ಯಾವ ಫ್ಯಾನ್ ವಾರ್ ಇಲ್ಲ, ನೂರು ಜನದಲ್ಲಿ 10 ಜನ ಕಾಲೆಳೆಯೋರು ಇದ್ದೇ ಇರ್ತಾರೆ. 90 ಜನ ಸಪೋರ್ಟ್ ಮಾಡ್ತಿದಾರೆ, ಅವ್ರಿಗೋಸ್ಕರ ಸಿನಿಮಾ ಮಾಡ್ಕೊಂಡು ಹೋಗ್ಬೇಕು. ದರ್ಶನ್ ಹಾಗೂ ಸುದೀಪ್ ಇಬ್ಬರೂ ಒಬ್ಬರಿಗೊಬ್ಬರು ಪ್ರೀತಿಯಿಂದ ಇದಾರೆ. ಅವ್ರ ಇನ್ ಸೈಡ್ ಫೀಲಿಂಗ್ಸ್ ಏನಿದೆ ಗೊತ್ತಿಲ್ಲ ಎಂದು ನಿರ್ದೇಶಕ ಪ್ರೇಮ್ ಹೇಳಿದ್ದಾರೆ.
ಸ್ಯಾಂಡಲ್‌ವುಡ್‌ನಲ್ಲಿ ಜೋರಾದ ಫ್ಯಾನ್ಸ್ ವಾರ್ ಬಗ್ಗೆ ʼಪಬ್ಲಿಕ್ ಟಿವಿʼ ಜೊತೆ ಮಾತನಾಡಿದ ಅವರು, ಸ್ಟಾರ್ ವಾರ್ ಏನಿಲ್ಲ.. ಸಿನಿಮಾ ಮೇಲೆ ಗಮನಹರಿಸೋಣ. ವಿಜಯಲಕ್ಷ್ಮಿ ಯಾವ ದೃಷ್ಟಿಲಿ ಮಾತಾಡಿದ್ರೋ ಗೊತ್ತಿಲ್ಲ. ಇಬ್ಬರು ಮಧ್ಯೆ ವೈಮನಸ್ಸಿಲ್ಲ ಎಂದಿದ್ದಾರೆ ಪ್ರೇಮ್. ಪುರಾಣ ಕಾಲದಿಂದಲೂ ನೋಡಿದ್ದೀವಿ, ಹುಳಿ ಹಿಂಡೋನು ಒಬ್ಬ ಇದ್ದೇ ಇರ್ತಾನೆ. ಅಂತವ್ರಿಗೆ ಅವಕಾಶ ಮಾಡಿಕೊಡ್ಬೇಡಿ. ನಮ್ಗಳಿಗೆ ಟ್ರೋಲ್ ಮಾಡ್ತಾರೆ, ಕಾಲೆಳಿತಾರೆ, ಅದೆಲ್ಲ ಬದಿಗಿಟ್ಟು ಮುಂದೆ ಹೋಗ್ತಾ ಇರ್ಬೇಕು ಎಂದಿದ್ದಾರೆ ನಿರ್ದೇಶಕ ಪ್ರೇಮ್.
ಇನ್ನು ತಮ್ಮ ಕೆಡಿ ಸಿನಿಮಾದ ಬಗ್ಗೆ ಅಪ್ಡೇಟ್ ಕೊಟ್ಟಿರುವ ಪ್ರೇಮ್, ಇದೇ ಡಿ.26 ರಂದು ಕೆಡಿ ಸಿನಿಮಾದ ಸ್ಪೆಷಲ್ ಸಾಂಗ್ ರಿಲೀಸ್ ಮಾಡಲು ಪ್ಲ್ಯಾನ್ ಮಾಡಿದ್ದಾರೆ. ಅದ್ರ ಜೊತೆಗೆ ಕೆಡಿ ಸಿನಿಮಾದ ರಿಲೀಸ್ ಡೇಟ್ ಕೂಡಾ ಅನೌನ್ಸ್ ಮಾಡಲಿದ್ದಾರಂತೆ ಪ್ರೇಮ್.

