ಯಶ್ (Yash) ನಟನೆಯ `ಟಾಕ್ಸಿಕ್’ ಚಿತ್ರ ರಿಲೀಸ್‍ಗೆ ಮಾರ್ಚ್ 19 ರಂದು ಡೇಟ್ ಫಿಕ್ಸ್ ಆಗಿದೆ. ಇದು ಪ್ಯಾನ್‍ವರ್ಲ್ಡ್ ಚಿತ್ರವಾಗಿದ್ದು, ಈ ಚಿತ್ರಕ್ಕೆ ಎದುರಾಳಿಯಾಗಿ ಬರಲು ಬೇರೆ ದೊಡ್ಡ ಬಜೆಟ್ ಸಿನಿಮಾಗಳು ಮನಸ್ಸು ಮಾಡೋದು ಅನುಮಾನ ಎಂದೇ ಭಾವಿಸಲಾಗಿತ್ತು. ಆದರೆ ಇದೀಗ `ಟಾಕ್ಸಿಕ್’ ಬಿಡುಗಡೆ ದಿನವೇ ತೆರೆಕಾಣಲು ಇನ್ನೊಂದು ದೈತ್ಯ ಸಿನಿಮಾ ಸಜ್ಜಾಗಿದೆ. ಅದುವೇ ದುರಂಧರ್ 2.
ದುರಂಧರ್ 21 ದಿನಕ್ಕೆ 1006.7 ಕೋಟಿ ರೂ. ವರ್ಲ್ಡ್‌ವೈಡ್ ಕಲೆಕ್ಷನ್ ಮಾಡಿದೆ. ಭಾರತದ ಕಲೆಕ್ಷನ್ ಅಷ್ಟೇ 688.80 ಕೋಟಿ ರೂ. ಗಳಿಕೆ ಕಂಡಿದೆ. ಈ ಬಿಸಿಯಲ್ಲೇ ದುರಂಧರ್ ತಂಡ ಮುಂದಿನ ಭಾಗದ ಘೋಷಣೆ ಮಾಡಿದೆ. ದುರಂಧರ್ ಭಾಗ 2 ಬರುವ ಸುಳಿವನ್ನ ಚಿತ್ರತಂಡ ಈಗಾಗ್ಲೇ ನೀಡಿದೆ. ಆದರೆ ದಿನಾಂಕ ಘೋಷಿಸಿರಲಿಲ್ಲ. ಇದೀಗ ದಿನಾಂಕ ಸಹ ಘೋಷಣೆ ಆಗಿದೆ. ಇದನ್ನೂ ಓದಿ: ವಿಜಯಲಕ್ಷ್ಮಿ ಬಗ್ಗೆ ಅಶ್ಲೀಲ ಕಾಮೆಂಟ್ – ಆರೋಪಿಗಳ ಪತ್ತೆಗೆ ಸಿಸಿಬಿ ಪೊಲೀಸರಿಂದ 3 ವಿಶೇಷ ತಂಡ
ಮಾರ್ಚ್ 19 ಯುಗಾದಿ ಹಬ್ಬದ ರಜಾ ದಿನಗಳ ಸಂದರ್ಭ ಆಗಿರೋದ್ರಿಂದ ಸಿನಿಮಾಗಳಿಗೆ ಸುಗ್ಗಿ ಕಾಲ. ಹೀಗಾಗಿ ಅದೇ ದಿನವನ್ನು ದುರಂಧರ್ ಕೂಡ ಟಾರ್ಗೆಟ್ ಮಾಡಿಕೊಂಡಿರುವ ಸುಳಿವು ಕಂಡುಬರುತ್ತಿದೆ. ಅಂದಹಾಗೆ ಈಗ ರಿಲೀಸ್ ಆಗಿರುವ ದುರಂಧರ್ ಹಿಂದಿ ಭಾಷೆಯಲ್ಲಿ ಮಾತ್ರ ರಿಲೀಸ್ ಆಗಿತ್ತು. ಮುಂದಿನ ಭಾಗದಲ್ಲಿ ಬರ್ತಿರುವ ದುರಂಧರ್ ಭರ್ತಿ 5 ಭಾಷೆಯಲ್ಲಿ ತೆರೆ ಕಾಣುವ ಘೋಷಣೆ ಮಾಡಿಕೊಂಡಿದೆ. ಅಲ್ಲಿಗೆ ಟಾಕ್ಸಿಕ್ ಹಾಗೂ ದುರಂಧರ್2 ಚಿತ್ರಗಳ ಭರ್ಜರಿ ಸ್ಕ್ರೀನ್‍ವಾರ್ ಗ್ಯಾರಂಟಿ ಎಂಬುದು ಖಾತ್ರಿಯಾಗಿದೆ. ಇದನ್ನೂ ಓದಿ: ಪೈರಸಿ ವಿರುದ್ಧ ’45’ ಸಿನಿಮಾದ ನಿರ್ಮಾಪಕ ರಮೇಶ್ ರೆಡ್ಡಿ ಆಕ್ರೋಶ

