ಕಳುಹಿಸಲಾಗಿದೆ. ಇದನ್ನೂ ಓದಿ: Bigg Boss: ಈ ವಾರ ಡಬಲ್ ಎಲಿಮಿನೇಷನ್ – ಶಾಕ್ ಕೊಟ್ಟ ಬಿಗ್ ಬಾಸ್
ಬಿಗ್ ಬಾಸ್ ಮನೆಗೆ ಸೂರಜ್ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟಿದ್ದರು. ತಮ್ಮ ಅಟ್ರ್ಯಾಕ್ಟಿವ್ ಜಿಮ್ ಬಾಡಿ ಮೂಲಕ ಮನೆಯ ಸುಂದರಿಯರ ಮನಗೆದ್ದಿದ್ದರು. ಮನೆಯಲ್ಲಿ ರಾಷಿಕಾ ಜೊತೆ ಆತ್ಮೀಯತೆ ಬೆಳೆಸಿಕೊಂಡಿದ್ದರು. ಹಲವು ಟಾಸ್ಕ್‌ಗಳಲ್ಲೂ ಉತ್ತಮ ಪ್ರದರ್ಶನ ತೋರಿದ್ದರು. ಅಡುಗೆ ಮನೆಯಲ್ಲಿ ರುಚಿಕರ ಅಡುಗೆಗಳನ್ನು ಮಾಡುತ್ತಿದ್ದರು.
ಮನೆಯಲ್ಲಿ ಸೌಮ್ಯ, ಮೃದು ಸ್ವಭಾವದವರಾಗಿದ್ದ ಸೂರಜ್ ಬರಬರುತ್ತ ಸ್ವಲ್ಪ ಡಲ್ ಆದಂತೆ ಕಂಡರು. ಅಡುಗೆ ಮನೆಗಷ್ಟೇ ಸೀಮಿತ ಆಗಿದ್ದಾರೆಂಬ ಮಾತುಗಳು ಅವರ ಮೇಲೆ ಕೇಳಿಬರುತ್ತಿತ್ತು. ಆದರೆ, ಈ ವಾರ ಕಡಿಮೆ ವೋಟ್ಸ್ ಕಾರಣಕ್ಕೆ ಸೂರಜ್ ಎಲಿಮಿನೇಟ್ ಆಗಿದ್ದಾರೆ. ಇದನ್ನೂ ಓದಿ: ಅಶ್ವಿನಿ ವಿರುದ್ಧ ಗೆದ್ದು ಕ್ಯಾಪ್ಟನ್ ಆದ ಗಿಲ್ಲಿ; ಏನ್ ಖಡಕ್ ಎಂಟ್ರಿ ಗುರು


