ರಾಯಚೂರು: ನಟ, ನಿರ್ದೇಶಕ ರಿಷಬ್ ಶೆಟ್ಟಿ (Rishab Shetty) ಅವರಿಂದು (ಡಿ.24) ಕುಟುಂಬ ಸಮೇತರಾಗಿ ಮಂತ್ರಾಲಯಕ್ಕೆ (Mantralaya) ಭೇಟಿ ನೀಡಿ, ರಾಯರ ದರ್ಶನ ಪಡೆದಿದ್ದಾರೆ.
ರಾಯಚೂರಿನ ಮಂತ್ರಾಲಯಕ್ಕೆ ಆಗಮಿಸಿ, ಗುರು ರಾಘವೇಂದ್ರ ಸ್ವಾಮಿ ದರ್ಶನ ಪಡೆದಿದ್ದಾರೆ. ಪತ್ನಿ ಪ್ರಗತಿ ಹಾಗೂ ತಮ್ಮ ಇಬ್ಬರು ಮಕ್ಕಳೊಂದಿಗೆ ಆಗಮಿಸಿ ಆಶೀರ್ವಾದ ಪಡೆದುಕೊಂಡಿದ್ದಾರೆ. ಬಳಿಕ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮಿಯವರಿಂದ ಆಶೀರ್ವಚನ ಪಡೆದುಕೊಂಡಿದ್ದಾರೆ. ರಿಶಬ್ ಶೆಟ್ಟಿ ದಂಪತಿಗೆ ಫಲ ಮಂತ್ರಾಕ್ಷತೆ ನೀಡಿ, ಶ್ರೀಗಳು ಆಶೀರ್ವದಿಸಿದ್ದಾರೆ.ಇದನ್ನೂ ಓದಿ: ಬಲೇ..ಬಲೇ Guys ಮತ್ತೆ ಶುರುವಾಯ್ತು ವ್ಲಾಗಿಂಗ್ – ಬಿಗ್‌ಬಾಸ್ ಮನೇಲಿ ಫಿಶ್ ಫ್ರೈ ರೆಸಿಪಿ ಹೇಳಿಕೊಟ್ಟ ರಕ್ಷಿತಾ
ಆನಂತರ ಮಂಚಾಲಮ್ಮ ದೇವಿ ದರ್ಶನ ಪಡೆದು ರಾಯರ ವೃಂದಾವನಕ್ಕೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಮಂಗಳವಾರ (ಡಿ.23) ತಿರುಪತಿ ತಿರುಮಲ ಸನ್ನಿಧಾನಕ್ಕೆ ಭೇಟಿ ನೀಡಿದ್ದರು.

