ಗದಗ: ಮಕ್ಕಳ ಕಳ್ಳರು(Child Thieves) ಎಂದು ಅನುಮಾನಿಸಿ ಗ್ರಾಮಕ್ಕೆ ಬಂದಿದ್ದ ಮಹಿಳೆಯರನ್ನ ಥಳಿಸಿರುವ ಘಟನೆ ಮುಂಡರಗಿ(Mundargi) ತಾಲೂಕಿನ ಡೋಣಿ ಗ್ರಾಮದಲ್ಲಿ ನಡೆದ ಘಟನೆ.
ಇಬ್ಬರು ಮಹಿಳೆಯರು ಸ್ಟೇಷನರಿ ಚಿಲ್ಲರೆ ವಸ್ತುಗಳು ಮಾರಾಟ ಮಾಡಲು ಬಂದಿದ್ದರು. ಅದರ ಜೊತೆಗೆ ಆ್ಯಂಟಿ ಬಯಾಟಿಕ್ ಹಾಗೂ ಪೇನ್ ಕಿಲ್ಲರ್ ಆಯುರ್ವೇದಿಕ್ ಪೌಡರ್ ಮಾರಾಟ ಮಾಡಲು ಮುಂದಾಗಿದ್ದರು.
ವಸ್ತುಗಳ ಮಾರಾಟ ನೆಪದಲ್ಲಿ ಮಕ್ಕಳ ಕಳ್ಳತನಕ್ಕೆ ಹೊಂಚು ಹಾಕಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿ ಬಸ್ ನಿಲ್ದಾಣದಲ್ಲಿ ಮಹಿಳೆಯರನ್ನು ಕೂಡಿಹಾಕಿ ತರಾಟೆ ತೆಗೆದುಕೊಂಡು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಮುಂಡರಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ಬಾಂಗ್ಲಾದೇಶದ ಗಾಯಕನ ಸಂಗೀತ ಕಛೇರಿ ರದ್ದು; ಸ್ಥಳದಲ್ಲಿ ಗುಂಪು ದಾಳಿ – 25 ಮಂದಿಗೆ ಗಾಯ

